ಕರ್ನಾಟಕ

karnataka

ETV Bharat / sitara

ಸಿಲ್ವರ್ ಸ್ಕ್ರೀನ್ ಮೇಲೆ ಒಟ್ಟೊಟ್ಟಿಗೆ ಮಿಂಚಲು ರೆಡಿಯಾದ್ರು ದಿಗಂತ್-ಐಂದ್ರಿತಾ - ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ,

ದಿಗಂತ್ ಹಾಗೂ ಐಂದ್ರಿತಾ ರೇ ಬಹಳ ದಿನಗಳ ಬಳಿಕ ಒಟ್ಟಿಗೆ ನಟಿಸುತ್ತಿರುವ 'ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿದ್ದು, ಸದ್ಯದಲ್ಲೇ ತೆರೆಗೆ ಬರೋದಿಕ್ಕೆ ಸಜ್ಜಾಗಿದೆ.

Kshamisi nima katheyalli hanavilla movie release soon
ಸಿಲ್ವರ್ ಸ್ಕ್ರೀನ್ ಮೇಲೆ ಒಟ್ಟಿಗೆ ಮಿಂಚೋದಿಕ್ಕೆ ರೆಡಿಯಾದ ದಿಗಂತ್-ಐಂದ್ರಿತಾ ರೇ!

By

Published : Apr 13, 2021, 12:02 PM IST

'ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ' ದಿಗಂತ್ ಹಾಗೂ ಐಂದ್ರಿತಾ ರೇ ಬಹಳ ದಿನಗಳ ಬಳಿಕ ಒಟ್ಟಿಗೆ ನಟಿಸುತ್ತಿರುವ ಸಿನಿಮಾ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರ ಸದ್ಯದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ‌.

ಸಿಲ್ವರ್ ಸ್ಕ್ರೀನ್ ಮೇಲೆ ಒಟ್ಟಿಗೆ ಮಿಂಚೋದಿಕ್ಕೆ ರೆಡಿಯಾದ ದಿಗಂತ್-ಐಂದ್ರಿತಾ ರೇ

'ಕ್ಷಮಿಸಿ‌‌ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಚಿತ್ರೀಕರಣ ಸಂಪೂರ್ಣವಾಗಿದ್ದು, ಸಾಗರ, ಸಿಗಂದೂರು, ಬೆಂಗಳೂರು ಹಾಗೂ ಇನ್ನಿತರ ಕಡೆಗಳಲ್ಲಿ ಚಿತ್ರೀಕರಣ ಜರುಗಿದೆ. ಸಿನಿಮಾದಲ್ಲಿ ದಿಗಂತ್ ಅಡಿಕೆ ಬೆಳೆಯುವ ರೈತನಾಗಿ ಕಾಣಿಸಿಕೊಂಡಿದ್ದಾರೆ. ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಪತ್ರಕರ್ತ ವಿನಾಯಕ ಕೋಡ್ಸರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಬೆಂಗಳೂರಿನ ಖ್ಯಾತ ಸ್ಟುಡಿಯೋವೊಂದರಲ್ಲಿ ಹಿನ್ನೆಲೆ ಸಂಗೀತ ಅಳವಡಿಸಲಾಗುತ್ತಿದೆ.‌ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿರುವ ಈ‌ ಚಿತ್ರಕ್ಕೆ ಪ್ರಜ್ವಲ್ ಪೈ ಅವರ ಸಂಗೀತ ನಿರ್ದೇಶನವಿದೆ.

ನಟ ದಿಗಂತ್ ಮಂಚಾಲೆ

ರವೀಂದ್ರ ಜೋಶಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. ನಂದ ಕಿಶೋರ್ ಎನ್​​​​. ರಾವ್ ಛಾಯಾಗ್ರಹಣ ಹಾಗೂ ರಾಹುಲ್ ವಸಿಷ್ಠ ಅವರ ಸಂಕಲನವಿರುವ ಈ‌ ಚಿತ್ರದ ಹಾಡುಗಳನ್ನು ವಿಶ್ವಜಿತ್ ರಾವ್ ಹಾಗೂ ತ್ರಿಲೋಕ್ ತ್ರಿವಿಕ್ರಮ್​​​ ರಚಿಸಿದ್ದಾರೆ. ವೇಣು ಹಸ್ರಾಳಿ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ನಟ ದಿಗಂತ್ ಮಂಚಾಲೆ

ಉಪ್ಪಿ ಎಂಟರ್​ಟೈನರ್​​​​​​​​​​​​​​​​​​​​​​​​​​​​​​​​​ ಲಾಂಛನದಲ್ಲಿ ಸಿಲ್ಕ್ ಮಂಜು ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಂಪೂರ್ಣ ಹಾಸ್ಯಮಯ ಕಥಾಹಂದರ ಹೊಂದಿರುವ ಈ ಚಿತ್ರದ ತಾರಾಬಳಗದಲ್ಲಿ ದಿಗಂತ್, ಐಂದ್ರಿತಾ ರೇ, ಹಿರಿಯ ನಟಿ‌ ಉಮಾಶ್ರೀ, ರಂಜನಿ ರಾಘವನ್, ಕಾಸರಗೋಡು ಚಿನ್ನ, ಪಿ.ಡಿ. ಸತೀಶ್‌ ಹಾಗೂ ನೀನಾಸಂನ ಹಲವು ಕಲಾವಿದರು ‌ನಟಿಸಿದ್ದಾರೆ.

ABOUT THE AUTHOR

...view details