ಕರ್ನಾಟಕ

karnataka

ETV Bharat / sitara

ಪ್ರೇಮ್​ ಮುಂದಿನ ಸಿನಿಮಾ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ರಕ್ಷಿತ ಗರಂ! - undefined

ನಟಿ, ನಿರ್ಮಾಪಕಿ ರಕ್ಷಿತ ಪ್ರೇಮ್​ ಮಾಧ್ಯಮದವರ ಮೇಲೆ ಕೋಪಗೊಂಡಿದ್ದಾರೆ. ಪ್ರೇಮ್ ಅವರ ಮುಂದಿನ ಸಿನಿಮಾ 'ಕಲಿ ' ಬಗ್ಗೆ ಕೇಳಿದ ಪ್ರಶ್ನೆಗೆ ರಕ್ಷಿತಾ ಗರಂ ಆಗಿ ತಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲವೆನ್ನುವಂತೆ ವರ್ತಿಸಿದ್ದಾರೆ.

ರಕ್ಷಿತ ಪ್ರೇಮ್​​

By

Published : Feb 15, 2019, 7:37 PM IST

ರಕ್ಷಿತ ಗರಂ
ವಿಲನ್ ಸಿನಿಮಾ ಬಿಡುಗಡೆ ವೇಳೆ ನಿರ್ದೇಶಕ ಪ್ರೇಮ್ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೊಂಡಿದ್ದರು. ಇಂದು ಇದರ ಬಗ್ಗೆ ರಕ್ಷಿತ ಅವರನ್ನು ಪ್ರಶ್ನಿಸಿದಾಗ ಅವರು ಮಾಧ್ಯಮದವರ ಮೇಲೆ ಸಿಡಿಮಿಡಿಗೊಂಡಿದ್ದಾರೆ.

ಬಾಲಿವುಡ್​, ಕಾಲಿವುಡ್, ಟಾಲಿವುಡ್​​, ಮಾಲಿವುಡ್ ಸೇರಿ ಭಾರತೀಯ ಚಿತ್ರರಂಗದ 6 ಪ್ರಖ್ಯಾತ ನಾಯಕರನ್ನು ಕರೆತಂದು ಮುಂದಿನ ಸಿನಿಮಾ ಮಾಡುವುದಾಗಿ 'ವಿಲನ್' ಚಿತ್ರ ಬಿಡುಗಡೆ ವೇಳೆ ಪ್ರೇಮ್ ಹೇಳಿಕೊಂಡಿದ್ದರು. ಮೊನ್ನೆ ಕೂಡಾ ಫೇಸ್​​ಬುಕ್ ಲೈವ್​​ನಲ್ಲೂ ಪ್ರೇಮ್ ಈ ವಿಷಯ ಹೇಳಿಕೊಂಡಿದ್ದರು. ಇಂದು ಮಾಧ್ಯಮದವರು ಈ ಬಗ್ಗೆ ರಕ್ಷಿತ ಅವರನ್ನು ಕೇಳಿದಾಗ ತಮ್ಮ ಪತಿಗೂ, ಅವರ ಸಿನಿಮಾಗೂ ತಮಗೂ ಯಾವ ಸಂಬಂಧವೇ ಇಲ್ಲದಂತೆ ರಕ್ಷಿತ ಗರಂ ಆದರು.

'ನೀವೆಲ್ಲಾ ಸ್ಟುಪಿಡ್​​​ಗಳಂತೆ ಪ್ರಶ್ನೆ ಕೇಳಿದರೆ ನನಗೆ ಉತ್ತರಿಸಲು ಆಗಲ್ಲ, ನನಗೆ ಈ ಬಗ್ಗೆ ಗೊತ್ತಿಲ್ಲ. ಈ ಪ್ರಶ್ನೆಯನ್ನು ನೀವು ಪ್ರೇಮ್ ಅವರ ಬಳಿಯೇ ಕೇಳಬೇಕು' ಎಂದು ರಕ್ಷಿತ ಪ್ರತಿಕ್ರಿಯಿಸಿದ್ದಾರೆ. ವಿಲನ್ ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದವರ ಮೇಲಿನ ಕೋಪವನ್ನು ರಕ್ಷಿತ ಮಾಧ್ಯಮದವರ ಮೇಲೆ ತೋರಿದ್ದಾರೆ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details