ಕರ್ನಾಟಕ

karnataka

ETV Bharat / sitara

ಚಿತ್ರೀಕರಣ ಆರಂಭಿಸಿದ ಹೊಸಬರ 'ಕಿರಿಕ್ ಕೃಷ್ಣ' ಸಿನಿಮಾ - Sandalwood actor Krishna

ಹೊಸಬರ ತಂಡ ತಯಾರಿಸುತ್ತಿರುವ 'ಕಿರಿಕ್​ ಕೃಷ್ಣ' ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಚಿತ್ರವನ್ನು ಕೃಷ್ಣ ಎಂಬುವವರು ನಿರ್ದೇಶನ ಮಾಡಿ, ನಾಯಕನಾಗಿ ನಟಿಸುತ್ತಿದ್ದಾರೆ.

Kirik krishna shoot started
ಕಿರಿಕ್ ಕೃಷ್ಣ

By

Published : Sep 21, 2020, 3:44 PM IST

ಸ್ಯಾಂಡಲ್​ವುಡ್​​ನಲ್ಲಿ ನಟ ಅಜಯ್​ ರಾವ್ ಹೆಸರಿಗೆ ಕೃಷ್ಣ ಹೆಸರಿನ ಚಿತ್ರಗಳು ತಳುಕು ಹಾಕಿಕೊಂಡಿವೆ. ಇದೀಗ 'ಕಿರಿಕ್ ಕೃಷ್ಣ' ಹೆಸರಿನ ಹೊಸ ಸಿನಿಮಾವೊಂದು ಸೆಟ್ಟೇರುತ್ತಿದೆ. ಆದರೆ ಇದರಲ್ಲಿ ಅಜಯ್ ರಾವ್ ನಟಿಸುತ್ತಿಲ್ಲ. ಹೊಸ ಪ್ರತಿಭೆ ಕೃಷ್ಣ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ನಾಯಕ, ನಿರ್ದೇಶಕ ಕೃಷ್ಣ

ಈಗಾಗಲೇ 'ಕಿರಿಕ್ ಕೃಷ್ಣ' ಚಿತ್ರೀಕರಣ ಆರಂಭವಾಗಿದೆ. ಮುಗ್ಧ ಯುವಕನೊಬ್ಬ ತನ್ನ ಗ್ರಾಮದ ಮುಖ್ಯಸ್ಥರ ಕೈಗೆ ಸಿಲುಕಿ ಹೇಗೆ ನರಳುತ್ತಾನೆ...ಕೊನೆಯಲ್ಲಿ ಆತ ತನಗಾದ ಅನ್ಯಾಯಕ್ಕೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಚಿತ್ರದ ಕಥೆ. ಫಸ್ಟ್ ಹಾಫ್​​ನಲ್ಲಿ ಸೈಲೆಂಟ್ ಆಗಿದ್ದ ನಟ ಸೆಕೆಂಡ್ ಹಾಫ್​ನಲ್ಲಿ ವೈಲೆಂಟ್ ಆಗುತ್ತಾನೆ.

ನಾಯಕಿಯರೊಂದಿಗೆ ಕೃಷ್ಣ

ಶ್ರೀ ಕೃಷ್ಣ ಕಂಬೈನ್ಸ್ ಅಡಿಯಲ್ಲಿ ನಿರ್ಮಾಪಕ ಮುನಿರಾಜು, ಜಯರಾಮಯ್ಯ ಹಾಗೂ ಆನೇಕಲ್ ಗೌತಮ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಯಕ ಕೃಷ್ಣ ಚಿತ್ರದಲ್ಲಿ ನಟಿಸಿರುವುದಲ್ಲದೆ ತಾವೇ ನಿರ್ದೇಶನ ಕೂಡಾ ಮಾಡಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ, ಜಾನಿ ಮಾಸ್ಟರ್ ಸಾಹಸ, ಕುಮಾರ್ ಸಂಕಲನ, ದೀಪು ಛಾಯಾಗ್ರಹಣ ಮಾಡುತ್ತಿದ್ದಾರೆ.

ಕೃಷ್ಣನ ನಾಯಕಿಯರು

ನಾಯಕ ಕೃಷ್ಣ ಜೊತೆಗೆ ಭಾನುಶ್ರೀ, ಶೈಲೂ, ಜ್ಯೋತಿ, ಶೋಭರಾಜ್, ರಂಗಾಯಣ ರಘು, ತಬಲಾ ನಾಣಿ, ಮೂಗು ಸುರೇಶ್, ಕಲ್ಯಾಣಿ, ಕಲ್ಯಾಣಿ ರಾಜು, ಮೈಕೊ ನಾಗರಾಜ್ ಹಾಗೂ ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ABOUT THE AUTHOR

...view details