ಕರ್ನಾಟಕ

karnataka

ETV Bharat / sitara

ಚಿತ್ರಮಂದಿರಗಳಿಗೆ ಬಂದೇ ಬಿಡ್ತು ಹೊಸ ವಿನ್ಯಾಸದ ಲೈಫ್​​​​​ಲೈನ್ ಮೆಡಿಕ್ಸ್​​ ಸುರಂಗ - Automatic Life Line Medics Tunnel

ಕೊರೊನಾ ತಡೆಗೆ ನಿರಂತರ ಸಂಶೋಧನೆ ನಡೆಯುತ್ತಲೇ ಇದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಲೈಫ್‌ಲೈನ್ ಮೆಡಿಕ್ಸ್ ಹೊಸ ತಂತ್ರಜ್ಞಾನವುಳ್ಳ ಮಾನವರಹಿತ ಸುರಂಗವನ್ನು ಸಂಶೋಧಿಸಿದೆ. ಈಗಾಗಲೇ ಅನೇಕ ಕಡೆ ಇದನ್ನು ಅಳವಡಿಸಿಕೊಳ್ಳಲಾಗಿದೆ.

New tunnel to prevent corona
ಲೈಫ್​​​​​ಲೈನ್ ಮೆಡಿಕ್ಸ್​​ ಸುರಂಗ

By

Published : Jun 16, 2020, 12:21 PM IST

Updated : Jun 16, 2020, 12:28 PM IST

ಸುಮಾರು 3 ತಿಂಗಳಿನಿಂದ ಥಿಯೇಟರ್​​​ಗಳು ಮುಚ್ಚಿವೆ. ಚಿತ್ರರಂಗ ತೆರೆದರೆ ಅದರಿಂದ ಕೂಡಾ ಕೊರೊನಾ ಹರಡುವ ಸಾಧ್ಯತೆ ಇರುವುದರಿಂದ ಥಿಯೇಟರ್​​​​​ಗಳನ್ನು ತೆರೆಯುವುದರ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಆದರೆ ಇದೀಗ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ವಿನ್ಯಾಸದ ಸುರಂಗವನ್ನು ಸಿದ್ಧ ಮಾಡಲಾಗಿದೆ.

ಲೈಫ್​​​​​ಲೈನ್ ಮೆಡಿಕ್ಸ್​​ ಸುರಂಗ

ಇದೊಂದು ಸಂಪೂರ್ಣ ಸ್ವಯಂಚಾಲಿತ ಸೋಂಕು ನಿವಾರಕ ಸುರಂಗವಾಗಿದ್ದು, ಬಹಳ ಪ್ರಯೋಜನಕಾರಿಯಾಗಿದೆ. ಮಾನವ ರಹಿತ ಕೆಲಸ ಮಾಡುವಂತಹ ವಿನ್ಯಾಸ ಹೊಂದಿದೆ. ಟನಲ್ ಒಳಗೆ ಕಾಲಿಡುತ್ತಿದ್ದಂತೆಯೇ ವ್ಯಕ್ತಿಯನ್ನು ಸ್ಯಾನಿಟೈಸ್ ಮಾಡುವುದಲ್ಲದೇ, ಪ್ರತಿ ವ್ಯಕ್ತಿಯ ತಾಪಮಾನವನ್ನೂ ಕೂಡಾ ಅದು ಅಳೆದು ದಾಖಲಿಸಲಿದೆ. ಕೈಗಳನ್ನು ಶುಚಿಗೊಳಿಸಿಕೊಳ್ಳಲು ಕೂಡಾ ಸ್ವಯಂಚಾಲಿತ ಸ್ಯಾನಿಟೈಸರನ್ನು ಇದು ಹೊಂದಿದೆ. ವ್ಯಕ್ತಿಯು ಹೆಲ್ಮೆಟ್, ಜಾಕೆಟ್, ಚೀಲ ಅಥವಾ ಮಾಸ್ಕ್ ಧರಿಸಿದ್ದರೂ ಅಲ್ಟ್ರಾ ವೈಲೆಟ್ ಬಾಕ್ಸ್ ಮೂಲಕ ಸ್ಯಾನಿಟೈಸ್ ಮಾಡಲಾಗುತ್ತದೆ. ಈ ಟನಲ್‌ನಿಂದ ಆಚೆ ಬರುತ್ತಿದ್ದಂತೆಯೇ ವ್ಯಕ್ತಿಯನ್ನು ಸಂಪೂರ್ಣ ಸೋಂಕು ರಹಿತಗೊಳಿಸುವ ತಂತ್ರಜ್ಞಾನವನ್ನು ಇದು ಹೊಂದಿದೆ.

