ಕರ್ನಾಟಕ

karnataka

ETV Bharat / sitara

ಇದೇ 27ಕ್ಕೆ ತೆರೆಗೆ ಬರಲಿದೆ ’ಕಿಸ್​’​​: ಚಿತ್ರತಂಡ ಹೇಳಿದ್ದೇನು ಗೊತ್ತಾ...? - ಎಪಿ ಅರ್ಜುನ್​ ನಿರ್ದೆಶನದ ಕಿಸ್​​ ಸಿನಿಮಾ

ಕಿರುತೆರೆ ನಟ ವಿರಾಟ್ ಹಾಗೂ ಮೈಸೂರಿನ ಹುಡುಗಿ ಶ್ರೀಲೀಲಾ ಕಿಸ್ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿದ್ದು, ತುಂಟಾಟದ ಮೂಲಕವೇ ಸಿನಿಪ್ರಿಯರ ಮನದಲ್ಲಿ ಆಟೋಗ್ರಾಫ್ ಹಾಕೋದಕ್ಕೆ ರೆಡಿಯಾಗಿದ್ದಾರೆ. ಸಿನಿಮಾ ಇದೇ ಸೆಪ್ಟೆಂಬರ್ 27ಕ್ಕೆ ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ.

ಶ್ರೀಲೀಲಾ , ನಟಿ

By

Published : Sep 17, 2019, 9:04 AM IST

ನಿರ್ದೇಶಕ ಎ ಪಿ ಅರ್ಜುನ್ ಐರಾವತ ಚಿತ್ರದ ನಂತರ ಹೊಸ ನಟ- ನಟಿಯರನ್ನು ಹಾಕಿಕೊಂಡು 2 ವರ್ಷಗಳ ಹಿಂದೆ ’ಕಿಸ್’ ಚಿತ್ರ ಶುರುಮಾಡಿದರು. ಹಲವಾರು ಅಡೆತಡೆಗಳನ್ನು ಮೆಟ್ಟಿನಿಂತ ಚಿತ್ರತಂಡ ಕೊನೆಗೂ ಕಿಸ್ ಕೊಡಲು ರೆಡಿಯಾಗಿದೆ. ಸಿನಿಮಾ ಇದೇ ಸೆಪ್ಟೆಂಬರ್ 27ಕ್ಕೆ ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾಗುತ್ತಿದೆ.

ಕಿರುತೆರೆ ನಟ ವಿರಾಟ್ ಹಾಗೂ ಮೈಸೂರಿನ ಹುಡುಗಿ ಶ್ರೀಲೀಲಾ ಕಿಸ್ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿದ್ದು, ತುಂಟಾಟದ ಮೂಲಕವೇ ಸಿನಿಪ್ರಿಯರ ಮನದಲ್ಲಿ ಆಟೋಗ್ರಾಫ್ ಹಾಕೋದಕ್ಕೆ ರೆಡಿಯಾಗಿದ್ದಾರೆ.

ಇದೇ 27ಕ್ಕೆ ತೆರೆಗೆ ಬರಲಿದೆ ಕಿಸ್

ಸಿನಿಮಾಕ್ಕೆ ’ತುಂಟ ತುಟಿಗಳ ಆಟೋಗ್ರಾಫ್’ ಎಂಬ ಟ್ಯಾಗ್ ಲೈನ್ ನೊಂದಿಗೆ ಬಂದಿರುವ ಕಿಸ್ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಭರ್ಜರಿಯಾಗಿ ಸೌಂಡ್ ಮಾಡ್ತಿವೆ. ಅಲ್ಲದೇ ಕಿಸ್ ಚಿತ್ರತಂಡ ಈಗಾಗಲೇ ಚಿತ್ರದ ಪ್ರಮೋಷನ್ ಮಾಡಿಕೊಂಡಿದ್ದು, ರಾಜ್ಯಾದ್ಯಂತ ಪ್ರವಾಸ ಮಾಡಿ ಭರ್ಜರಿಯಾಗಿ ಪ್ರಚಾರದಲ್ಲಿ ಬ್ಯೂಸಿಯಾಗಿವೆ.

ಈಗಾಗಲೇ ಕಿಸ್ ಚಿತ್ರಕ್ಕೆ ರಾಜ್ಯಾದ್ಯಂತ ಪ್ರವಾಸ ಮಾಡಿದ್ದು, ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಎಲ್ಲಾದರೂ ನಮ್ಮ ಚಿತ್ರದ ಹಾಡುಗಳನ್ನು ಹಾಡಿ ನಮ್ಮನ್ನ ಸ್ವಾಗತ ಮಾಡ್ತಾರೆ, ಖಂಡಿತ ಕಿಸ್ ಚಿತ್ರ ಎಲ್ಲ ವರ್ಗದ ಜನರಿಗೂ ಇಷ್ಟವಾಗುತ್ತೆ. ಅಲ್ಲದೇ ಸೆನ್ಸಾರ್ ಬೋರ್ಡ್ ನಮ್ಮ ಚಿತ್ರಕ್ಕೆ ಯಾವುದೇ ಮ್ಯೂಟ್ ಕಟ್ ಇಲ್ಲದೇ ಯು ಎ ಸರ್ಟಿಫಿಕೇಟ್ ನೀಡಿದೆ. ನಮ್ಮ ಚಿತ್ರದಲ್ಲಿ ಗ್ಲಾಮರ್, ಲವ್, ಸೆಂಟಿಮೆಂಟ್, ಆಕ್ಷನ್ ಎಲ್ಲಾ ಮಿಶ್ರಣ ಇದ್ದು ಎಲ್ಲ ವರ್ಗದ ಜನರಿಗೂ ಇಷ್ಟವಾಗುತ್ತದೆ ಎಂದು ಚಿತ್ರತಂಡ ತಮ್ಮ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಈ ಚಿತ್ರದ ವಿಶೇಷ ಅಂದ್ರೆ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದ್ದು, ಒಂದು ಹಾಡನ್ನು ಹರಿಕೃಷ್ಣ ಪುತ್ರ ಹಾದಿ ಹರಿಕೃಷ್ಣ ಹಾಡಿದ್ದಾರೆ. ಈ ಹಾಡಿಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಳೆ ಬೇರು ಹೊಸ ಚಿಗುರು ಎಂಬ ಮಾತಿನಂತೆ ಎ.ಪಿ ಅರ್ಜುನ್ ತನ್ನ ಹಳೆಯ ತಂಡದೊಂದಿಗೆ ಹೊಸ ನಟನಟಿಯರ ಹಾಕಿಕೊಂಡು ಕಿಸ್ ಚಿತ್ರ ಮಾಡಿದ್ದು, ಬರೋಬ್ಬರಿ ಎರಡು ವರ್ಷಗಳ ನಂತರ ಈ ಸಿನಿಮಾ ರಿಲೀಸ್ ಆಗ್ತಿದೆ.

ABOUT THE AUTHOR

...view details