ಕರ್ನಾಟಕ

karnataka

ETV Bharat / sitara

ಪ್ರಜ್ವಲ್ ದೇವರಾಜ್ ಮೇಲೆ ಅಟ್ಯಾಕ್ ಮಾಡಿದ ಸ್ನೇಹಿತರ ಮಕ್ಕಳು...! - Prajwal devaraj play with kids

ಚಿರಂಜೀವಿ ಸರ್ಜಾ ಮೊದಲ ತಿಂಗಳ ಪುಣ್ಯತಿಥಿ ಕಾರ್ಯಕ್ಕೆ ಸ್ನೇಹಿತರೆಲ್ಲಾ ಜೊತೆ ಸೇರಿದ್ದು ಪ್ರಜ್ವಲ್ ತಮ್ಮ ಸ್ನೇಹಿತರ ಮಕ್ಕಳೊಂದಿಗೆ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು ಪನ್ನಗಾಭರಣ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Prajwal devaraj play with kids
ಪ್ರಜ್ವಲ್ ದೇವರಾಜ್

By

Published : Jul 9, 2020, 3:46 PM IST

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಸಿನಿಪ್ರಿಯರ ಮನ ಗೆದ್ದಿರುವ ಪ್ರಜ್ವಲ್ ದೇವರಾಜ್​ ತಮ್ಮ ಪತ್ನಿ ರಾಗಿಣಿ ಚಂದ್ರನ್ ಅವರನ್ನು ಕೂಡಾ 'ಲಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕರೆತಂದಿದ್ದಾರೆ.

ಮಕ್ಕಳೊಂದಿಗೆ ಮಕ್ಕಳಾದ ