ಬಾಲಿವುಡ್ ನಟರು ಹಾಲಿವುಡ್ಗೆ ಹೋಗುವುದು ಸಾಮಾನ್ಯ. ಆದರೆ ಸ್ಯಾಂಡಲ್ವುಡ್ ನಟ-ನಟಿಯರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವುದು ಬಹಳ ಅಪರೂಪ. ಇದೀಗ ನಟಿ ಕೃಷ್ಣಾ ಭಟ್ ಕೂಡಾ ಹಾಲಿವುಡ್ಗೆ ಹಾರಿದ್ದಾರೆ. 'ಸವರ್ಣಧೀರ್ಘಸಂಧಿ' ಸಿನಿಮಾ ನೋಡಿರುವವರಿಗೆ ಕೃಷ್ಣಾ ಭಟ್ ನೆನಪಿರುತ್ತಾರೆ.
ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ಕನ್ನಡತಿ ಕೃಷ್ಣಾ ಭಟ್ - ಕಿಡ್ ಹ್ಯಾಪಿ ಇಂಗ್ಲೀಷ್ ಚಿತ್ರದಲ್ಲಿ ಕೃಷ್ಣಾ ಭಟ್ ನಟನೆ
ಕೃಷ್ಣಾ ಭಟ್ ಹಿರಿಯ ನಟಿ ವಿನಯಾ ಪ್ರಸಾದ್ ಅವರಿಗೆ ಸೋದರ ಸೊಸೆ ಆಗಬೇಕು. ಅಂದರೆ ವಿನಯಾ ಪ್ರಸಾದ್ ಸಹೋದರ ರವಿಭಟ್ ಅವರ ಪುತ್ರಿಯೇ ಕೃಷ್ಣಾಭಟ್. ‘ಸವರ್ಣಧೀರ್ಘ ಸಂಧಿ’ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿ ಯಾವ ಪಾತ್ರ ಮಾಡಲು ಕೂಡಾ ನಾನು ಸೈ ಎನಿಸಿಕೊಂಡಿದ್ದಾರೆ. ತಮ್ಮ ಎರಡನೇ ಸಿನಿಮಾಗಾಗಿ ಕೃಷ್ಣಾ ಭಟ್ ಇದೀಗ ಹಾಲಿವುಡ್ ಪ್ರವೇಶಿಸಿದ್ದಾರೆ.

ಈ ಕೃಷ್ಣಾ ಭಟ್ ಹಿರಿಯ ನಟಿ ವಿನಯಾ ಪ್ರಸಾದ್ ಅವರಿಗೆ ಸೋದರ ಸೊಸೆ ಆಗಬೇಕು. ಅಂದರೆ ವಿನಯಾ ಪ್ರಸಾದ್ ಸಹೋದರ ರವಿಭಟ್ ಅವರ ಪುತ್ರಿಯೇ ಕೃಷ್ಣಾಭಟ್. ‘ಸವರ್ಣಧೀರ್ಘ ಸಂಧಿ’ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿ ಯಾವ ಪಾತ್ರ ಮಾಡಲು ಕೂಡಾ ನಾನು ಸೈ ಎನಿಸಿಕೊಂಡಿದ್ದಾರೆ. ತಮ್ಮ ಎರಡನೇ ಸಿನಿಮಾಗಾಗಿ ಕೃಷ್ಣಾ ಭಟ್ ಇದೀಗ ಹಾಲಿವುಡ್ ಪ್ರವೇಶಿಸಿದ್ದಾರೆ. ಅವರು ಅಭಿನಯಿಸುತ್ತಿರುವ ಆಂಗ್ಲಭಾಷೆಯ ಸಿನಿಮಾ ಹೆಸರು 'ಕಿಡ್ ಹ್ಯಾಪಿ'. ಇಂಡೋ ಅಮೆರಿಕನ್ ಪ್ರತಿಭೆ ಕ್ರಿಸ್ ಚೆಪೈಕೋಡ್ ನಿರ್ದೇಶನದ ಸಿನಿಮಾ ಇದು . ಆಂಗ್ಲ ಭಾಷೆಯ ಚಿತ್ರದಲ್ಲಿ ಕೃಷ್ಣಾ ಭಟ್, ಮಲ್ಲಿಕ ಎಂಬ ಭಾರತೀಯ ಯುವತಿ ಪಾತ್ರ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ನಾಯಕ ನರೆನ್ ವೇಸ್ ತಾಯಿ ಅಮೆರಿಕನ್ ಹಾಗೂ ತಂದೆ ಭಾರತೀಯ. ನಾಯಕ ತನ್ನ ತಂದೆಯನ್ನು ಹುಡುಕಿಕೊಂಡು ಭಾರತಕ್ಕೆ ಬಂದಾಗ ಮಲ್ಲಿಕ ಪರಿಚಯ ಆಗುತ್ತದೆ. ಮುಂದೆ ಇವರ ನಡುವೆ ಪ್ರೀತಿ ಕೂಡಾ ಉಂಟಾಗುತ್ತದೆ. ಕೃಷ್ಣ ಈ ಚಿತ್ರಕ್ಕಾಗಿ ದೊಣ್ಣೆ ವರಸೆಯನ್ನು ಕೂಡಾ ಕಲಿತಿದ್ದಾರಂತೆ. ನಿರ್ದೇಶಕ ಕ್ರಿಸ್, ನಿಜ ಜೀವನದಲ್ಲಿ ಕೂಡಾ ಇಂಡೋ-ಅಮೆರಿಕನ್ ಪ್ರಜೆ. ಸುಮಾರು ಮೂರು ವಾರಗಳ ಕಾಲ ಆಗುಂಬೆ ಹಾಗೂ ನ್ಯೂಯಾರ್ಕಿನಲ್ಲಿ ಕೃಷ್ಣಾ ಪಾತ್ರದ ಚಿತ್ರೀಕರಣ ಮಾಡಲಾಗಿದೆ. ಮೇಘನಾ ಸಿಬೊನ್ ನಿರ್ಮಾಣದ ಈ ಸಿನಿಮಾ ಸದ್ಯಕ್ಕೆ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.