ಹೊಸ ವಿನ್ಯಾಸದ ಸುರಂಗ

ಸಂಪೂರ್ಣವಾಗಿ ನೈಸರ್ಗಿಕ ಮತ್ತು ವಿಷಮುಕ್ತ ರಾಸಾಯನಿಕ ಅಂಶಗಳಿಂದ ತಯಾರಿಸಿರುವುದೇ ಇದರ ಮತ್ತೊಂದು ವಿಶೇಷ. ಕೊರೊನಾ ವೈರಸ್ ಪ್ರಕರಣಗಳಲ್ಲಿ ಭಾರತ ಈಗ ನಾಲ್ಕನೇ ಸ್ಥಾನ ತಲುಪಿದೆ. ದಿನದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲೈಫ್‌ಲೈನ್ ಮೆಡಿಕ್ಸ್ ಒಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಈ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವ ಈ ಲೈಫ್‌ಲೈನ್ ಮೆಡಿಕ್ಸ್ ಉತ್ಪನ್ನವು ಹೊಸ ಆಲೋಚನೆಯ ಪರಿಣಾಮಕಾರಿ ಆವಿಷ್ಕಾರ ಎಂದು ಹೇಳಲು ಹೆಮ್ಮೆ ಅನಿಸುತ್ತದೆ.

ಬೆಂಗಳೂರಿನಲ್ಲಿ ಆರಂಭ ಆಗಿರುವ ಈ ಲೈಫ್‌ಲೈನ್ ಮೆಡಿಕ್ಸ್ ಸಂಸ್ಥಾಪಕರಾದ ಶ್ರೀ ರಾಜಾರಾಮ್ ಅವರು ಎಂಐಟಿ ಪದವೀಧರ. ಹೊಸ ವಿನ್ಯಾಸ, ಐಡಿಯಾ ವಿಭಾಗದಲ್ಲಿ ಅವರು ನೈಪುಣ್ಯತೆ ಹೊಂದಿದ್ದಾರೆ. ಕೊಲಂಬಿಯಾ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲೂ ಅಭ್ಯಾಸ ಮಾಡಿದ್ದಾರೆ. ಕೊರೊನಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾನಾ ಪ್ರಯೋಗಗಳು ನಡೆದವು. ಈ ಹೊತ್ತಿನಲ್ಲಿ ಬೆಂಗಳೂರು ಲೈಫ್​​​ಲೈನ್​​​ ಕೂಡಾ ಸಾಕಷ್ಟು ಸಂಶೋಧನೆ ಮಾಡಿದೆ. ಇದರ ಫಲವಾಗಿ ಹೊರಬಂದದ್ದೇ ಲೈಫ್​​ಲೈನ್​ ಮೆಡಿಕ್ಸ್ ಟನಲ್.

