ಕರ್ನಾಟಕ

karnataka

ETV Bharat / sitara

ಬಂದಾ ನೋಡು 'ಸುಯೋಧನ'... ಕುರುಕ್ಷೇತ್ರದ ಮೊದಲ ಹಾಡು ರಿಲೀಸ್ - ದರ್ಶನ್

ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಅವರ ಪೌರಾಣಿಕ ಸಿನಿಮಾ ಕುರುಕ್ಷೇತ್ರದ ಮೊದಲ ಲಿರಿಕಲ್ ವಿಡಿಯೋ ಇಂದು ರಿಲೀಸ್​ ಆಗಿದೆ.

ಕುರುಕ್ಷೇತ್ರ

By

Published : Jul 5, 2019, 10:15 PM IST

ಪ್ಯಾನ್ ಇಂಡಿಯಾ ಸಿನಿಮಾ ಕುರುಕ್ಷೇತ್ರದ ಮೊದಲ ಹಾಡು 'ಸಾಹೋರೆ ಸಾಹೋ' ಇಂದು ಹೊರಬಿದ್ದಿದೆ. ಇದು ಕೌರವಾಧಿಪತಿ, ಹಸ್ತಿನಾಪುರದ ಅಧಿಪತಿ ಸುಯೋಧನನ ಪರಿಚಯದ ಈ ಗೀತೆ. ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ವಿ.ಹರಿಕೃಷ್ಣ ಅವರ ಸಂಗೀತ ಜತೆಗೆ ವಿಜಯ್ ಪ್ರಕಾಶ್ ಅವರ ಕಂಚಿನ ಕಂಠದಲ್ಲಿ ಅದ್ಭುತವಾಗಿ ಈ ಹಾಡು ಮೂಡಿಬಂದಿದೆ.

ಇದೇ 7 ರಂದು ಕುರುಕ್ಷೇತ್ರದ ಧ್ವನಿ ಸುರುಳಿಕೆ ಅನಾವರಣಗೊಳ್ಳುತ್ತಿದೆ. ಎರಡು ವರ್ಷಗಳ ಅವಿರತ ಶ್ರಮದಲ್ಲಿ ಮೂಡಿಬಂದಿರುವ ಈ ಸಿನಿಮಾ ದಕ್ಷಿಣ ಭಾರತದಲ್ಲಿ ಬಹುನಿರೀಕ್ಷೆ ಮೂಡಿಸಿದೆ. ಚಾಲೆಂಜಿಂಗ್ ಸ್ಟಾರ್​ ದರ್ಶನ್ ಅವರ 50 ನೇ ಚಿತ್ರವಾಗಿ ಸೆಟ್ಟೇರಿದ ಕುರುಕ್ಷೇತ್ರ, ಈಗ 51 ನೇ ಸಿನಿಮಾ ಆಗಿ ತೆರೆಗೆ ಬರುತ್ತಿದೆ.

ದಿವಂಗತ ನಟ ಅಂಬರೀಶ್, ರವಿಚಂದ್ರನ್​, ಅರ್ಜುನ್​ ಸರ್ಜಾ, ನಿಖಿಲ್ ಗೌಡ, ಟಾಲಿವುಡ್​ ನಟ ಸೋನು ಸೂದ್ ಸೇರಿದಂತೆ ಬಹುತಾರಾಗಣದ ಈ ಸಿನಿಮಾಗೆ ಮುನಿರತ್ನ ಹಣ ಹೂಡಿದ್ದಾರೆ. 2ಡಿ ಹಾಗೂ 3ಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾ ಮೊದಲ ಲಿರಿಕಲ್ ವಿಡಿಯೋವನ್ನು ಲಹರಿ ಆಡಿಯೋ ಸಂಸ್ಥೆ ಇಂದು ಬಿಡುಗಡೆಯಾಗಿದೆ.

ABOUT THE AUTHOR

...view details