ಕರ್ನಾಟಕ

karnataka

ETV Bharat / sitara

ಕೊನೆಗೂ ನನಸಾದ ಕನಸು...ಕುರಿ ಪ್ರತಾಪ್ ಈಗ ಹೀರೋ - Kuri pratap in RC brothers film

ಇಷ್ಟು ದಿನಗಳ ಕಾಲ ಹಾಸ್ಯದ ಮೂಲಕ ಎಲ್ಲರನ್ನೂ ನಕ್ಕು ನಲಿಸುತ್ತಿದ್ದ ಕುರಿ ಪ್ರತಾಪ್ ಈಗ 'ಆರ್​ಸಿ ಬ್ರದರ್ಸ್' ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಕುರಿ ಪ್ರತಾಪ್ ಜೊತೆಗೆ ತಬಲಾ ನಾಣಿ ಕೂಡಾ ನಟಿಸಿದ್ದು ಚಿತ್ರದಲ್ಲಿ ಹಾಸ್ಯದ ಜೊತೆಗೆ ಅಣ್ಣ-ತಮ್ಮನ ಬಾಂಧವ್ಯದ ಕಥೆ ಕೂಡಾ ಇರಲಿದೆಯಂತೆ.

Kuri pratap
ಕುರಿ ಪ್ರತಾಪ್

By

Published : Feb 18, 2021, 12:23 PM IST

ಕನ್ನಡದ ಜನಪ್ರಿಯ ಕಾಮಿಡಿ ನಟರಲ್ಲಿ ಕುರಿ ಪ್ರತಾಪ್ ಕೂಡಾ ಒಬ್ಬರು. ಇದುವರೆಗೂ ಅವರು ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಯಾವ ಸಿನಿಮಾದಲ್ಲಿ ಕೂಡಾ ಹೀರೋ ಆಗಿ ನಟಿಸಿರಲಿಲ್ಲ. ಇದೀಗ ಅವರು ಸಿನಿಮಾವೊಂದರಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬ ನಾಯಕ ಕೂಡಾ ಇದ್ದಾರೆ.

'ಆರ್​ಸಿ ಬ್ರದರ್ಸ್' ಎಂಬ ಸಿನಿಮಾದಲ್ಲಿ ಕುರಿ ಪ್ರತಾಪ್ ನಟಿಸುತ್ತಿದ್ದಾರೆ. ಆರ್​​ಸಿ ಎಂದರೆ ಎಲ್ಲರಿಗೂ ನೆನಪಾಗುವುದು ರಾಯಲ್ ಚಾಲೆಂಜರ್ಸ್ ಕ್ರಿಕೆಟ್​ ತಂಡ. ಈ ತಂಡಕ್ಕೂ, ಸಿನಿಮಾಗೂ ಏನಾದರೂ ಸಂಬಂಧವಿದೆಯಾ ಎಂಬ ಪ್ರಶ್ನೆ ಬರುವುದು ಸಹಜ. ಈ ಬಗ್ಗೆ ಚಿತ್ರತಂಡದವರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಮುಂದಿನ ತಿಂಗಳು ಚಿತ್ರ ಪ್ರಾರಂಭವಾಗಲಿದ್ದು, ಆ ಸಂದರ್ಭದಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಹಂಚಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಪ್ರತಾಪ್ ಜೊತೆಗೆ ತಬಲಾ ನಾಣಿ ಕೂಡಾ ನಟಿಸಲಿದ್ದು. ಅವರಿಬ್ಬರೂ ಸೇರಿ 'ಆರ್​ಸಿ ಬ್ರದರ್ಸ್' ಆಗಲಿದ್ದಾರೆ. ಪ್ರತಾಪ್ ಜೊತೆಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನಾ ನಾಯಕಿಯಾಗಿ ನಟಿಸಲಿದ್ದು, ತಬಲಾ ನಾಣಿಗೆ ನಾಯಕಿಯ ಹುಡುಕಾಟ ನಡೆಯುತ್ತಿದೆಯಂತೆ.

ಇದನ್ನೂ ಓದಿ: ದಿಶಾ ರವಿ ಪರ ದನಿಯೆತ್ತಿದ ನಟಿ, ಮಾಜಿ ಸಂಸದೆ ರಮ್ಯ

ಕುರಿ ಪ್ರತಾಪ್ ಮತ್ತು ತಬಲಾ ನಾಣಿ ಇಬ್ಬರೂ ಜೊತೆಯಾಗಿ ನಟಿಸುತ್ತಿದ್ದಾರೆಂದರೆ, ಇದೊಂದು ಪಕ್ಕಾ ಕಾಮಿಡಿ ಚಿತ್ರ ಎಂದನಿಸಬಹುದು. ಆದರೆ, ಇದು ಕಾಮಿಡಿ ಚಿತ್ರವಷ್ಟೇ ಅಲ್ಲ, ಅಣ್ಣ-ತಮ್ಮನ ಬಾಂಧವ್ಯದ ಕಥೆಯೂ ಹೌದು ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರವನ್ನು ಪ್ರಕಾಶ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಹಲವು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅವರು, ಇದೇ ಮೊದಲ ಬಾರಿಗೆ ಸ್ವತಂತ್ರ್ಯವಾಗಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಕಥೆ-ಚಿತ್ರಕಥೆ ಕೂಡಾ ಅವರದ್ದೇ. ಈ ಕಥೆಗೆ ತಬಲಾ ನಾಣಿ ಸಂಭಾಷಣೆ ಬರೆಯುತ್ತಿದ್ದಾರೆ. ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಎಲ್ಲವೂ ಫೈನಲ್ ಆಗಲಿದೆ.

ABOUT THE AUTHOR

...view details