ಕರ್ನಾಟಕ

karnataka

ETV Bharat / sitara

ಸ್ಯಾಂಡಲ್‌ವುಡ್‌ನ 'ಕುರುಕ್ಷೇತ್ರ'ಯುದ್ಧ ಸನ್ನಿಹಿತ.. ಚಿತ್ರದ ಮತ್ತೊಂದು ಟೀಸರ್ ರಿಲೀಸ್​! - undefined

ದರ್ಶನ್ ಅಭಿನಯದ 50 ನೇ ಚಿತ್ರ 'ಕುರುಕ್ಷೇತ್ರ'ದ ಮತ್ತೊಂದು ಟೀಸರ್ ಬಿಡುಗಡೆಯಾಗಿದೆ. ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದಂದು ಸಿನಿಮಾ ಬಿಡುಗಡೆಯಾಗುತ್ತಿದೆ.

ದರ್ಶನ್

By

Published : May 20, 2019, 8:56 PM IST

ಸ್ಯಾಂಡಲ್​​ವುಡ್ ಮಾತ್ರವಲ್ಲದೇ ಕೋಟ್ಯಂತರ ಅಭಿಮಾನಿಗಳು ಎದುರು ನೋಡುತ್ತಿದ್ದ ಬಹುನಿರೀಕ್ಷಿತ 'ಕುರುಕ್ಷೇತ್ರ' ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್ ಆದ ಬೆನ್ನಲ್ಲೇ ಚಿತ್ರದ ಟೀಸರ್ ಕೂಡಾ ರಿಲೀಸಾಗಿದೆ.

ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಎಂಬುದು ವಿಶೇಷ. ಈ ಟೀಸರ್​​​ನಲ್ಲಿ ಧುರ್ಯೋಧನ ದರ್ಶನ್, ಭೀಷ್ಮ, ಅಂಬರೀಶ್, ಕೃಷ್ಣ ರವಿಚಂದ್ರನ್, ಅಭಿಮನ್ಯು ನಿಖಿಲ್, ದ್ರೌಪದಿ ಸ್ನೇಹ, ಕರ್ಣ ಅರ್ಜುನ್ ಸರ್ಜಾ, ಅರ್ಜುನ ಸೋನುಸೂದ್​​​, ಧೃತರಾಷ್ಟ್ರ ಶಶಿಕುಮಾರ್, ಕುಂತಿ ಭಾರತಿ ವಿಷ್ಣುವರ್ಧನ್ ಹೀಗೆ ಬಹುತೇಕ ಎಲ್ಲಾ ತಾರೆಯರೂ ಕಾಣಿಸುತ್ತಿದ್ದಾರೆ.

ಅದ್ದೂರಿ ಯುದ್ಧದ ಸನ್ನಿವೇಶ, ಅದ್ದೂರಿ ಸೆಟ್​​​ ಹೀಗೆ ಹಲವಾರು ವಿಶೇಷತೆಗಳನ್ನು ಟೀಸರ್ ಒಳಗೊಂಡಿದೆ. ‌‌ಸಿನಿಮಾವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಪಕ ಮುನಿರತ್ನ ಐದು ಭಾಷೆಗಳಲ್ಲಿ ನಿರ್ಮಾಣ ಮಾಡಿದ್ದಾರೆ. ನಾಗಣ್ಣ ಈ ಸಿನಿಮಾವನ್ನು ನಿರ್ದೇಶಿಸಿರೋದು ವಿಶೇಷ. ಆಗಸ್ಟ್ 9ರ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಸಿನಿಮಾ ತೆರೆ ಕಾಣುತ್ತಿದೆ. ಸದ್ಯಕ್ಕೆ ಈ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

For All Latest Updates

TAGGED:

ABOUT THE AUTHOR

...view details