ಕರ್ನಾಟಕ

karnataka

ETV Bharat / sitara

'ಲಕ್ಷ್ಮಿ ಬಾಂಬ್​': ತೃತೀಯ ಲಿಂಗಿ ಪಾತ್ರಕ್ಕೆ ಜೀವ ತುಂಬಿದ ಅಕ್ಷಯ್​ ಕುಮಾರ್​ - ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿದ ಅಕ್ಷಯ್​ ಕುಮಾರ್​

ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಅಕ್ಷಯ್​ ಕುಮಾರ್​ ತನ್ನ ಮುಂದಿನ ಚಿತ್ರ 'ಲಕ್ಷ್ಮಿ ಬಾಂಬ್' ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮೂರು ದಶಕಗಳ ವೃತ್ತಿ ಜೀವನದಲ್ಲಿ ಅತ್ಯಂತ ಸವಾಲಿನ ಪಾತ್ರ ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ.

Laxmmi Bomb my most mentally intense film: Akshay Kumar on playing transgender
ಲಕ್ಷಿ ಬಾಂಬ್

By

Published : Jun 30, 2020, 8:50 AM IST

ಮುಂಬೈ : ಮುಂಬರುವ ಚಿತ್ರ 'ಲಕ್ಷ್ಮಿ ಬಾಂಬ್'​ನಲ್ಲಿ ಅತ್ಯಂತ ಸವಾಲಿನ ತೃತೀಯ ಲಿಂಗಿಯ ಪಾತ್ರವನ್ನು ನಿರ್ವಹಿಸಿದ್ದೇನೆ. ಇದರಿಂದ ಯಾವುದೇ ಸಮುದಾಯದ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಮೂರು ದಶಕಗಳ ವೃತ್ತಿ ಜೀವನದ ಬಳಿಕವೂ ಅತ್ಯಂತ ಜಾಗರೂಕತೆಯಿಂದ ಪಾತ್ರಕ್ಕೆ ಜೀವ ತುಂಬಿದ್ದೇನೆ ಎಂದು ನಟ ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ಇದು ಅತ್ಯಂತ ಮಾನಸಿಕವಾಗಿ ತೀವ್ರವಾದ ಮತ್ತು ತುಂಬಾ ಕಠಿಣವಾದ ಪಾತ್ರವಾಗಿದ್ದು. ಈ ಮೊದಲು ಈ ರೀತಿಯ ಅನುಭವ ಆಗಿಲ್ಲ. ಇದರ ಎಲ್ಲಾ ಕ್ರೆಡಿಟ್ ನಿರ್ದೇಶಕ ಲಾರೆನ್ಸ್ ಸರ್ ಅವರಿಗೆ ಸಲ್ಲುತ್ತದೆ. ಅವರು ನನ್ನನ್ನು ಹೊಸ ರೀತಿಯಲ್ಲಿ ಪರಿಚಯಿಸಿದರು ಎಂದು ಅಕ್ಕಿ ತಿಳಿಸಿದ್ದಾರೆ.

ಲಕ್ಷ್ಮಿ ಬಾಂಬ್​ಗಾಗಿ ಪ್ರತಿ ಶಾಟ್​ಗಳನ್ನು ಹಲವು ಬಾರಿ ಪರಿಶೀಲಿಸಿ ಸ್ವ ಇಚ್ಚೆಯಿಂದ ರಿಟೇಕ್ ತೆಗೆದುಕೊಳ್ಳುತ್ತಿದ್ದೆ. ಇದುವರೆಗೆ 150 ಚಿತ್ರಗಳನ್ನು ಮಾಡಿದ್ದರೂ, ಈ ಚಿತ್ರದ ಶೂಟಿಂಗ್ ವೇಳೆ ನನ್ನ ಮಿತಿಗಳನ್ನು ದಾಟಿ ಹೆಚ್ಚು ಕಲಿಯಲು ನಾನು ಉತ್ಸುಕನಾಗಿದ್ದೆ. ಲಿಂಗ ಸಮಾನತೆಯ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಲು ಈ ಚಿತ್ರವು ನನಗೆ ಸಹಕಾರಿಯಾಯಿತು ಎಂದಿದ್ದಾರೆ.

ಲಕ್ಷ್ಮಿ ಬಾಂಬ್ 2011ರಲ್ಲಿ ಬಿಡುಗಡೆಯಾದ ಹಾರರ್- ಕಾಮಿಡಿ ತಮಿಳು ಚಿತ್ರ ಕಾಂಚನಾದ ರಿಮೇಕ್ ಆಗಿದ್ದು, ಮೂಲ ಚಿತ್ರ ನಿರ್ದೇಶನ ಮಾಡಿದ್ದ ರಾಘವ ಲಾರೆನ್ಸ್ ಇದನ್ನು ನಿರ್ದೇಶಿಸಿದ್ದಾರೆ.

ಕೊರೊನಾ ವೈರಸ್​ ಹಿನ್ನೆಲೆ ಥಿಯೇಟರ್​ಗಳು ಮುಚ್ಚಿರುವುದರಿಂದ ಡಿಜಿಟಲ್ ವೇದಿಕೆಗಳಾದ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಕ್ಷ್ಮಿ ಬಾಂಬ್ ಬಿಡುಗಡೆಯಾಗಲಿದೆ. ಡಿಜಿಟಲ್ ಫ್ಲಾಟ್​ ಫಾರ್ಮ್​ನಲ್ಲಿ ಬಿಡುಗಡೆಯಾಗುತ್ತಿರುವ ಅಕ್ಷಯ್​ ಕುಮಾರ್​ ನಟನೆಯ ಮೊದಲ ಚಿತ್ರ ಇದಾಗಿದೆ.

ABOUT THE AUTHOR

...view details