ಕರ್ನಾಟಕ

karnataka

ETV Bharat / sitara

'ಲೋಕಲ್ ಟ್ರೈನ್' ಹತ್ತಿ ಎಲ್ಲಿಗೆ ಹೊರಟಿದ್ದಾರೆ ಕೃಷ್ಣ? - ಲೋಕಲ್ ಟ್ರೈನ್ ಹತ್ತಿರುವ ಕೃಷ್ಣ

ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ 'ಲೋಕಲ್ ಟ್ರೈನ್' ಅನ್ನು ಸುಮಾರು 70 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ನಿರ್ಮಾಪಕ ಎಸ್​​​.ಹೆಚ್​​​​. ವಾಳ್ಕೆ ಅವರೇ ಈ ಸಿನಿಮಾಗೆ ಕಥೆ ಬರೆದಿದ್ದರೆ, ರುದ್ರಮುನಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

Local train
'ಲೋಕಲ್ ಟ್ರೈನ್'

By

Published : Jan 2, 2020, 10:43 AM IST

'ಲವ್ ಮಾಕ್ಟೈಲ್' ಚಿತ್ರದ ನಿರ್ದೇಶನ ಹಾಗೂ ​ನಟನೆ ಮುಗಿಸಿರುವ ಡಾರ್ಲಿಂಗ್ ಕೃಷ್ಣ ಈಗ ‘ಲೋಕಲ್ ಟ್ರೈನ್’ ಏರಿದ್ದಾರೆ. ಇದೇನಪ್ಪ ಕೃಷ್ಣ ಟ್ರೈನ್ ಹತ್ತಿ ಎಲ್ಲಿಗೆ ಹೊರಟಿದ್ದಾರೆ ಎಂದು ಯೋಚಿಸುತ್ತಿದ್ದೀರ..? ಈ 'ಲೋಕಲ್ ಟ್ರೈನ್' ಕೃಷ್ಣ ನಟನೆಯ ಹೊಸ ಚಿತ್ರದ ಹೆಸರು.

'ಲೋಕಲ್ ಟ್ರೈನ್'

ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ 'ಲೋಕಲ್ ಟ್ರೈನ್' ಅನ್ನು ಸುಮಾರು 70 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ನಿರ್ಮಾಪಕ ಎಸ್​​​.ಹೆಚ್​​​​. ವಾಳ್ಕೆ ಅವರೇ ಈ ಸಿನಿಮಾಗೆ ಕಥೆ ಬರೆದಿದ್ದಾರೆ. ರುದ್ರಮುನಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಐದು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ಹಾಡುಗಳ ಅನಾವರಣದೊಂದಿಗೆ ‘ಲೋಕಲ್ ಟ್ರೈನ್’ ಚಿತ್ರದ ಪ್ರಚಾರ ಕಾರ್ಯ ಕೂಡಾ ಆರಂಭ ಆಗಲಿದೆ.

ಚಿತ್ರಕ್ಕೆ ರಮೇಶ್ ಬಾಬು ಛಾಯಾಗ್ರಹಣ, ಪಿ.ಆರ್​​​. ಸುಂದರ್ ರಾಜ್ ಸಂಕಲನ, ರಾಜು ಸುಂದರಂ, ಚಿನ್ನಿ ಪ್ರಕಾಶ್ ಹಾಗೂ ಫಳಣಿರಾಜ್ ನೃತ್ಯ ನಿರ್ದೇಶನ ಇದೆ. ಕೇಶವಾದಿತ್ಯ ಹಾಗೂ ಮಾರುತಿ ಟಿ. ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಮಂಗಳೂರು ಚೆಲುವೆ ಎಸ್ತರ್ ನರೋನ್ಹಾ ಕೂಡಾ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಸುಚೇಂದ್ರ ಪ್ರಸಾದ್, ಸಾಧು ಕೋಕಿಲ, ಚಿ. ಗುರುದತ್, ಮೈಸೂರು ಗೋಪಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ನಾಯಕಿಯರೊಂದಿಗೆ ಕೃಷ್ಣ

ABOUT THE AUTHOR

...view details