ಕರ್ನಾಟಕ

karnataka

ETV Bharat / sitara

'ಕೆಜಿಎಫ್', 'ದಿ ವಿಲನ್​' ರೆಕಾರ್ಡ್ ಮುರಿದ ಕುರುಕ್ಷೇತ್ರ....ಫಸ್ಟ್ ಡೇ ಕಲೆಕ್ಷನ್​ ಎಷ್ಟು ಗೊತ್ತಾ? - ಬಾಕ್ಸ್​ ಆಫೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಮೊದಲ ದಿನವೇ ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸಿದೆ. ಬಿಡುಗಡೆಯಾದ ಮೊದಲ ದಿನ ಬರೊಬ್ಬರಿ ₹ 16 ಕೋಟಿ ಗಳಿಸಿ, ಕೆಜಿಎಫ್​ ಹಾಗೂ ದಿ ವಿಲನ್​ ಸಿನಿಮಾಗಳ ದಾಖಲೆಯನ್ನು ಮುರಿದಿದೆ.

kurukeshtra First Day Collecation 16 crore rupees

By

Published : Aug 11, 2019, 1:47 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಬಹುತಾರಾಗಣದ ಸಿನಿಮಾ ಕುರುಕ್ಷೇತ್ರ ಮೊದಲ ದಿನವೇ ಬಾಕ್ಸ್​ ಆಫೀಸ್​ ಚಿಂದಿ ಉಡಾಯಿಸಿದೆ. ಬಿಡುಗಡೆಯಾದ ಮೊದಲ ದಿನ ಬರೊಬ್ಬರಿ ₹ 16 ಕೋಟಿ ಗಳಿಸಿ, ಕೆಜಿಎಫ್​ ದಾಖಲೆಯನ್ನು ಅಳಿಸಿಹಾಕಿದೆ.

ಕುರುಕ್ಷೇತ್ರ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ 700ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು. ವಿತರಕ ರಾಕ್ ಲೈನ್ ವೆಂಕಟೇಶ್ ಅವರ ಆಪ್ತರ ಪ್ರಕಾರ, ಕನ್ನಡದಲ್ಲಿ₹ 14 ಕೋಟಿ, ಆಂಧ್ರಪ್ರದೇಶದಲ್ಲಿ ₹ 2 ಕೋಟಿ ಮೊದಲ ಕಲೆಕ್ಷನ್‌ ಮಾಡಿದೆ. ಈ ಮೂಲಕ ಕೆಜಿಎಫ್, ದಿ ವಿಲನ್ ಸಿನಿಮಾಗಳ ಫಸ್ಟ್ ಡೇ ಕಲೆಕ್ಷನ್‌ ದಾಖಲೆಯನ್ನು ಮುರಿದಿದೆ.

ಕನ್ನಡದಲ್ಲಿ₹ ಥಿಯೇಟರ್ ಬಾಡಿಗೆ ಹೊರತುಪಡಿಸಿ ₹ 12 ಕೋಟಿ ನೆಟ್ ಪ್ರಾಫಿಟ್​ ಆಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟಗಳಲ್ಲಿ, ಟಿಕೆಟ್ ಬೆಲೆ ₹ 150 ರಿಂದ ₹ 200 ಇತ್ತು. ಈ ಸಿನಿಮಾ 3D ಇದ್ದ ಕಾರಣ ಸಿಂಗಲ್ ಸ್ಕ್ರೀನ್​ನಲ್ಲಿ ₹ 400 ರಿಂದ ₹ 500 ಟಿಕೆಟ್ ಬೆಲೆ ಹೆಚ್ಚಾಗಿತ್ತು. ಮಲ್ಟಿಪ್ಲೆಕ್ಸ್ ಥಿಯೇಟರ್​ನಲ್ಲಿ ಕುರುಕ್ಷೇತ್ರ ಟಿಕೆಟ್ ₹ 800-1000 ಮಾಡಲಾಗಿತ್ತು.

ಕೆಜಿಎಫ್ ಮೊದಲ ದಿನ ₹ 10.25 ಕೋಟಿ, ದಿ ವಿಲನ್ ₹ 10 ಕೋಟಿ ಗಳಿಸಿದ್ದವು. ಆದರೆ ಕುರುಕ್ಷೇತ್ರ ಕನ್ನಡದಲ್ಲಿ ಫಸ್ಟ್ ಡೇ ಕಲೆಕ್ಷನ್‌ ₹ 14 ಕೋಟಿ ಆಗಿದೆ. ಇನ್ನು ಕುರುಕ್ಷೇತ್ರ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ವಾರಾಂತ್ಯಕ್ಕೆ ₹ 100 ಕೋಟಿ ಕ್ಲಬ್ ಸೇರುವ ಸೂಚನೆ ಸಿಕ್ಕಿದೆ ಎನ್ನಲಾಗಿದೆ. ರಾಜ್ಯದಲ್ಲಿ ಮಳೆ ಹಾಗು ಪ್ರವಾಹದ ಮಧ್ಯೆಯೂ ₹ 16 ಕೋಟಿ ಕಲೆಕ್ಷನ್‌ ಮಾಡಿರುವುದು ಚಿತ್ರತಂಡಕ್ಕೆ ಖುಷಿ ತಂದಿದೆ.

ABOUT THE AUTHOR

...view details