ಕರ್ನಾಟಕ

karnataka

ETV Bharat / sitara

ಚಪಾಕ್​ ಸಿನಿಮಾ ಬಿಡುಗಡೆಗೆ ಕಥಾ ನಾಯಕಿಯೇ ಅಡ್ಡಗಾಲು! - ಚಪಾಕ್​ ಸಿನಿಮಾ ಬಿಡುಗಡೆಗೆ ಕಥಾ ನಾಯಕಿಯೇ ಅಡ್ಡಗಾಲು!

ನನ್ನ ಬಗ್ಗೆ ಚಪಾಕ್​​ ಸಿನಿಮಾ ಮಾಡುತ್ತಿದ್ದು, ಇದ್ರಿಂದ ನನಗೆ ಯಾವುದೇ ಕ್ರೆಡಿಟ್​ ಸಿಕ್ಕಿಲ್ಲ. ಇದ್ರಿಂದಾಗಿ ಸಿನಿಮಾ ಬಿಡುಗಡೆಯನ್ನು ನಿಲ್ಲಿಸಬೇಕು ಎಂದು ಲಕ್ಷ್ಮಿ ಅಗರ್ವಾಲ್​​ ಎಂಬುವವರು ಕೊರ್ಟ್​​ ಮೆಟ್ಟಿಲೇರಿದ್ದಾರೆ.

Laxmi Agarwal's lawyer files plea seeking stay on  Chhapaak
ಚಪಾಕ್​ ಸಿನಿಮಾ ಬಿಡುಗಡೆಗೆ ಕಥಾ ನಾಯಕಿಯೇ ಅಡ್ಡಗಾಲು!

By

Published : Jan 9, 2020, 12:42 PM IST

ನಾಳೆ ಬಿಡುಗಡೆಯಾಗಲು ರೆಡಿಯಾಗಿರುವ ದೀಪಿಕಾ ಪಡುಕೋಣೆ ಅಭಿನಯದ ಚಪಾಕ್​ ಸಿನಿಮಾಕ್ಕೆ ಅಡ್ಡಿಯಾಗಿದೆ.

ಹೌದು ಚಪಾಕ್​ ಸಿನಿಮಾವನ್ನು ಲಕ್ಷ್ಮಿ ಅಗರ್ವಾಲ್​ ಜೀವನದ ಘಟನೆಗಳನ್ನು ಆಧರಿಸಿ ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಚಿತ್ರ ತಂಡದ ಬಗ್ಗೆ ಗರಂ ಆಗಿರುವ ಲಕ್ಷ್ಮಿ ಅಗರ್ವಾಲ್​​, ನನ್ನ ಬಗ್ಗೆ ಸಿನಿಮಾ ಮಾಡುತ್ತಿದ್ದು, ಇದ್ರಿಂದ ನನಗೆ ಯಾವುದೇ ಕ್ರೆಡಿಟ್​ ಸಿಕ್ಕಿಲ್ಲ. ಇದ್ರಿಂದಾಗಿ ಸಿನಿಮಾ ಬಿಡುಗಡೆಯನ್ನು ನಿಲ್ಲಿಸಬೇಕು ಎಂದು ಕೊರ್ಟ್​​ ಮೆಟ್ಟಿಲೇರಿದ್ದಾರೆ.

ಇನ್ನು ಈ ಬಗ್ಗೆ ಲಕ್ಷ್ಮೀ ಪರ ವಕೀಲೆ ಅಪರ್ಣಾ ಭಟ್‌ ದೆಹಲಿಯ ಪಟಿಯಾಲಾ ಹೌಸ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಚಪಾಕ್ ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಅಪರ್ಣಾ ಭಟ್ ಕೋರಿದ್ದಾರೆ.

ಇತ್ತೀಚೆಗೆ ದೀಪಿಕಾ ಪಡುಕೋಣೆ ಜೆಎನ್‌ಯು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದರಿಂದ ಚಪಾಕ್‌ ಸಿನಿಮಾಕ್ಕೆ ಅಡ್ಡಿ ಪಡಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಿನಿಮಾಕ್ಕೆ ಮೇಘನಾ ಗುಲ್ಜಾರ್​ ನಿರ್ದೇಶನವಿದ್ದು, ದೀಪಿಕಾ ಪಡುಕೋಣೆ ಲಕ್ಷ್ಮಿ ಪಾತ್ರ ನಿರ್ವಹಿಸಿದ್ದಾರೆ.

ABOUT THE AUTHOR

...view details