ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಲವ್ ಮಾಕ್ಟೇಲ್' ಸಿನಿಮಾಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ತಿಳಿದ ವಿಚಾರ. ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಸಿನಿಮಾ ಅಕ್ಟೋಬರ್ 16 ರಂದು ಥಿಯೇಟರ್ನಲ್ಲಿ ರೀ ರಿಲೀಸ್ ಆಗಿತ್ತು.
ಆ ವಿಶೇಷ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ 'ಲವ್ ಮಾಕ್ಟೇಲ್' ಜೋಡಿ...!
ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ ಕೃಷ್ಣ ಹಾಗೂ ಮಿಲನ ನಾಗರಾಜ್ ಮುಂದಿನ ವರ್ಷ ಫೆಬ್ರವರಿ 14 ಪ್ರೇಮಿಗಳ ದಿನದಂದೇ ಹಸೆಮಣಿ ಏರುತ್ತಿದೆ. ವಿಶೇಷ ಫೋಟೋಶೂಟ್ ಮಾಡಿಸುವ ಮೂಲಕ ಈ ಜೋಡಿ ತಮ್ಮ ಮದುವೆ ದಿನಾಂಕವನ್ನು ಅನೌನ್ಸ್ ಮಾಡಿದೆ.
ಇನ್ನು ಈ ಸಿನಿಮಾ ಮೂಲಕ ಕೃಷ್ಣ ಹಾಗೂ ಮಿಲನಾ ಇಬ್ಬರೂ ನಿಜ ಜೀವನದಲ್ಲಿ ಕೂಡಾ ಪ್ರೇಮಿಗಳು ಎಂಬ ವಿಚಾರ ರಿವೀಲ್ ಆಗಿತ್ತು. ಈ ಜೋಡಿ ಸದ್ಯಕ್ಕೆ ಲವ್ ಮಾಕ್ಟೇಲ್ ಸೀಕ್ವೆಲ್ನಲ್ಲಿ ಬ್ಯುಸಿ ಇದೆ. ಇದರ ನಡುವೆ ಅಭಿಮಾನಿಗಳಿಗೆ ಈ ಜೋಡಿ ಗುಡ್ ನ್ಯೂಸ್ ಕೊಟ್ಟಿದೆ. ನಿಮ್ಮ ಮದುವೆ ಯಾವಾಗ ಎಂದು ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಈ ಜೋಡಿ ಈಗ ಉತ್ತರ ನೀಡಿದೆ. 2021 ಫೆಬ್ರವರಿ 14 ಪ್ರೇಮಿಗಳ ದಿನದಂದು ಕೃಷ್ಣ-ಮಿಲನಾ ಸಪ್ತಪದಿ ತುಳಿಯುತ್ತಿದ್ದಾರೆ.
ತಮ್ಮ ಮದುವೆ ದಿನಾಂಕವನ್ನು ಈ ಜೋಡಿ ಬಹಳ ಡಿಫರೆಂಟ್ ಆಗಿ ಅನೌನ್ಸ್ ಮಾಡಿದೆ. ಇದಕ್ಕಾಗಿ ಇವರಿಬ್ಬರೂ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಜೋಡಿಗೆ ಅಭಿಮಾನಿಗಳು ಹಾಗೂ ಸ್ಯಾಂಡಲ್ವುಡ್ ಗಣ್ಯರು ಶುಭ ಕೋರುತ್ತಿದ್ದಾರೆ. ಮದುವೆಗೂ ಮುನ್ನವೇ 'ಲವ್ ಮಾಕ್ಟೇಲ್ -2' ತೆರೆ ಕಂಡರೂ ಅಚ್ಚರಿ ಇಲ್ಲ.