ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​ನಲ್ಲಿ ಬರ್ತಿದೆ ಅರ್ಥಶಾಸ್ತ್ರ ಪಿತಾಮಹನ ಹೆಸರಿನ ಸಿನಿಮಾ - ಕೌಟಿಲ್ಯ ಸಿನಿಮಾ ಬಿಡುಗಡೆ

ಉತ್ತರ ಕರ್ನಾಟಕದ ಯುವ ನಿರ್ದೇಶಕ ಪ್ರಭಾಕರ್ ಶೇರ್ ಖಾನೆ 'ಕೌಟಿಲ್ಯ' ಎಂದು ಟೈಟಲ್ ಇಟ್ಟು ಚಿತ್ರ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಅರ್ಜುನ್ ರಮೇಶ್ ಈ ಚಿತ್ರದಲ್ಲಿ ಕೌಟಿಲ್ಯನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕೌಟಿಲ್ಯನಿಗೆ ನಾಯಕಿಯಾಗಿ ಪ್ರಿಯಾಂಕಾ ಚಿಂಚೋಳಿ ಅಭಿನಯಿಸುತ್ತಿದ್ದಾರೆ.

koutilya
ಕೌಟಿಲ್ಯ

By

Published : Mar 3, 2022, 9:38 PM IST

ಬೆಂಗಳೂರು: ಮಾಸ್ ಫೀಲ್ ಇರುವ ಅರ್ಥಶಾಸ್ತ್ರ ಪಿತಾಮಹ ಕೌಟಿಲ್ಯನ ಹೆಸರಿನಲ್ಲಿ ಕನ್ನಡ ಸಿನಿಮಾ ಬರ್ತಿದೆ.


ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾದ ಆಡಿಯೋ ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಯಿತು. ಮುಂಗಾರು ಮಳೆ ಸಿನಿಮಾ ನಿರ್ಮಾಪಕ ಇ.ಕೃಷ್ಣಪ್ಪ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹಾಗು ಪ್ರೇಮಂ ಪ್ಯೂಜಂ ಸಿನಿಮಾ ನಾಯಕಿ ಬೃಂದಾ ಆಚಾರ್ಯ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿದರು.

ನಿರ್ಮಾಪಕ ಇ. ಕೃಷ್ಣಪ್ಪ ಮಾತನಾಡಿ, ಮುಂಗಾರು ಮಳೆ ಸಿನಿಮಾ‌ ಮಾಡಬೇಕಾದ್ರೆ ನಾವು ಹೊಸಬರು. ಈ ಚಿತ್ರದ ಟೀಸರ್ ಹಾಗು ಹಾಡುಗಳನ್ನು ನೋಡಿದ್ರೆ, ಈ ಸಿನಿಮಾ ಯಶಸ್ಸು ಕಾಣುವ ಎಲ್ಲಾ ಲಕ್ಷಣಗಳಿವೆ ಎಂದರು.

'ಹಿಸ್ಟರಿಯಲ್ಲಿರೋ ಎಲ್ಲಾ ಹೀರೋಗಳು, ವಿಲನ್​ಗಳು' ಎಂದು ಟ್ಯಾಗ್‌ಲೈನ್ ಹೊಂದಿರುವ ಈ ಸಿನಿಮಾದಲ್ಲಿ ನಟ ಅರ್ಜುನ್ ರಮೇಶ್​ ಮೂರು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸುವ ಅವರು, ಚಿತ್ರದ ಡೈಲಾಗ್ ಹೇಳುವ ಮೂಲಕ ಗಮನ ಸೆಳೆದರು. ಕಿರುತೆರೆಯಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚಿಂಚೋಳಿ ಕೂಡ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಗೊಂಬೆಗಳ ಲವ್, ನಾನು ಲವರ್ ಆಫ್ ಜಾನು, ಕೆಂಡ ಸಂಪಿಗೆ.. ಹೀಗೆ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಪ್ರಭಾಕರ್ ಶೇರ್ ಖಾನೆ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ರಮೇಶ್ ಬರೆದಿರುವ ಹಾಡುಗಳಿಗೆ ಕಿರಣ್ ಕೃಷ್ಣಮೂರ್ತಿ ಮ್ಯೂಸಿಕ್ ನೀಡಿದ್ದಾರೆ. ನಿರ್ಮಾಪಕ ವಿಜೇಂದ್ರ ಬಿ.ಎ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.

ಇದನ್ನೂಓದಿ:ಬಜೆಟ್ ಮಂಡನೆಗೆ ಕ್ಷಣಗಣನೆ: ಜನಸಾಮಾನ್ಯರ ಮೇಲಿನ ಸಾಲದ ಹೊರೆ ₹5 ಲಕ್ಷ ಕೋಟಿ ಗಡಿಗೆ?

ABOUT THE AUTHOR

...view details