ಕರ್ನಾಟಕ

karnataka

ETV Bharat / sitara

ಸಂಚಾರಿ ಹುಟ್ಟುಹಬ್ಬಕ್ಕೆ 'ಲಂಕೆ' ಚಿತ್ರದ ಪೋಸ್ಟರ್ ಬಿಡುಗಡೆ.. - ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಬದುಕಿದ್ದಿದ್ದರೆ ಶನಿವಾರ (ಜುಲೈ 17) ಅವರು ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಆದರೀಗ ಅವರಿಲ್ಲದೆ ಅಭಿಮಾನಿಗಳು ದು:ಖತಪ್ತರಾಗಿದ್ದಾರೆ. ಈ ನಡುವೆ ಅವರ ಜನ್ಮದಿನದ ಪ್ರಯುಕ್ತ ಸಿನಿಮಾದ ಹೊಸ ಪೋಸ್ಟರ್​ ಬಿಡುಗಡೆಯಾಗಿದೆ.

Lankhe Movie Poster
Lankhe Movie Poster

By

Published : Jul 15, 2021, 7:54 PM IST

Updated : Jul 15, 2021, 8:18 PM IST

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಈ ಬಾರಿ ದುಃಖದಿಂದ ಕಳೆಯಬೇಕಿದೆ. ಕಾರಣ ಅವರು ಜೊತೆಯಲ್ಲಿ ಇಲ್ಲ ಅನ್ನೋದು. ಸಂಚಾರಿ ಬದುಕಿದ್ದರೆ ಜುಲೈ 17ಕ್ಕೆ ತಮ್ಮ 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಈ ಪ್ರಯುಕ್ತ ವಿಜಯ್​ ಅಭಿನಯದ 'ಲಂಕೆ' ಸಿನಿಮಾದ ಪೋಸ್ಟರ್​ನ್ನು ಚಿತ್ರತಂಡ ರಿಲೀಸ್​ ಮಾಡಿದೆ.

ನಟ ಸಂಚಾರಿ ವಿಜಯ್ (ಸಂಗ್ರಹ ಚಿತ್ರ)

ಲೂಸ್ ಮಾದ ಯೋಗೇಶ್ ನಾಯಕನಾಗಿ ನಟಿಸಿರುವ ಲಂಕೆ ಚಿತ್ರದ ಪ್ರಮುಖಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬದ ನೆನಪಿಗಾಗಿ ಚಿತ್ರತಂಡ ಈ ಪೋಸ್ಟರ್ ಬಿಡುಗಡೆ ಮಾಡಿದೆ. ಲೂಸ್ ​ಮಾದ ಯೋಗಿ ಹಾಗು ಸಂಚಾರಿ ವಿಜಯ್ ಅಲ್ಲದೇ, ಕೃಷಿ ತಾಪಂಡ, ಕಾವ್ಯ ಶೆಟ್ಟಿ, ಶರತ್ ಲೋಹಿತಾಶ್ವ, ಶೋಭ್ ರಾಜ್, ಡ್ಯಾನಿ ಕುಟ್ಟಪ್ಪ, ಸುಚೇಂದ್ರ ಪ್ರಸಾದ್, ವಾಣಿಶ್ರೀ, ಗಾಯಿತ್ರಿ ಜಯರಾಂ, ಎಸ್ಟರ್ ನರೋನ, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.

ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ರಾಮ್ ಪ್ರಸಾದ್ ಹಾಗೂ ಗುರುರಾಜ ದೇಸಾಯಿ ಸಂಭಾಷಣೆ ಬರೆದಿದ್ದಾರೆ. ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್(ನಾಗವಾರ) ಹಾಗೂ ಸುರೇಖ ರಾಮಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.

'ಲಂಕೆ' ಚಿತ್ರದ ಪೋಸ್ಟರ್

ಕಾರ್ತಿಕ್ ಶರ್ಮಾ ಸಂಗೀತ ನೀಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಎರಡು ಬಿಟ್ಸ್​ಗಳಿವೆ. ರಮೇಶ್ ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ, ರವಿವರ್ಮ, ಪಳನಿರಾಜ್, ಅಶೋಕ್ ಸಾಹಸ ನಿರ್ದೇಶನ ಹಾಗೂ ಧನಂಜಯ್, ಮೋಹನ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಸರ್ಕಾರ ಚಿತ್ರಮಂದಿರಗಳ ಪ್ರದರ್ಶನಕ್ಕೆ ಅನುಮತಿ ನೀಡಿದರೆ, ಸೆಪ್ಟೆಂಬರ್​ನಲ್ಲಿ ಲಂಕೆ ಚಿತ್ರ ತೆರೆಗೆ ಬರಲಿದೆ.

ಓದಿ:'ಅನಂತವಾಗಿರು' ಸಂಚಾರಿ.. ಹುಟ್ಟುಹಬ್ಬಕ್ಕೆ ಬರುತ್ತಿದೆ ರಾಷ್ಟ್ರ ಪ್ರಶಸ್ತಿ ವಿಜೇತನ ಜೀವನ ಕಥನ

Last Updated : Jul 15, 2021, 8:18 PM IST

ABOUT THE AUTHOR

...view details