ಹಿರಿಯ ನಟ ಕುಣಿಗಲ್ ನಾಗಭೂಷಣ್ ಪತ್ನಿ ಸರ್ವಮಂಗಳ ನಿನ್ನೆ ವಿಧಿವಶರಾಗಿದ್ದಾರೆ.
ಕುಣಿಗಲ್ ನಾಗಭೂಷಣ್ ಪತ್ನಿ ಸರ್ವಮಂಗಳ ಇನ್ನಿಲ್ಲ ನಟನೆ, ಸಂಭಾಷಣೆ ಹಾಗೂ ನಿರ್ದೇಶನದಿಂದ ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ್ದವರು ಕುಣಿಗಲ್ ನಾಗಭೂಷಣ್. 2013ರಲ್ಲಿ ಕುಣಿಗಲ್ ನಾಗಭೂಷಣ್ ಹೃದಯಾಘಾತದಿಂದ ಬದುಕಿನ ಪಯಣ ಮುಗಿಸಿದ್ದು, ನಾಗಭೂಷಣ್ ನಿಧನದ 7 ವರ್ಷದ ಬಳಿಕ ಪತ್ನಿ ಸರ್ವಮಂಗಳ ವಿಧಿವಶರಾಗಿದ್ದಾರೆ.
ರಾಜ್ಕುಮಾರ್ ಜೊತೆ ಕುಣಿಗಲ್ ನಾಗಭೂಷಣ್ 68 ವರ್ಷ ವಯಸ್ಸಾಗಿದ್ದ, ಸರ್ವಮಂಗಳ ನಿನ್ನೆ ರಾತ್ರಿ 8.30ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇನ್ನು ಸರ್ವಮಂಗಳ ಕೂಡ ಸಿನಿಮಾದಲ್ಲಿ ನಟಿಸಿದ್ದು, 'ಭಂಡ ನನ್ನ ಗಂಡ' 'ಹೆಂಡ್ತಿಯರೇ ಹುಶಾರ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
'ಯಾರಿಗು ಹೇಳ್ಬೇಡಿ' ಚಿತ್ರದಲ್ಲಿ 'ಚೆನ್ನಾಗ್ ಹೇಳಿದ್ರಿ ಅನ್ನೋ' ಸಂಭಾಷಣೆಯಿಂದ ಫೆಮಸ್ ಆಗಿದ್ರು. ಇನ್ನೂ ನಾಗಭೂಷಣ್ ಹಾಗೂ ಸರ್ವಮಂಗಳ ಮೊದಲಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಲವ್ ಬರ್ಡ್ಸ್ ಅಂತಾನೇ ಫೇಮಸ್ ಆದವ್ರು. ಸುಮ್ಮನಳ್ಳಿಯ ಚಿತಾಗಾರದಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ವರ್ಗ ತಿಳಿಸಿದೆ.