ತಮಿಳುನಾಡು:ನಟರಾದ ಸೂರ್ಯ ಮತ್ತು ಕಾರ್ತಿ ತಮಿಳು ಚಲನಚಿತ್ರೋದ್ಯಮದಲ್ಲಿ ಪ್ರಮುಖ ತಾರೆಯರಾಗಿದ್ದು, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ತಮಿಳು ನಟ ಶಿವಕುಮಾರ್ ಅವರ ಮಕ್ಕಳಾಗಿರುವ ಇಬ್ಬರೂ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಸೂರ್ಯ ನಟನೆಯ ಹೊರತಾಗಿ ತನ್ನ ಅಗರಂ ಫೌಂಡೇಶನ್ ಮೂಲಕ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ ನೀಡುತ್ತಿದ್ದಾರೆ. ಕಾರ್ತಿ ತನ್ನ ಉಜಾವನ್ (ರೈತ) ಪ್ರತಿಷ್ಠಾನದೊಂದಿಗೆ ರೈತರಿಗೆ ಸಹಾಯ ಮಾಡುತ್ತಿದ್ದಾರೆ.