ಎಪಿ ಅರ್ಜುನ್ ನಿರ್ದೇಶನದಲ್ಲಿ ವಿರಾಟ್ ಮತ್ತು ಶ್ರೀಲೀಲಾ ಜೋಡಿ ನಾಯಕ, ನಾಯಕಿಯರಾಗಿ ನಟಿಸಿರೋ ಕಿಸ್ ಚಿತ್ರಕ್ಕೆ ಸಿನಿಪ್ರಿಯರು ಭರ್ಜರಿ ಮುತ್ತಿನ ಸುರಿಮಳೆ ಸುರಿಸಿದ್ದು, ಅದ್ದೂರಿಯಾಗಿ 50 ದಿನಗಳ ಪೂರೈಸಿದೆ. ಇದೇ ಖುಷಿಯಲ್ಲಿ ಚಿತ್ರತಂಡ ವೀರೇಶ್ ಥಿಯೇಟರ್ನಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ರು. ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಅಟ್ರ್ಯಾಕ್ಟ್ ಮಾಡುತ್ತಾ ಬಂದಿದ್ದ 'ಕಿಸ್’ ಚಿತ್ರವನ್ನು ಕೊನೆಗೂ ಪ್ರೇಕ್ಷಕರು ಮೆಚ್ಚಿದ್ದಾರೆ. ಚಿತ್ರದ 50 ದಿನಗಳ ಸಂಭ್ರಮದ ಫೋಟೋ ಹಾಗೂ ವಿಡಿಯೋವನ್ನು ಚಿತ್ರತಂಡಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀರೇಶ್ ಹಾಗೂ ಸಂಗಮ್ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಭರ್ಜರಿ 50 ದಿನಗಳ ಕಂಪ್ಲೀಟ್ ಮಾಡಿದ ಕಿಸ್.. ಕೇಕ್ ಕತ್ತರಿಸಿ ಸಂಭ್ರಮಿಸಿದ ಚಿತ್ರತಂಡ! - ಪ್ರೇಕ್ಷಕರನ್ನು ಅಟ್ರ್ಯಾಕ್ಟ್ ಮಾಡುತ್ತಾ ಬಂದಿದ್ದ 'ಕಿಸ್
ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಅಟ್ರ್ಯಾಕ್ಟ್ ಮಾಡುತ್ತಾ ಬಂದಿದ್ದ 'ಕಿಸ್’ ಚಿತ್ರವನ್ನು ಕೊನೆಗೂ ಪ್ರೇಕ್ಷಕರು ಮೆಚ್ಚಿದ್ದಾರೆ. ‘ಕಿಸ್’ ಚಿತ್ರದ 50 ದಿನಗಳ ಸಂಭ್ರಮದ ಫೋಟೋ ಹಾಗೂ ವಿಡಿಯೋವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರತಂಡ
ನಿರ್ದೇಶಕ ಎಪಿ ಅರ್ಜುನ್ ಹಾಗೂ ಕಿಸ್ ಚಿತ್ರ ತಂಡ ತಮ್ಮ ಖುಷಿಯನ್ನು ಹಂಚಿಕೊಂಡಿದ್ದು, ನನ್ನ “ಕಿಸ್” ಸಿನಿಮಾಗೆ 50ನೇ ದಿನದ ಸಂಭ್ರಮ. ಈ ಗೆಲುವಿಗೆ ಮುಖ್ಯ ಕಾರಣವೇ ನಿಮ್ಮ ಪ್ರೀತಿ ಮತ್ತು ಆಶೀರ್ವಾದ, ಹೊಸ ನಾಯಕ–ನಾಯಕಿಯನ್ನ ಇಷ್ಟು ದೊಡ್ಡ ಮಟ್ಟಕ್ಕೆ ಸ್ವೀಕರಿಸಿ, ನನ್ನ ಪ್ರತಿ ಪ್ರಯತ್ನಕ್ಕೂ ಬೆನ್ನು ತಟ್ಟುತ್ತಾ ಬಂದಿರೋ ಕರ್ನಾಟಕದ ಜನತೆಗೆ, ಅಭಿಮಾನಿ ದೇವರುಗಳಿಗೆ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ ಸದಾ ಹೀಗೆ ಇರಲಿ. 100ನೇ ದಿನದ ಕಡೆ ಹೋಗ್ತಿರೋ ಕಿಸ್‌ಗೆ ಎಲ್ಲರೂ ಒಂದ್ ಸಾರಿ ಬ್ಲೆಸ್ ಮಾಡಿ, ಲವ್ ಯು ಆಲ್ ಎಂದು ಇನ್ಸ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.