ಕರ್ನಾಟಕ

karnataka

ETV Bharat / sitara

ಮೂರು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್​​ವುಡ್​​​​​​​​ ಕಡೆ ಬಂದ್ರು ನಿಧಿ ಸುಬ್ಬಯ್ಯ - ಆಯುಷ್ಮಾನ್​​ಭವ

'ನನ್ನ ನಿನ್ನ ಪ್ರೇಮಕಥೆ' ನಂತರ ಕನ್ನಡ ಸಿನಿಮಾಗಳಿಂದ ದೂರವಿದ್ದ ನಿಧಿ ಸುಬ್ಬಯ್ಯ ಇದೀಗ ಮೂರು ವರ್ಷಗಳ ಗ್ಯಾಪ್ ಬಳಿಕ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಶಿವರಾಜ್​ಕುಮಾರ್ ಅಭಿನಯದ 'ಆಯುಷ್ಮಾನ್​​ಭವ' ಚಿತ್ರದಲ್ಲಿ ನಿಧಿ ನಟಿಸಿದ್ದಾರೆ.

ನಿಧಿ ಸುಬ್ಬಯ್ಯ

By

Published : Sep 28, 2019, 3:27 PM IST

'ಅಭಿಮಾನಿ' ಚಿತ್ರದ ಮೂಲಕ ಸ್ಯಾಂಡಲ್​ವುಡ್​​​ಗೆ ಕಾಲಿಟ್ಟ ಕೊಡಗಿನ ಹುಡುಗಿ ನಿಧಿ ಸುಬ್ಬಯ್ಯ, 'ನನ್ನ ನಿನ್ನ ಪ್ರೇಮಕಥೆ' ಸಿನಿಮಾ ನಂತರ ಬಾಲಿವುಡ್​​ಗೆ ಹಾರಿದರು. ಅಲ್ಲಿಂದ ಈಚೆಗೆ ಅವರು ಯಾವುದೇ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ ಅವರು 'ಆಯುಷ್ಮಾನ್​​ಭವ' ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್​​​​ವುಡ್​​ಗೆ ವಾಪಸಾಗಿದ್ದಾರೆ.

'ಆಯುಷ್ಮಾನ್​​ಭವ' ಪ್ರೆಸ್​​​ಮೀಟ್​ನಲ್ಲಿ ನಿಧಿ ಸುಬ್ಬಯ್ಯ

ಮೂರು ವರ್ಷಗಳ ನಂತರ ಮತ್ತೆ ಸ್ಯಾಂಡಲ್​​​​​​ವುಡ್​​​​​​​​ಗೆ ಕಂಬ್ಯಾಕ್ ಆದ ನಿಧಿ ಈಗ ಮತ್ತೆ ಚಂದನವನದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇನ್ನು ಮುಂದೆ ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ. 'ಆಯುಷ್ಮಾನ್​​ಭವ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಧಿ ಸುಬ್ಬಯ್ಯ ಬಹಳ ದಿನಗಳ ನಂತರ ಕನ್ನಡಕ್ಕೆ ವಾಪಸ್​​​​ ಬಂದಿದ್ದು ತವರು ಮನೆಗೆ ಬಂದಷ್ಟೇ ಖುಷಿಯಾಗ್ತಿದೆ. ನಾನು ಸಿನಿಮಾದ ಅಕ್ಷರಮಾಲೆ ಕಲಿತಿದ್ದು ಕನ್ನಡ ಚಿತ್ರರಂಗದಲ್ಲೇ. ಜೀವನ ಎಂಬುದು ಒಂದು ಜರ್ನಿ ರೀತಿ, ಅದೇ ರೀತಿ ಸಿನಿಮಾ ಕೂಡಾ ಒಂದು ಜರ್ನಿ. ನನ್ನ ಜೀವನದಲ್ಲಿ ಕೆಲವು ಏಳು-ಬೀಳುಗಳನ್ನು ಕಂಡ ಬಳಿಕ ಮತ್ತೆ ಸ್ಯಾಂಡಲ್​​​ವುಡ್​ ಕಡೆಗೆ ವಾಪಸಾಗಿದ್ದೇನೆ. 'ಆಯುಷ್ಮಾನ್​​​​​​ಭವ' ಬಿಡುಗಡೆಯಾಗುವವರೆಗೂ ಯಾವುದೇ ಚಿತ್ರವನ್ನು ಒಪ್ಪಿಕೊಳ್ಳಬಾರದು ಎಂದು ತೀರ್ಮಾನಿಸಿದ್ದೇನೆ. ಕನ್ನಡಿಗರು ನನ್ನನ್ನು ಮರೆತಿದ್ದಾರೆ. ಈ ಸಿನಿಮಾ ಮೂಲಕ ಕನ್ನಡಿಗರು ಮತ್ತೆ ನನ್ನನ್ನು ಗುರುತಿಸುತ್ತಾರೆ. ಬೇರೆ ಭಾಷೆಗಳಲ್ಲಿ ನನ್ನ ವೆಬ್​ ಸೀರೀಸ್​ ಶೂಟಿಂಗ್ ನಡೆಯುತ್ತಲೇ ಇದೆ ಎಂದು ತಮ್ಮ ಈ ಮೂರು ವರ್ಷದ ಜರ್ನಿ ಅನುಭವ ಹಂಚಿಕೊಂಡರು ನಿಧಿ ಸುಬ್ಬಯ್ಯ.

ABOUT THE AUTHOR

...view details