ಮೊದಲ ಬಾರಿಗೆ ಜೂನಿಯರ್ ಎನ್ಟಿಆರ್ ಹಾಗು ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ಮುಖ್ಯಭೂಮಿಕೆಯಲ್ಲಿ ಸ್ಟಾರ್ ಡೈರೆಕ್ಟರ್ ರಾಜಮೌಳಿ (S.S.Rajamouli) ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಆರ್ಆರ್ಆರ್' (RRR) ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೈಪ್ ಮೂಡಿಸಿದೆ. ಪಂಚಭಾಷೆಯಲ್ಲಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿರುವ ಸಿನಿಮಾದ ಕನ್ನಡ ವಿತರಣೆ ಜವಾಬ್ದಾರಿಯನ್ನು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಹೊತ್ತುಕೊಂಡಿದೆ.
ರಾಜಮೌಳಿ 'RRR' ಕನ್ನಡ ಸಿನಿಮಾ ವಿತರಣೆ ಹಕ್ಕು ಕೆವಿಎನ್ ತೆಕ್ಕೆಗೆ - ram charan rrr film
'ಬಾಹುಬಲಿ' ಮೂಲಕ ಭಾರತೀಯ ಚಿತ್ರರಂಗ ಅಲ್ಲದೆ, ವರ್ಲ್ಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೈಪ್ ಹುಟ್ಟಿಸಿದ್ದ ನಿರ್ದೇಶಕ (S.S.Rajamouli) ರಾಜಮೌಳಿ ಸದ್ಯ 'ಆರ್ಆರ್ಆರ್' ಸಿನಿಮಾದ ಬಿಡುಗಡೆಗೆ ಸಿದ್ಧವಾಗಿದ್ದಾರೆ. ಪಂಚ ಭಾಷೆಯಲ್ಲಿ ಮೋಡಿ ಮಾಡಲು ಸಿದ್ದವಾಗಿರುವ ಚಿತ್ರದ ಕನ್ನಡದ ವಿತರಣೆ ಹಕ್ಕು ಪ್ರತಿಷ್ಠಿತ ಪ್ರೊಡಕ್ಷನ್ ಹೌಸ್ ಕೆವಿಎನ್ ಪಾಲಾಗಿದೆ.
ಆರ್ಆರ್ಆರ್ ಕನ್ನಡ ಸಿನಿಮಾ
ಬಾಹುಬಲಿ ನಂತರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಸಿನಿಮಾ ಆರ್ಆರ್ಆರ್. ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ಮೂಡಿ ಬರ್ತಿದೆ. ಮತ್ತೊಂದೆಡೆ ಆರ್ಆರ್ಆರ್ ಸಿನಿಮಾದ ಕರ್ನಾಟಕ ವಿತರಣೆ ಹಕ್ಕು ಕೆವಿಎನ್ ಪ್ರೊಡಕ್ಷನ್ ಹೌಸ್‌ಗೆ 7 ರಿಂದ 8 ಕೋಟಿ ರೂ ಮೊತ್ತದಲ್ಲಿ ಮಾರಾಟವಾಗಿರುವ ಸಾಧ್ಯತೆ ಇದೆ ಎಂಬ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.
ಆರ್ಆರ್ಆರ್ ಸಿನಿಮಾದ 'ಹಳ್ಳಿ ನಾಟು' ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. ಜನವರಿ 7 ರಂದು ಸಿನಿಮಾ ವಿಶ್ವಾದ್ಯಂತ ತೆರೆಗೆ ಬರ್ತಿದೆ.