ಕರ್ನಾಟಕ

karnataka

ETV Bharat / sitara

ಇದೇ 27ಕ್ಕೆ ನಿಮಗೆ ಸಿಗತ್ತೆ 'ಕಿಸ್​'​: ಹಾಡುಗಳ ಯಶಸ್ಸಿನ ಸಂಭ್ರಮ ಆಚರಿಸಿದ ಚಿತ್ರ ತಂಡ - kannada kiss movie

ಇಂದು ಕಿಸ್​ ಸಿನಿಮಾದ ಆಡಿಯೋ ಲಾಂಚ್​​ ಆಗಿದ್ದು, ಚಿತ್ರತಂಡ ಫುಲ್​​​ ಖುಷ್​ ಆಗಿದೆ. ಈ ಸಂತಸವನ್ನ ನಿರ್ದೇಶಕ ಎ.ಪಿ ಅರ್ಜುನ್, ಯುವ ನಟ ವಿರಾಟ್, ಕ್ಯೂಟ್ ಗರ್ಲ್ ಶ್ರೀಲೀಲಾ, ಹಿರಿಯ ನಟ ದತ್ತಣ್ಣ, ಸಾಹಸ ನಿರ್ದೇಶಕ ರವಿವರ್ಮ, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಹಾಡುಗಳ ಯಶಸ್ಸಿನ ಬಗ್ಗೆ ಹಂಚಿಕೊಂಡಿದ್ದು.

ಇದೇ 27ಕ್ಕೆ ನಿಮಗೆ ಸಿಗತ್ತೆ "ಕಿಸ್​"​

By

Published : Sep 25, 2019, 5:33 PM IST

ಒಂದು ಸಿನಿಮಾಗೆ ಇನ್ವಿಟೇಶನ್ ಅಂದ್ರೆ ಚಿತ್ರದ ಹಾಡುಗಳು. ಈಗ ಇದೇ ಹಾಡುಗಳ ಸಕ್ಸಸ್​ನಿಂದ ಇದೇ ವಾರ ತೆರೆಗೆ ಬರೋದಿಕ್ಕೆ ಸಜ್ಜಾಗಿರುವ ಬಹು ನಿರೀಕ್ಷಿತ ಚಿತ್ರ ಕಿಸ್. ನಿರ್ದೇಶಕ ಎ.ಪಿ.ಅರ್ಜುನ್ ಈ ಚಿತ್ರಕ್ಕಾಗಿ ಬರೋಬ್ಬರಿ ಎರಡು ವರ್ಷಗಳ ಪರಿಶ್ರಮ ಹಾಕಿದ್ದಾರೆ.

ಇದೇ 27ಕ್ಕೆ ನಿಮಗೆ ಸಿಗತ್ತೆ "ಕಿಸ್​"​

ಇಂದು ಕಿಸ್​ ಸಿನಿಮಾದ ಆಡಿಯೋ ಯಶಸ್ಸು ಕಾರ್ಯಕ್ರಮ ನಡೆದಿದ್ದು, ಚಿತ್ರತಂಡ ಫುಲ್​​​ ಖುಷ್​ ಆಗಿದೆ. ಈ ಸಂತಸವನ್ನ ನಿರ್ದೇಶಕ ಎ.ಪಿ ಅರ್ಜುನ್, ಯುವ ನಟ ವಿರಾಟ್, ಕ್ಯೂಟ್ ಗರ್ಲ್ ಶ್ರೀಲೀಲಾ, ಹಿರಿಯ ನಟ ದತ್ತಣ್ಣ, ಸಾಹಸ ನಿರ್ದೇಶಕ ರವಿವರ್ಮ, ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಹಾಡುಗಳ ಯಶಸ್ಸಿನ ಬಗ್ಗೆ ಹಂಚಿಕೊಂಡಿದ್ದು.

ಈ ಚಿತ್ರದ ಹಾಡುಗಳ ಹಕ್ಕನ್ನ ಪಡೆದಿರುವ ಶೈಲಜಾ ನಾಗ್, ಮಿಲಿಯನ್ ಗಟ್ಟಲೆ ಪ್ರೇಕ್ಷಕರು ಈ ಚಿತ್ರದ ಹಾಡುಗಳನ್ನ ನೋಡಿದ್ದಾರೆ ಅಂತಾ ಮೆಚ್ಚುಗೆ ವ್ಯಕ್ತಪಡಿಸಿದ್ರು. ಫಸ್ಟ್ ಟೈಮ್ ಹೀರೋ ಆಗಿರುವ ವಿರಾಟ್ ಹಾಗು ನಟಿ ಶ್ರೀಲೀಲಾ ಕಾರ್ಯಕ್ರಮದಲ್ಲಿ ತಮ್ಮ ಸಿಹಿ ನೆನಪುಗಳನ್ನ ಬಿಚ್ಚಿಟ್ರು.

ಈ ಕಿಸ್ ಸಿನಿಮಾ ಇದೇ 27ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ನಿರ್ದೇಶಕ ಎ.ಪಿ‌ ಅರ್ಜುನ್ ಎರಡು ವರ್ಷಗಳ ಪರಿಶ್ರಮಕ್ಕೆ ಫಲ‌ ಸಿಗುತ್ತಾ ಕಾದು ನೋಡಬೇಕಿದೆ.

ABOUT THE AUTHOR

...view details