ಮಾನವ ರಹಿತ ಕೆಲಸ ಮಾಡುವಂತಹ ವಿನ್ಯಾಸ

ಪ್ರಮಾಣಿಕೃತ ಮತ್ತು ಗುಣಮಟ್ಟದ ಭರವಸೆ

ಲೈಫ್​​ಲೈನ್​ ಮೆಡಿಕ್ಸ್ ಟನಲ್ ಯುಐಎಸ್‌ಓ, ಜಿಎಂಪಿ ಮತ್ತು ಸಿಇಗಳಿಂದ ಪ್ರಮಾಣಿಕೃತಗೊಂಡಿದ್ದು, ಸಿಕ್ಸ್ ಸಿಗ್ಮಾ ವಿಧಾನದಲ್ಲೂ ಇದು ಕೆಲಸ ಮಾಡುತ್ತದೆ. ಹೀಗಾಗಿ ಶೇಕಡಾ 95 ರಷ್ಟು ವೈರಸ್‌ಗಳು ನಾಶವಾಗುತ್ತವೆ. ಸರಳ ಮತ್ತು ಉತ್ತಮ ಗುಣಮಟ್ಟದ ಫಲಿತಾಂಶವನ್ನು ಇದು ನೀಡಲಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಇದನ್ನು ತಯಾರಿಸಲಾಗಿದೆ.

ಉಪಯೋಗ ಮತ್ತು ಪ್ರಯೋಜನ

ಈಗಾಗಲೇ ಹಂತಹಂತವಾಗಿ ಲಾಕ್‌ಡೌನ್ ತೆರೆವುಗೊಳಿಸಲಾಗುತ್ತಿದೆ. ವೈರಸ್ ಕೂಡಾ ಹೆಚ್ಚುಹೆಚ್ಚು ಹರಡುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮಗಳನ್ನು ತಗೆದುಕೊಳ್ಳುವಂತೆ ಸರ್ಕಾರವೇ ಮಾರ್ಗಸೂಚಿಯನ್ನು ನೀಡಿದೆ. ಹಾಗಾಗಿ ಮಾಲ್, ಚಿತ್ರಮಂದಿರಗಳು ಮತ್ತು ಸಾರ್ವಜನಿಕ ಸಾರಿಗೆ ಹೀಗೆ ಸೋಂಕು ಹರಡಬಲ್ಲ ಸ್ಥಳಗಳಲ್ಲಿ ಈ ಟನಲ್ ಅಳವಡಿಸಬಹುದು. ವೈದ್ಯಕೀಯ ಸಿಬ್ಬಂದಿಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪಿಪಿಇ ಕಿಟ್‌ಗಳನ್ನು ಬಳಸುತ್ತಾರೆ. ಆದರೆ, ಸಾರ್ವಜನಿಕರಿಗೆ ಅದರ ಬಳಕೆ ಕಷ್ಟ. ತಮ್ಮನ್ನು ತಾವು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಲು ಲೈಫ್​​​​​​​ಲೈನ್ ಮೆಡಿಕ್ಸ್ ಟನಲ್ ಅಳವಡಿಕೆ ಅಗತ್ಯ.

ಕೈಗೆಟಕುವ ಬೆಲೆಯಲ್ಲಿ ದೊರೆಯಲಿದೆ

ಕೈಗೆಟಕುವ ಬೆಲೆ

ಎಲ್ಲರಿಗೂ ಸುಲಭವಾಗಿ ಸಿಗುವಂತೆ ದರವನ್ನು ನಿಗದಿ ಮಾಡಲಾಗಿದೆ. ವಿಭಿನ್ನ ಗಾತ್ರಗಳಲ್ಲಿ ಈ ಟನಲ್ ಲಭ್ಯವಿದೆ. ಅಗತ್ಯತೆಗೆ ಅನುಗುಣವಾಗಿ ಗಾತ್ರ ಮತ್ತು ವಿನ್ಯಾಸ ಮಾಡಲಾಗಿದೆ. ಗಾತ್ರಗಳಿಗೆ ಅನುಗುಣವಾಗಿ ದರವನ್ನು ನಿಗದಿಪಡಿಸಿಸಿರುವುದರಿಂದ, ಕೈಗೆಟುಕುವ ಬೆಲೆಯಲ್ಲಿದೆ. ಸಣ್ಣ ಸಣ್ಣ ವ್ಯಾಪಾರಿಗಳಿಂದ ದೊಡ್ಡ ಕಂಪನಿಗಳು ಇದನ್ನು ಅಳವಡಿಸಿಕೊಳ್ಳಬಹುದು.

Last Updated : Jun 16, 2020, 12:28 PM IST

ABOUT THE AUTHOR

...view details