ಕಳೆದ ವರ್ಷ ಫೆಬ್ರವರಿ 14ರಂದು ಪುಲ್ವಾಮದಲ್ಲಿ ಉಗ್ರನೊಬ್ಬ ಆತ್ಮಾಹುತಿ ದಾಳಿ ನಡೆಸಿದ್ದ. ಇದರ ಪರಿಣಾಮ ಭಾರತದ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದ್ರಿಂದ ದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು. ಈ ದುರ್ಘಟನೆ ನಡೆದು ನಿನ್ನೆಗೆ ಒಂದು ವರ್ಷ ಕಳೆದಿದೆ.
ಹುತಾತ್ಮ ವೀರ ಯೋಧರಿಗೆ ದೇಶದೆಲ್ಲೆಡೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಹಾಡಿನ ಮೂಲಕ ಶ್ರದ್ಧಂಜಲಿ ಸಲ್ಲಿಸಿದ್ದಾರೆ.