ದಕ್ಷಿಣ ಭಾರತದ ನಟಿ ಶಕೀಲಾ ಹೆಸರಿನಲ್ಲಿ ಈಗಾಗಲೇ ಎರಡು ಸಿನಿಮಾಗಳು ತಯಾರಾಗಿ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಇದೀಗ ಶಕೀಲಾ ಅವರ ಮತ್ತೊಂದು ಸಿನಿಮಾ ಬಿಡುಗಡೆಯಾಗಿದ್ದು ಈ ಚಿತ್ರವನ್ನು ಸ್ವತ: ಶಕೀಲಾ ಅವರೇ ನಿರ್ಮಿಸಿದ್ದಾರೆ.
ತಮ್ಮ ಮಾದಕತೆಯಿಂದಲೇ ದೊಡ್ಡ ನಟರ ಸಿನಿಮಾಗಳಿಗೆ ಸೆಡ್ಡು ಹೊಡೆದ ನಟಿ ಶಕೀಲಾ. ಈ ನಟಿ 'ಲೇಡೀಸ್ ನಾಟ್ ಅಲೋಡ್' ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾ ಟೈಟಲ್ ಪ್ರಕಾರ ಈ ಚಿತ್ರವನ್ನು ಮಹಿಳೆಯರು ನೋಡಬಾರದಂತೆ. ಈ ಚಿತ್ರವನ್ನು ದಯವಿಟ್ಟು ಮಹಿಳೆಯರು ನೋಡಲೇಬೇಡಿ ಎಂದು ಎಂದು ಶಕೀಲಾ ಮನವಿ ಮಾಡಿದ್ದಾರೆ. ಸಿನಿಮಾ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಜುಲೈ 20 ರಂದು ಬಿಡುಗಡೆಯಾಗಿದೆ.
ಶಕೀಲಾ ಹೇಳುವ ಪ್ರಕಾರ ಈ ಚಿತ್ರವನ್ನು ಅವರು ಸಾಲ ಪಡೆದು ನಿರ್ಮಿಸಿದ್ದಾರಂತೆ. ಎರಡು ವರ್ಷಗಳ ಹಿಂದೆಯೇ ಸಿನಿಮಾವನ್ನು ಮಾಡಲಾಗಿತ್ತು. ಆದರೆ ಸೆನ್ಸಾರ್ ಮಂಡಳಿಯಿಂದ ತೊಂದರೆ ಉಂಟಾದ ಕಾರಣ ಕೊನೆಗೂ ದೆಹಲಿಯಲ್ಲಿ ಚಿತ್ರಕ್ಕೆ ಸರ್ಟಿಫಿಕೇಟ್ ಪಡೆದು ಈಗ ಬಿಡುಗಡೆ ಮಾಡುತ್ತಿದ್ದೇವೆ. ಕೊರೊನಾ ಸಮಸ್ಯೆ ಇಲ್ಲದಿದ್ದರೆ ಸಿನಿಮಾ ಬಹಳ ದಿನಗಳ ಮುನ್ನವೇ ಬಿಡುಗಡೆಯಾಗಬೇಕಿತ್ತು ಎನ್ನುತ್ತಾರೆ ಶಕೀಲಾ.
ಶಕೀಲಾ ನಿರ್ಮಾಣದ 'ಲೇಡೀಸ್ ನಾಟ್ ಅಲೋಡ್' 'ಲೇಡೀಸ್ ನಾಟ್ ಅಲೋಡ್' ಚಿತ್ರದಲ್ಲಿ ಕಾಮಿಡಿ ಜೊತೆಗೆ ಹಾರರ್ ಅಂಶಗಳೂ ಸೇರಿವೆಯಂತೆ. ಚಿತ್ರವನ್ನು ರಾಮ್ ದಾಸರಿ ನಿರ್ದೇಶಿಸಿದ್ದಾರೆ. ಸಿನಿಮಾಗೆ ಶಕೀಲಾ ಜೊತೆಗೆ ಕಾವಲಿ ರಮೇಶ್, ವಿಕ್ರಾಂತ್ ರೆಡ್ಡಿ ಕೂಡಾ ಹಣ ಹೂಡಿದ್ದಾರೆ. ಶ್ರೀ ಮಿತ್ರ ಸಂಗೀತ, ತರುಣ್ ಕೆ. ಛಾಯಾಗ್ರಹಣ ಕೆ.ಆರ್. ಸ್ವಾಮಿ ಸಂಕಲನ ಈ ಸಿನಿಮಾಗೆ ಇದೆ. ಒಟಿಟಿಯಲ್ಲಿ ಈ ಸಿನಿಮಾ ನೋಡಲು 50 ರೂಪಾಯಿ ಟಿಕೆಟ್ ನಿಗದಿ ಮಾಡಲಾಗಿದೆ.