ಕನ್ನಡತಿ ಧಾರಾವಾಹಿ ನಟ ಕಿರಣ್ ರಾಜ್ ರಜೆಯ ಮೂಡ್ನಲ್ಲಿದ್ದಾರೆ. ಸದಾ ಶೂಟಿಂಗ್ ಹಾಗೂ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿರುವ ಕಿರಣ್ ರಾಜ್ ಸ್ವಲ್ಪ ಬ್ರೇಕ್ ಪಡೆದು ಮೈಸೂರು ಹಾಗೂ ಕೊಡಗಿನಲ್ಲಿ ಸುತ್ತಾಡಿದ್ದಾರೆ.
ನಿಸರ್ಗದೊಂದಿಗೆ ಮೀನಾ ತೂಗುದೀಪ್ ಜೊತೆ ಸಮಯ ಕಳೆದ ನಟ ಕಿರಣ್ ರಾಜ್ ನಟ ದರ್ಶನ್ ಅವರ ತಾಯಿ ಮೀನಾ ತೂಗುದೀಪ್ ಅವರೊಂದಿಗೆ ಕೊಡಗಿನ ಕುಶಾಲನಗರ ಬಳಿಯ ದುಬಾರೆ ಆನೆ ಶಿಬಿರಕ್ಕೆ ತೆರಳಿ ಆನೆಗಳೊಂದಿಗೆ ಸಮಯ ಕಳೆದಿದ್ದಾರೆ. ಎರಡು ದಿನಗಳ ಹಿಂದೆ ಕಿರಣ್ ರಾಜ್ ತೆಲುಗು ಸಿನಿಮಾದ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಹೈದರಾಬಾದ್ಗೆ ತೆರಳಿದ್ದರು.
ನಿಸರ್ಗದೊಂದಿಗೆ ಮೀನಾ ತೂಗುದೀಪ್ ಜೊತೆ ಸಮಯ ಕಳೆದ ನಟ ಕಿರಣ್ ರಾಜ್ ಆದರೆ, ಮಳೆ ಹಿನ್ನೆಲೆ ಹಾಡಿನ ಶೂಟಿಂಗ್ ನಡೆಯಲಿಲ್ಲ. ಹೀಗಾಗಿ, ಸೀದಾ ಮೈಸೂರಿಗೆ ಬಂದ ಕಿರಣ್ ತಮ್ಮ ಮನೆಗೆ ತೆರಳಿದರು. ಅಲ್ಲಿಂದ ಲಲಿತಮಹಲ್ ಪ್ಯಾಲೇಸ್ಗೆ ಭೇಟಿ ನೀಡಿದರು.
ಮೀನಾ ತೂಗುದೀಪ್ ಅವರಿಗೆ ಕಿರಣ್ ರಾಜ್ ಮಗನ ಹಾಗೆ. ಇಬ್ಬರು ಮೈಸೂರಿನವರು. ಅನ್ಯೋನ್ಯತೆ ಹೆಚ್ಚು. ಕಿರಣ್ ಕೂಡ ಮೀನಾ ಅವರನ್ನು ಅಮ್ಮ ಎಂದೇ ಮಾತನಾಡಿಸುತ್ತಾರೆ. ಹೀಗಾಗಿ, ಕುಟುಂಬದಂತಿರುವ ಇವರು ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಬೆಳಗ್ಗಿನಿಂದ ಸಂಜೆ ವರೆಗೂ ನಿಸರ್ಗದೊಂದಿಗೆ ಕಾಲ ಕಳೆದರು.
'ನನಗೆ ಹಾಗೂ ಮೀನಾ ಅವರಿಗೆ ಪ್ರಕೃತಿ ಹಾಗೂ ಪ್ರಾಣಿಗಳೊಂದಿಗೆ ಇರುವುದು ಬಹಳ ಇಷ್ಟ. ಹೀಗಾಗಿ, ನಿಸರ್ಗದೊಂದಿಗೆ ಹಾಗೂ ಅವರೊಂದಿಗೆ ಕಳೆದ ಸಮಯ ಬಣ್ಣಿಸಲಾಗದು' ಎಂದು ಕಿರಣ್ ರಾಜ್ ಹೇಳಿದ್ದಾರೆ.