ಸ್ಯಾಂಡಲ್ವುಡ್ ನಟ ಕಿರಣ್ ಶ್ರೀನಿವಾಸ್ ಮತ್ತು ಬಿಗ್‌ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ನಡುವೆ ಮಾತಿನ ಯುದ್ಧ ಶುರುವಾಗಿದೆ. ಸಿಪಿಐ ನಾಯಕ ಕನ್ಹಯ್ಯ ಕುಮಾರ್ ಬಗ್ಗೆ 2016ರಲ್ಲಿ ಕಿರಿಕ್ ಕೀರ್ತಿ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದು, ಆ ವಿಡಿಯೋಗೆ ಕನ್ನಡದ 'ಹಾಗೇ ಸುಮ್ಮನೆ' ಸಿನಿಮಾ ನಟ ಕಿರಣ್ ಶ್ರೀನಿವಾಸ್ ಉತ್ತರ ಕೊಟ್ಟಿದ್ದಾರೆ. ಈ ವಿಡಿಯೋಗೆ ಕಿರಿಕ್ ಕೀರ್ತಿ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದು ಕಿರಣ್ ಬಗ್ಗೆ ಹರಿಹಾಯ್ದಿದ್ದಾರೆ.
2016ರಲ್ಲಿ ಕಿರಿಕ್ ಕೀರ್ತಿ ಕನ್ಹಯ್ಯ ಕುಮಾರ್ ಬಗ್ಗೆ ಕೆಲವು ಮಾತುಗಳನ್ನಾಡಿ, ಈ ಬಗೆಗಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಕನ್ಹಯ್ಯ ಕುಮಾರ್ ನೀನ್ಯಾರು, ನಿನ್ನ ಐಡೆಂಟಿಟಿ ಏನು? ಮೋದಿ ವಿರುದ್ದ ನೀನ್ಯಾಕೆ ಮಾತಾಡ್ತಿಯಾ? ಅಫ್ಜಲ್ ಗುರು ಗಲ್ಲಿಗೇರಿಸಿದ್ದ ಕುರಿತಾಗಿ ನೀನೇಕೆ ಪ್ರೊಟೆಸ್ಟ್ ಮಾಡಿದೆ? ದೇಶದ ವಿರುದ್ದ ಘೋಷಣೆ ಕೂಗಿದ ತಂಡದಲ್ಲಿ ಇದ್ದವನು ನೀನು. ಆ ಕಾರಣಕ್ಕೆ ನೀನು ಜೈಲಿಗೆ ಹೋಗಿ ಬಂದೆ. ಕೋರ್ಟ್‌ನಲ್ಲಿ ಹೊಡೆದ್ರು ಎಂಬ ಹತ್ತಾರು ವಿಷಯಗಳ ಬಗ್ಗೆ ಕೀರ್ತಿ ಏಕ ವಚನದಲ್ಲಿಯೇ ಮಾತನಾಡಿದ್ರು.
ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನಟ ಕಿರಣ್ ಶ್ರಿನಿವಾಸ್ ವಿಡಿಯೋ ಮೂಲಕವೇ ಕಿರಿಕ್ ಕೀರ್ತಿಗೆ ಟಾಂಗ್ ಕೊಟ್ಟಿದ್ದಾರೆ. ಕಿರಿಕ್ ಕೀರ್ತಿ ಕುರಿತು ಮಾತನಾಡಿರುವ ಕಿರಣ್, ಕಿರಿಕ್ ಕೀರ್ತಿಯವರೇ ನಿಮ್ಮ ಬಗ್ಗೆ ನನಗೆ ಗೊತ್ತಿಲ್ಲ, ನನ್ನ ಬಗ್ಗೆ ನಿಮಗೆ ಗೊತ್ತಿಲ್ಲ. ಆದರೆ, ನಾನೊಬ್ಬ ಕನ್ಹಯ್ಯ ಕುಮಾರ್ ಅಭಿಮಾನಿ, ಫಾಲೋವರ್. ಇನ್ನು, ಅಫ್ಜಲ್ ಗುರು ನೇಣಿಗಾಕಿದ್ದಕ್ಕೆ ನಡೆದ ಪ್ರತಿಭಟನೆಯಲ್ಲಿ ಕನ್ಹಯ್ಯ ಕುಮಾರ್ ಭಾಗಿಯಾಗಿರಲಿಲ್ಲ. ಇನ್ನೋಂದು ವಿಚಾರ ಅಂದ್ರೇ ಯಾವುದೇ ಭಾರತದ ಪ್ರಜೆಯನ್ನು ಕೊಲ್ಲಲು ಭಾರತೀಯ ಸಂವಿಧಾನದಲ್ಲಿ ಕಾನೂನುನಿಲ್ಲ ಎಂದು ಹೇಳಿದ್ದಾರೆ.