ಕರ್ನಾಟಕ

karnataka

ETV Bharat / sitara

ಕುರುಕ್ಷೇತ್ರ ​​​​​​​ಬಿಡುಗಡೆ ದಿನಾಂಕ ​ಘೋಷಣೆಗೆ ಮುಹೂರ್ತ ಫಿಕ್ಸ್​ - undefined

ಬಹುನಿರೀಕ್ಷಿ ’ಕುರುಕ್ಷೇತ್ರ’ ಸಿನಿಮಾದ ಬಿಡುಗಡೆಗೆ ದಿನಾಂಕ ಶೀಘ್ರದಲ್ಲೇ ಘೋಷಣೆಯಾಗಲಿದೆ. ಇದೇ ಶನಿವಾರ ದಿನಾಂಕವನ್ನು ನಿಗದಿಗೊಳಿಸಲು ನಿರ್ಮಾಪಕ ಮುನಿರತ್ನ ಬೆಂಗಳೂರಿನ ಖಾಸಗಿ ಹೊಟೆಲ್​ನಲ್ಲಿ ಮಾಧ್ಯಮಗೋಷ್ಟಿ ಏರ್ಪಡಿಸಿದ್ದಾರೆ.

ಕುರುಕ್ಷೇತ್ರ

By

Published : May 16, 2019, 2:45 PM IST

2017 ಆಗಸ್ಟ್​​​​ನಲ್ಲಿ ಆರಂಭವಾಗಿದ್ದ ಸ್ಯಾಂಡಲ್​​ವುಡ್ ಬಹುನಿರೀಕ್ಷಿತ ಚಿತ್ರ ’ಕುರುಕ್ಷೇತ್ರ’ ಬಿಡುಗಡೆ ದಿನಾಂಕ ಸಾಕಷ್ಟು ಬಾರಿ ಮುಂದಕ್ಕೆ ಹೋಗಿದೆ. ಚಿತ್ರದಲ್ಲಿ ದೊಡ್ಡ ದೊಡ್ಡ ನಟರ ತಾರಾಬಳಗವೇ ಇದ್ದು, ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.

ಧುರ್ಯೋಧನ ಪಾತ್ರದಲ್ಲಿ ದರ್ಶನ್​

ಅಂತೂ ಇಂತೂ ಚಿತ್ರದ ಬಗ್ಗೆ ಅಧಿಕೃತವಾಗಿ ಹೇಳಿಕೊಳ್ಳಲು ಈ ಶನಿವಾರ ಶಾಂಗ್ರಿ ಲಾ ಹೊಟೇಲ್​​​​​ನಲ್ಲಿ ನಿರ್ಮಾಪಕ ಮುನಿರತ್ನ ಹಾಗೂ ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿದೆ. ನಿಖಿಲ್ ಕುಮಾರಸ್ವಾಮಿ ಈ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದು ಅವರ ಪಾತ್ರಕ್ಕೆ ತಾವು ಡಬ್ ಮಾಡದ ಕಾರಣ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎನ್ನಲಾಗಿದೆ. ಇನ್ನು ಮೇ 18 ರ ಸಂಜೆ ‘ಕುರುಕ್ಷೇತ್ರ’ ಚಿತ್ರದ ಆಡಿಯೋ ಬಿಡುಗಡೆ ಆಗಲಿದೆ ಎಂದು ತಿಳಿದುಬಂದಿದೆ. ರೆಬಲ್ ಸ್ಟಾರ್ ಅಂಬರೀಶ್ ಈ ಸಿನಿಮಾದಲ್ಲಿ ಭೀಷ್ಮನ ಪಾತ್ರದಲ್ಲಿ ನಟಿಸಿದ್ದು ಚಿತ್ರ ಬಿಡುಗಡೆಯಾಗುವ ಸಮಯದಲ್ಲಿ ಅವರು ನಮ್ಮೊಂದಿಗೆ ಇಲ್ಲದಿರುವುದು ನಿಜಕ್ಕೂ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

ಅರ್ಜುನ್ ಸರ್ಜಾ, ಮೇಘನಾ ರಾಜ್, ದರ್ಶನ್

ಚಿತ್ರವನ್ನು ನಾಗಣ್ಣ, ಡಾ ವಿ. ನಾಗೇಂದ್ರ ಪ್ರಸಾದ್, ದೇವರಾಜ ಪಾಲನ್, ಎಸ್​​​​.ವಿ. ಪ್ರಸಾದ್ ಈ ನಾಲ್ವರು ಸೇರಿ ನಿರ್ದೇಶಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಆಗುತ್ತಿದೆ. ವಿ. ಹರಿಕೃಷ್ಣ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.

ಬಹುಕೋಟಿ ವೆಚ್ಚದ ಈ ಚಿತ್ರದಲ್ಲಿ ಧುರ್ಯೋಧನ ಆಗಿ ದರ್ಶನ್, ಅಭಿಮನ್ಯು ಆಗಿ ನಿಖಿಲ್ ಕುಮಾರಸ್ವಾಮಿ, ಶ್ರೀ ಕೃಷ್ಣ ಆಗಿ ವಿ. ರವಿಚಂದ್ರನ್, ಕರ್ಣನಾಗಿ ಅರ್ಜುನ್ ಸರ್ಜಾ, ಭೀಮನಾಗಿ ದಾನಿಶ್ ಸೇಠ್​​​​, ಧೃತರಾಷ್ಟ್ರ ಆಗಿ ಡಾ. ಶ್ರೀನಾಥ್, ದ್ರೋಣಾಚಾರ್ಯ ಆಗಿ ಶ್ರೀನಿವಾಸಮೂರ್ತಿ, ಧರ್ಮರಾಯ ಆಗಿ ಶಶಿಕುಮಾರ್, ಸೋನುಸೂದ್ ಅರ್ಜುನನಾಗಿ, ನಕುಲನಾಗಿ ಯಶಸ್, ಸಹದೇವ ಆಗಿ ಚಂದನ್, ದ್ರೌಪದಿ ಆಗಿ ಸ್ನೇಹ, ಕುಂತಿಯಾಗಿ ಡಾ. ಭಾರತಿ ವಿಷ್ಣುವರ್ಧನ್​​​, ಶಕುನಿಯಾಗಿ ರವಿಶಂಕರ್, ಉತ್ತರ ಆಗಿ ಅದಿತಿ ಆರ್ಯ, ಭಾನುಮತಿಯಾಗಿ ಮೇಘನಾ ರಾಜ್, ಮಾಯೆ ಆಗಿ ಹರಿಪ್ರಿಯ, ದುಶ್ಯಾಸನ ಆಗಿ ರವಿಚೇತನ್ ಅಭಿನಯಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details