ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯನಟ ಕುರಿ ಪ್ರತಾಪ್ ಬಿಗ್ಬಾಸ್ ಮನೆ ಸೇರಿ ಮೂರನೇ ವಾರ ಕಳೆದಿದ್ದು, ರಿಯಾಲಿಟಿ ಶೋನಲ್ಲಿರುವ ಕಾರಣ ತಮ್ಮ ಸಿನಿಮಾದ ಪ್ರಚಾರಕ್ಕೆ ಹೋಗದಂತಹ ಸ್ಥಿತಿ ಇದೀಗ ನಿರ್ಮಾಣಗೊಂಡಿದೆ.
ಕುರಿ ಪ್ರತಾಪ್ ಮೊದಲ ಬಾರಿಗೆ ‘ಮನೆ ಮಾರಾಟ್ಟಕ್ಕಿದೆ’ ಸಿನಿಮಾದಲ್ಲಿ ನಟಿ ಕಾರುಣ್ಯ ರಾಮ್ ಜೊತೆ ಡ್ಯೂಯಟ್ ಹಾಡಿದ್ದು, ಆ ಗೀತೆ ನಿನ್ನೆ ಬಿಡುಗಡೆಯಾಗಿ ಯೂಟ್ಯೂಬ್ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅಭಿಮನ್ ರಾಯ್ ಸಂಗೀತ ನೀಡಿದ್ದಾರೆ. ಸುರೇಶ್ ಬಾಬು ಛಾಯಾಗ್ರಾಹಣವಿರುವ ಈ ಚಿತ್ರಕ್ಕೆ ಎನ್.ಎಂ.ವಿಶ್ವ ಸಂಕಲನ ಮಾಡಿದ್ದಾರೆ.
ಸಾಧು ಕೋಕಿಲ, ರವಿಶಂಕರ್ ಹಾಗೂ ಚಿಕ್ಕಣ್ಣ ಅವರ ಜೊತೆ ಹಾಸ್ಯ ಮಿಶ್ರಿತ ಸಿನಿಮಾದಲ್ಲಿ ಹೆಚ್ಚು ಸ್ಕೋರ್ ಮಾಡಿರುವ ಕುರಿ ಪ್ರತಾಪ್, ಇದೀಗ ಚಿತ್ರದ ಪ್ರಚಾರಕ್ಕೆ ಅವರೇ ಇಲ್ಲದಿರುವುದು ನಿರ್ಮಾಪಕರಿಗೆ ಸ್ವಲ್ಪ ಮಟ್ಟದ ಇರಿಸು ಮುರುಸು ಆಗಿದೆ.
'ಮನೆ ಮಾರಾಟ್ಟಕ್ಕಿದೆ' ಸಿನಿಮಾದಲ್ಲೂ ನಾಲ್ವರು ಹಾಸ್ಯ ನಟರದೇ ಪ್ರಮುಖ ಪಾತ್ರ. ಶ್ರುತಿ ಹರಿಹರನ್ ಚಿತ್ರದ ಕಥಾ ನಾಯಕಿ. ಈ ಚಿತ್ರ ಕಥಾ ನಾಯಕಿ 'ಮೀಟೂ' ಪ್ರಕರಣದ ನಂತರ, ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಚಿತ್ರರಂಗ ಅಷ್ಟಾಗಿ ಅವರನ್ನು ಸೆಳೆಯಲಿಲ್ಲ. ಈ ಸಿನಿಮಾ ನವೆಂಬರ್ 15 ರಂದು ಬಿಡುಗಡೆಯಾಗಲಿದೆ.