ಕರ್ನಾಟಕ

karnataka

ETV Bharat / sitara

ಈ ಸಿನಿಮಾಕ್ಕೆ ನಾಯಕ ನಾಯಕಿಯರೇ ಪ್ರೊಡ್ಯುಸರ್ಸ್​​​​​ - ಮಿಲನ ನಾಗರಾಜ್

ಕೆಲವು ವರ್ಷಗಳಿಂದ ಒಳ್ಳೆ ಕಥೆಗಳು ಹಾಗೂ ನಿರ್ದೇಶಕರು ಹುಡುಕಿಕೊಂಡು ಬಂದು ಸಿನಿಮಾ ಮಾಡ್ತಾರೆ ಅಂದುಕೊಂಡಿದ್ದ ಡಾರ್ಲಿಂಗ್ ಕೃಷ್ಣನಿಗೆ ಏನಾದ್ರು ಮಾಡಬೇಕು ಅಂದುಕೊಂಡ ಟೈಮಲ್ಲಿ ಹುಟ್ಟಿಕೊಂಡ ಚಿತ್ರವೇ ಲವ್ ಮಾಕ್ ಟೈಲ್.

krishna and milana produced love mock tile
ಈ ಸಿನಿಮಾಕ್ಕೆ ನಾಯಕ ನಾಯಕಿಯರೇ ಪ್ರೊಡ್ಯೂಸರ್ಸ್​​​​​

By

Published : Jan 28, 2020, 10:55 PM IST

ಸ್ಯಾಂಡಲ್​​​ವುಡ್​​​ನಲ್ಲಿ ಟೈಟಲ್​​ನಿಂದಲೇ ಟಾಕ್ ಆಗುತ್ತಿರುವ ಸಿನಿಮಾ 'ಲವ್ ಮಾಕ್ ಟೈಲ್'. ಮದರಂಗಿ ಸಿನಿಮಾ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಈ ಸಿನಿಮಾದಲ್ಲಿ ನಟನೆಯ ಜೊತೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯ ಚಿತ್ರ ಟ್ರೈಲರ್ ಹಾಗೂ ಹಾಡುಗಳಿಂದಲೇ ಸಖತ್​​ ಸದ್ದು ಮಾಡುತ್ತಿದೆ.

ಕೆಲವು ವರ್ಷಗಳಿಂದ ಒಳ್ಳೆ ಕಥೆಗಳನ್ನು ನಿರ್ದೇಶಕರು ಮತ್ತು ನಿರ್ಮಾಪಕರು ಹುಡುಕಿಕೊಂಡು ಬಂದು ಸಿನಿಮಾ ಮಾಡ್ತಾರೆ ಅಂದುಕೊಂಡಿದ್ದ ಡಾರ್ಲಿಂಗ್ ಕೃಷ್ಣನಿಗೆ ಏನಾದ್ರು ಮಾಡಬೇಕು ಅಂದುಕೊಂಡ ಟೈಮಲ್ಲಿ ಹುಟ್ಟಿಕೊಂಡ ಚಿತ್ರವೇ ಲವ್ ಮಾಕ್ ಟೈಲ್. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮೂರು ಶೇಡ್​​ನಲ್ಲಿ ಅಭಿನಯಿಸಿದ್ದಾರೆ. ಮಿಲನ ನಾಗರಾಜ್ ಈ ಚಿತ್ರಕ್ಕೆ ಹೀರೋಯಿನ್ ಆಗೋದಿಕ್ಕೆ ಬಂದು, ನಿರ್ಮಾಪಕಿ ಆಗಿರೋದು ಅಚ್ಚರಿ.

ಈ ಸಿನಿಮಾಕ್ಕೆ ನಾಯಕ ನಾಯಕಿಯರೇ ಪ್ರೊಡ್ಯೂಸರ್ಸ್​​​​​

ಮಿಲನ ನಾಗರಾಜ್ ಹೇಳಿದಂತೆ, ನಟಿ, ಅಲ್ಲದೇ , ಪ್ರೊಡಕ್ಷನ್ ಕೆಲಸ, ಮೇಕಪ್, ಸೆಟ್ಟು, ಡಿಸೈನ್, ಹೀಗೆ ಎಲ್ಲಾ ತರಹದ ಕೆಲಸವನ್ನ ಸಂಭಾವನೆ ಇಲ್ಲದೆ ಮಾಡಿದ್ದಾರಂತೆ. ಇನ್ನೂ ಅಮೃತಾ ಅಯ್ಯಂಗಾರ್ ಚಿತ್ರದಲ್ಲಿ ಮೂರು ಜನ ನಾಯಕಿಯರಲ್ಲಿ ಒಬ್ಬರಂತೆ.

ರಘು ದೀಕ್ಷಿತ್ ಸಂಗೀತ, ಶ್ರೀ ಕ್ರೇಜಿಮೈಂಡ್ಸ್ ಛಾಯಾಗ್ರಹಣದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಇದೇ 31ಕ್ಕೆ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

ABOUT THE AUTHOR

...view details