ಕರ್ನಾಟಕ

karnataka

ETV Bharat / sitara

ಆತ ನನಗಿಂತ ಚೆನ್ನಾಗಿ ತೆಲುಗು ಮಾತನಾಡುತ್ತಾನೆ: ಲಕ್ಷ್ಮಿ ಮಂಚು ಅಚ್ಚರಿ - undefined

ತೆಲುಗು ಮಾತನಾಡುವ ವಿದೇಶಿ ಪ್ರಜೆಯೊಬ್ಬರ ವಿಡಿಯೋವೊಂದು ವೈರಲ್ ಆಗಿದ್ದು ಆತ ನನಗಿಂತಲೂ ಚೆನ್ನಾಗಿ ತೆಲುಗು ಮಾತನಾಡುತ್ತಾನೆ ಎಂದು ನಟಿ, ನಿರೂಪಕಿ ಲಕ್ಷ್ಮಿ ಮಂಚು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಿ ಮಂಚು

By

Published : Jul 14, 2019, 4:51 PM IST

ಟಾಲಿವುಡ್ ಸ್ಟಾರ್ ನಟ ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ತೆಲುಗು ಮಾತನಾಡುವ ಶೈಲಿಗೆ ಫೇಮಸ್. ತೆಲುಗು ಹುಡುಗಿಯಾದರೂ ನನಗೆ ತೆಲುಗು ಅಷ್ಟಾಗಿ ಬರುವುದಿಲ್ಲ ಎಂದು ಧೈರ್ಯವಾಗೇ ಹೇಳುತ್ತಾರೆ ಲಕ್ಷ್ಮಿ.

ಈ ವಿಚಾರವಾಗೇ ಲಕ್ಷ್ಮಿ ಸಾಕಷ್ಟು ಬಾರಿ ಟ್ರೋಲ್​​ಗೆ ಒಳಗಾಗಿದ್ದಾರೆ. ಅಮೆರಿಕದ ಮೊಂಟಾನದ ಐಸಾಕ್ ರಿಚರ್ಡ್ ಎಂಬ ವ್ಯಕ್ತಿಯೊಬ್ಬ ತೆಲುಗು ಮಾತನಾಡುವ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. 2016 ರಲ್ಲಿ ಆಂಧ್ರಪದೇಶಕ್ಕೆ ಕೆಲವೊಂದರ ನಿಮಿತ್ತ ಬಂದಿದ್ದ ರಿಚರ್ಡ್ ಕೇವಲ 2 ವರ್ಷಗಳಲ್ಲಿ ತೆಲುಗು ಕಲಿತಿದ್ದಾರೆ. ನನಗೆ ತೆಲುಗು ಎಂದರೆ ಬಹಳ ಇಷ್ಟ ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ. ಈ ವಿಡಿಯೋವನ್ನು ದಿನೇಶ್ ಅಕುಲ ಎಂಬ ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಲಕ್ಷ್ಮಿ ಮಂಚು

ರಿಚರ್ಡ್ ತೆಲುಗು ಮಾತನಾಡುವ ವಿಡಿಯೋ ನೋಡಿದ ಲಕ್ಷ್ಮಿ ಮಂಚು ನಿಜಕ್ಕೂ ಶಾಕ್ ಆಗಿದ್ದಾರೆ. 'ಆತ ನನಗಿಂತಲೂ ಚೆನ್ನಾಗಿ ತೆಲುಗು ಮಾತನಾಡುತ್ತಾನೆ. ನಮ್ಮ ಭಾಷೆಯನ್ನು ಇಷ್ಟಪಡುವವರನ್ನು ಕಂಡರೆ ಬಹಳ ಸಂತೋಷವಾಗುತ್ತದೆ' ಎಂದು ಲಕ್ಷ್ಮಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ತೆಲುಗಿನ 'ಮೇಮು ಸಹಿತಂ' , 'ಲಕ್ಷ್ಮಿ ಟಾಕ್ ಶೋ' , 'ಮೀ ಕೋಸಂ' , 'ಮಹರ್ಷಿ' ಹಾಗೂ ಇನ್ನಿತರ ಖ್ಯಾತ ಕಾರ್ಯಕ್ರಮಗಳನ್ನು ಲಕ್ಷ್ಮಿ ಅವರು ನಿರೂಪಣೆ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details