ಸ್ಯಾಂಡಲ್ವುಡ್ನಲ್ಲಿ 'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ' ಹೇಳಿ, 'ಫೇರ್ ಅಂಡ್ ಲವ್ಲಿ' ಹಚ್ಚಿ, 'ಕಿರುಗೂರಿನ ಗಯ್ಯಾಳಿ'ಯಾಗಿ ಮಿಂಚಿದ್ದ ನಟಿ ಶ್ವೇತಾ ಶ್ರೀವಾತ್ಸವ್ ಸದ್ಯ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯಶೋದಾಕೃಷ್ಣನ ವೇಷ ಭೂಷಣ ತೊಟ್ಟು ಮುದ್ದಾದ ಮಗುವಿನ ಜೊತೆ ಫೋಟೋಶೂಟ್ ಮಾಡಿಸಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿದ ಅಮ್ಮ ಮಗಳು ನಟಿ ಶ್ವೇತಾ ಶ್ರೀವಾತ್ಸವ್ ಮಗಳು ಅಶ್ಮಿತಾ ಫೋಟೋ ಶೂಟ್ ಶ್ವೇತಾ ತಮ್ಮ ಪುತ್ರಿ ಅಶ್ಮಿತಾ ಶ್ರೀವಾತ್ಸವ್‌ಗೆ ಕೃಷ್ಣನ ವೇಷ ಹಾಕಿ, ಕೃಷ್ಣ ಜನ್ಮಾಷ್ಟಮಿಯನ್ನ ವಿಶೇಷವಾಗಿ ಆಚರಿಸಿದ್ದಾರೆ. ಗೋಪಾಲನ ರೂಪದಲ್ಲಿ ಮುದ್ದು ಗೊಂಬೆ ಅಶ್ಮಿತಾ, ಯಶೋದೆಯಾಗಿ ಶ್ವೇತಾ ಶ್ರೀವಾತ್ಸವ್ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಬೆಣ್ಣೆ ಕಳ್ಳನಾದ ಅಶ್ಮಿತಾ ಶ್ರೀವಾತ್ಸವ್ ಫೋಟೋಗ್ರಾಫರ್ ಮಂಜು, ಅಮ್ಮ ಮತ್ತು ಮಗಳ ಸುಂದರ ಪೋಟೋಗಳನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದಿದ್ದಾರೆ. ಮಧುಮಿತಾ ಎಂಬ ಮೇಕಪ್ ಆರ್ಟಿಸ್ಟ್ , ಥೇಟ್ ಕೃಷ್ಣ, ಯಶೋಧೆ ಶೈಲಿಯಲ್ಲಿ ಮೇಕಪ್ ಮಾಡಿದ್ದು, ಡಿಸೈನರ್ ನಮ್ರತಾ, ವೈಷ್ಣವಿ ಅವರ ಜ್ಯುವೆಲರಿ, ವೀಣಾ ಅವರ ಬ್ಯಾಕ್‌ಡ್ರಾಪ್‌ನಲ್ಲಿ ಶ್ವೇತಾ ಶ್ರೀವಾತ್ಸವ್ ಹಾಗು ಅಶ್ಮಿತಾ ಕೃಷ್ಣ ಹಾಗೂ ಯಶೋಧೆಯಾಗಿ ಮಿಂಚಿದ್ದಾರೆ.
ಮಗಳ ಜೊತೆ ಪೋಟೋ ಶೂಟ್ ಮಾಡಿಸಿದ ನಟಿ ಶ್ವೇತಾ ಸದ್ಯ ಅಮ್ಮ ಮಗಳ ಯಶೋಧಾ ನಂದನ ಫೋಟೋಗಳು ನೋಡುಗರನ್ನ ಇಂಪ್ರೆಸ್ ಮಾಡುತ್ತಿದೆ. ಶ್ವೇತಾ ಶ್ರೀವಾತ್ಸವ್ ಸಿನಿಮಾ ಅಲ್ಲದೇ ಮಗಳ ಜೊತೆ ಆಗಾಗ ಕಲರ್ ಫುಲ್ ಫೋಟೋ ಶೂಟ್ ಮಾಡಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.
ಕೃಷ್ಣ ಜನ್ಮಾಷ್ಟಮಿಯನ್ನ ವಿಶೇಷವಾಗಿ ಆಚರಿಸಿದ ಶ್ವೇತಾ ಶ್ರೀವಾತ್ಸವ್