ಕರ್ನಾಟಕ

karnataka

ETV Bharat / sitara

ಕುರುಕ್ಷೇತ್ರದ ಎರಡನೇ ಸಾಂಗ್​ ರಿಲೀಸ್​​ಗೆ ಡೇಟ್​ ಫಿಕ್ಸ್ - ಅರ್ಜುನ್ ಸರ್ಜಾ.ದಿವಂಗತ ನಟ

ಮೊನ್ನೆಯಷ್ಟೆ ಅದ್ಧೂರಿಯಾಗಿ ಆಡಿಯೋ ರಿಲೀಸ್ ಮಾಡಿರುವ 'ಕುರುಕ್ಷೇತ್ರ' ತಂಡ, ಇದೇ ಶನಿವಾರ ಚಾರುತಂತಿ ಹಾಡು ಬಿಡುಗಡೆ ಮಾಡುತ್ತಿದೆ.

ಕುರುಕ್ಷೇತ್ರ

By

Published : Jul 11, 2019, 9:00 AM IST

ಈಗಾಗಲೇ ಬಿಡುಗಡೆಯಾಗಿರುವ ಕುರುಕ್ಷೇತ್ರದ ಮೊದಲ ಹಾಡು ಸೂಪರ್ ಹಿಟ್ ಆಗಿದೆ. ಈಗ ಮತ್ತೊಂದು ಗೀತೆಯನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
ದುರ್ಯೋಧನನಾಗಿ ಡಿಬಾಸ್​ ಹಾಗೂ ಬಾನುಮತಿಯಾಗಿ ಮೇಘನಾರಾಜ್​ ವಿಜೃಂಭಿಸಿರುವ 'ಚಾರುತಂತಿ' ಸಾಂಗ್​ ಇದೆ ಶನಿವಾರ ಸಂಜೆ 6.3ಕ್ಕೆ ಅನಾವರಣಗೊಳ್ಳಲಿದೆ.

ದಚ್ಚು ಅವರ 50ನೇ ಚಿತ್ರವಾಗಿರುವ ಕುರುಕ್ಷೇತ್ರಕ್ಕೆ ನಾಗಣ್ಣ ನಿರ್ದೇಶನ ಮಾಡಿದ್ದಾರೆ. ಬಹುಕೋಟಿಯಲ್ಲಿ ನಿರ್ಮಾಪಕ ಮುನಿರತ್ನ ಚಿತ್ರ ನಿರ್ಮಾಣ ಮಾಡಿದ್ದಾರೆ. ವಿ.ಹರಿಕೃಷ್ಣ ಅವರು ಸಂಗೀತ ನೀಡಿದ್ದಾರೆ. ರವಿಚಂದ್ರನ್​, ಅರ್ಜುನ್ ಸರ್ಜಾ. ದಿವಂಗತ ನಟ ಅಂಬರೀಶ್​, ಟಾಲಿವುಡ್​ನ ಸೋನು ಸೂದ್​, ಹರಿಪ್ರಿಯಾ,ಮೇಘನಾರಾಜ್ ಸೇರಿದಂತೆ ಬಹುತಾರಾಗಣ ಈ ಸಿನಿಮಾದಲ್ಲಿದೆ. ಆಗಸ್ಟ್​ 2 ಕುರುಕ್ಷೇತ್ರ ತೆರೆಯ ಮೇಲೆ ಬರಲಿದೆ.

ABOUT THE AUTHOR

...view details