ಕರ್ನಾಟಕ

karnataka

ETV Bharat / sitara

ರಣವೀರ್​​ ಸಿಂಗ್​ 'ನೀವೇ ಬೆಸ್ಟ್​​​​'​​ ಎಂದ ಚಪಾಕ್​ ಕಥಾನಾಯಕಿ

ಚಪಾಕ್​​ ಚಿತ್ರದ ಕಥಾ ನಾಯಕಿ ಲಕ್ಷ್ಮಿ ಫೋಟೋ ಒಂದನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ರಣವೀರ್​​ ಸಿಂಗ್​ ಜೊತೆಗಿನ ಫೋಟೋ ಹಂಚಿಕೊಂಡಿರುವ ಅಗರ್ವಾಲ್​​, ನಿಮ್ಮ ಜೊತೆಗಿ ಈ ಫೋಟೋ ತುಂಬಾ ಮುದ್ದಾಗಿದೆ. ನೀವೇ ಬೆಸ್ಟ್​​ ಎಂದು ಬರೆದುಕೊಂಡಿದ್ದಾರೆ.

Laxmi Agarwal shares a picture with Ranveer
ರಣವೀರ್​​ ಸಿಂಗ್​​ 'ನೀವೇ ಬೆಸ್ಟ್​​​​'​​ ಎಂದ ಚಪಾಕ್​ ಕಥಾನಾಯಕಿ

By

Published : Jan 12, 2020, 7:56 PM IST

ದೀಪಿಕಾ ಪಡುಕೋಣೆ ಮತ್ತು ವಿಕ್ರಾಂತ್​ ಮೆಸ್ಸೆ ಅಭಿನಯದ ಮೇಘನಾ ಗುಲ್ಜಾರ್​​ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಚಪಾಕ್​​ ರಿಲೀಸ್​​ ಆಗಿದ್ದು, ಅದ್ಭುತ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇನ್ನು ಆ್ಯಸಿಡ್​​ ದಾಳಿಗೆ ಒಳಗಾದ ಲಕ್ಷ್ಮಿ ಅಗರ್ವಾಲ್​​ ಜೀವನದ ಮೇಲೆ ಈ ಸಿನಿಮಾ ನಿರ್ಮಾಣವಾಗಿದ್ದು, ಲಕ್ಷ್ಮಿ ಪಾತ್ರದಲ್ಲಿ ದೀಪಿಕಾ ಮಿಂಚಿದ್ದಾರೆ.

ಸಿನಿಮಾ ನೋಡಿದ ಮೇಲೆ ಚಿತ್ರದ ಕಥಾ ನಾಯಕಿ ಲಕ್ಷ್ಮಿ ಫೋಟೋ ಒಂದನ್ನು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ರಣವೀರ್​​ ಸಿಂಗ್​ ಜೊತೆಗಿನ ಫೋಟೋ ಹಂಚಿಕೊಂಡಿರುವ ಅಗರ್ವಾಲ್​​, ನಿಮ್ಮ ಜೊತೆಗಿ ಈ ಫೋಟೋ ತುಂಬಾ ಮುದ್ದಾಗಿದೆ. ನೀವೇ ಬೆಸ್ಟ್​​ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಈ ಟ್ವೀಟ್​​ ಅನ್ನು ರಣವೀರ್​ ಸಿಂಗ್​ಗೆ ಟ್ಯಾಗ್​ ಮಾಡಿದ್ದಾರೆ.

ಇನ್ನು ಚಪಾಕ್​ ಸಿನಿಮಾ ಹಲವಾರು ಸಂಕಷ್ಟಗಳನ್ನು ಎದುರಿಸಿ ಯಶಸ್ವಿಯಾಗಿ ತೆರೆ ಕಂಡಿದೆ. ಅಲ್ಲದೆ ಕಥಾ ನಾಯಕಿ ಲಕ್ಷ್ಮಿ ಪರ ವಕೀಲೆ, ನನಗೆ ಚಿತ್ರ ತಂಡದಿಂದ ಯಾವುದೇ ಕ್ರೆಡಿಟ್​ ಸಿಕ್ಕಿಲ್ಲ. ಆದ್ರಿಂದ ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದು ಕೋರ್ಟ್​​ ಮೆಟ್ಟಿಲೇರಿದ್ದರು. ಹಾಗೂ ಬಿಜೆಪಿ ಕಾರ್ಯಕರ್ತರು ಚಪಾಕ್​ ಸಿನಿಮಾದಲ್ಲಿ ಹಿಂದು ಧರ್ಮಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದರು. ಈ ಎಲ್ಲಾ ಅಡೆ ತಡೆಗಳನ್ನು ಮೆಟ್ಟಿ ಚಪಾಕ್​ ತೆರೆ ಕಂಡಿದೆ.

ABOUT THE AUTHOR

...view details