ವಿಶಿಷ್ಟ ಮತ್ತು ಗೌರವಪೂರ್ಣ ವ್ಯಕ್ತಿತ್ವದ ಲತಾ ಮಂಗೇಶ್ಕರ್ ತಮ್ಮ ಜೀವಿತ ಕಾಲದಲ್ಲೇ ದಂತಕತೆಯಾದವರು. ಕಿರಿಯ ವಯಸ್ಸಿನಿಂದಲೇ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಲತಾ ಮಂಗೇಶ್ಕರ್ ಅವರು ತಮ್ಮ ಸಹೋದರ ಸಂಗೀತ ನಿರ್ದೇಶಕ ಹೃದಯನಾಥ್ ಮಂಗೇಶ್ಕರ್ ನಿರ್ದೇಶನದಲ್ಲಿ ಮರೆಯಲಾಗದ ಕೆಲವು ಹಾಡುಗಳನ್ನು ಹಾಡಿದ್ದಾರೆ. ಅಂತಹ ಕೆಲವು ಅದ್ಭುತ ಹಾಡುಗಳೆಂದರೆ,
ಯಾರಾ ಸಿಲ್ಲಿ ಸಿಲ್ಲಿ:ಈ ಹಾಡನ್ನು ಕೇಳದ ಸಂಗೀತಪ್ರಿಯರೇ ಇಲ್ಲ. ರಿಯಾಲಿಟಿ ಶೋನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಸ್ಪರ್ಧಿಗಳು ಇನ್ನೂ ಈ ಹಾಡನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಗುಲ್ಜಾರ್ ಹಾಡಿನ ಸಾಹಿತ್ಯ ರಚಿಸಿದ್ದು, ಹೃದಯನಾಥ್ ಅವರ ಸಂಗೀತ ನಿರ್ದೇಶನದಿಂದ ಹಾಡು ಅಮರವಾಗಿದೆ.
ಮುಜೆ ತುಮ್ ಯಾದ್ ಕರ್ನ:'ಮಶಾಲ್' ಚಿತ್ರದ ಈ ಹಾಡು ಇಂದಿಗೂ ಎಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಜಾವೇದ್ ಅಖ್ತರ್ ಈ ಹಾಡನ್ನು ಬರೆದಿದ್ದಾರೆ. ಕಿಶೋರ್ ಕುಮಾರ್ ಮತ್ತು ಲತಾ ಮಂಗೇಶ್ಕರ್ ಈ ಹಾಡನ್ನು ಹಾಡಿದ್ದಾರೆ.
ಎಕ್ ಹಸೀನ್ ನಿಘಾ ಕಾ:ಹಲವು ಹಾಡುಗಳನ್ನು ಹೃದಯನಾಥ್ ಮಂಗೇಶ್ಕರ್ ವಿಭಿನ್ನ ರಾಗಗಳಲ್ಲಿ ನಿರ್ದೇಶಿಸಿದ್ದಾರೆ. 'ಎಕ್ ಹಸೀನ್ ನಿಘಾ ಕಾ' ಹಾಡು ಕೂಡ ಹೃದಯನಾಥ್ ಅವರ ಪರಿಶ್ರಮ ಮತ್ತು ಸಾಧನೆಯನ್ನು ಸೂಚಿಸುತ್ತದೆ. 1933ರಲ್ಲಿ ಬಂದ ಮಾಯಾ ಮೆಮ್ಸಾಬ್ ಚಿತ್ರದ ಹಾಡು ಇದಾಗಿದೆ. ಕುತಸಾಮ್ರಾಟ್ ಗುಲ್ಜಾರ್ ಅವರ ಸಾಹಿತ್ಯವಿದ್ದು, ಈ ಹಾಡು ಇನ್ನೂ ಪ್ರಚಲಿತವಾಗಿದೆ.