ಕರ್ನಾಟಕ

karnataka

ETV Bharat / sitara

ತಮಿಳು ನಟಿ, ನಿರೂಪಕಿ ಲಕ್ಷ್ಮಿ ಮಂಚುಗೆ ಕೋವಿಡ್ ಸೋಂಕು - ನಟಿ ಲಕ್ಷ್ಮಿ ಮಂಚುಗೆ ಕೊರೊನಾ

ತಮಿಳು ನಟಿ ಲಕ್ಷ್ಮಿ ಮಂಚುಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

Lakshmi Manchu tests positive covid
Lakshmi Manchu tests positive covid

By

Published : Jan 6, 2022, 8:55 PM IST

ಚೆನ್ನೈ(ತಮಿಳುನಾಡು):ವಿವಿಧ ಭಾಷೆಯ ಸಿನಿಮಾ ನಟರು, ನಟಿಯರು ಸೇರಿದಂತೆ ಚಿತ್ರ ನಿರ್ಮಾಪಕರಿಗೂ ಕೊರೊನಾ ಸೋಂಕು ತಗಲುತ್ತಿದ್ದು, ಆ ಸಾಲಿಗೆ ಇದೀಗ ತಮಿಳು ನಟಿ, ನಿರೂಪಕಿ ಲಕ್ಷ್ಮಿ ಮಂಚು ಸೇರ್ಪಡೆಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇನ್​​ಸ್ಟಾಗ್ರಾಂನಲ್ಲಿ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.


ಕಳೆದ ಎರಡು ವರ್ಷಗಳ ಕಾಲ ಕೋವಿಡ್​ನಿಂದ ರಕ್ಷಣೆಗೊಳಪಟ್ಟಿದ ನಾನು ಕೊನೆಗೂ ಸೋಂಕಿಗೊಳಗಾಗಿದ್ದಾನೆ ಎಂದು ಬರೆದುಕೊಂಡಿದ್ದು, ಪ್ರತಿಯೊಬ್ಬರ ಮೇಲೆ ಇದು ಪರಿಣಾಮ ಬೀರಲಿದ್ದು, ಸಾಮಾನ್ಯ ಶೀತದಂತೆ ಇರಲಿದೆ ಎಂದಿದ್ದಾರೆ.

ಕೋವಿಡ್​ ವಿರುದ್ಧ ಹೋರಾಡಲು ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಅಗತ್ಯ ಎಂದಿರುವ ನಟಿ, ವೈರಸ್​ ವಿರುದ್ಧ ಹೋರಾಡಲು ಸಾಕಷ್ಟು ಶಕ್ತಿ ನಮ್ಮ ದೇಹದಲ್ಲಿದೆ ಎಂದಿದ್ದಾರೆ. ಜೊತೆಗೆ ಕೋವಿಡ್ ಲಸಿಕೆ ಪಡೆದುಕೊಳ್ಳುವುದನ್ನ ಮರೆಯಬೇಡಿ ಎಂದಿದ್ದಾರೆ.


ನಟ ಮೋಹನ್​ ಬಾಬು ಮತ್ತು ವಿದ್ಯಾ ದೇವಿ ಏಕೈಕ ಪುತ್ರಿ ಲಕ್ಷ್ಮಿ ಮಂಚು, ಕಳೆದ ಕೆಲ ತಿಂಗಳ ಹಿಂದೆ ಸರೋಗೆಸಿ ಮೂಲಕ ಮಗು ಪಡೆದುಕೊಂಡು ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದರು.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ 36 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ: ದೇಶದ ಮೆಟ್ರೋ ನಗರಗಳ ಕೋವಿಡ್ ಮಾಹಿತಿ ಹೀಗಿದೆ..

ವಿಶೇಷವೆಂದರೆ ರಿಯಾಲಿಟಿ ಶೋ ಮೂಲಕ ಬರುವ ಹಣವನ್ನು ಅನೇಕ ಸಮಾಜಮುಖಿ ಕಾರ್ಯಗಳಿಗೆ ದಾನ ಮಾಡುವ ನಟಿಯರ ಪೈಕಿ ಲಕ್ಷ್ಮಿ ಕೂಡ ಒಬ್ಬರು.

ABOUT THE AUTHOR

...view details