ನಮ್ಮ ಕನ್ನಡ ನಾಡು, ಕನ್ನಡ ಭಾಷೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ದೇಶದ ಎಲ್ಲ ಮೂಲೆಗಳಲ್ಲಿ ಕನ್ನಡದ ಕಲರವ ಕೇಳಿ ಬರುತ್ತದೆ. ಈಗ 5,000 ಕಿ.ಮೀ ದೂರವಿರುವ ದಕ್ಷಿಣ ಕೊರಿಯಾ ದೇಶದ ಓರ್ವ ಯುವತಿಗೂ ನಮ್ಮ ಕನ್ನಡ ನೆಲದ ಬಗ್ಗೆ ಅಭಿಮಾನ ಮೂಡಿದೆ.
ಕೊರಿಯನ್ ಮೂಲದ ಓರ್ವ ಹುಡುಗಿಗೆ ಪವರ್ಸ್ಟಾರ್ ಅಭಿನಯದ ಯುವರತ್ನ ಸಿನಿಮಾದ ಮೆಲೊಡಿ ಹಾಡು "ನೀನಾದೆ ನಾ ನೀನಾದೆ ನಾ" ತುಂಬಾ ಇಷ್ಟವಾಗಿದೆಯಂತೆ. ಈ ಕೊರಿಯನ್ ಯುವತಿಯ ಹೆಸರು ಪ್ಯಾರಿ ಜಿವೋನ್. ಈಕೆ ಕೊರಿಯಾ ದೇಶದವಳಾಗಿದ್ದರೂ ಸಹ, ಈಕೆಯ ಮನಸು ನಮ್ಮ ಭಾರತ ದೇಶದ್ದು. ಕಾರಣ ಪ್ಯಾರಿ ಜಿವೋನ್ಗೆ ಭಾರತೀಯ ಸಂಸ್ಕೃತಿ ಪರಂಪರೆಯ ಮೇಲೆ ಅಪಾರ ಅಭಿಮಾನ.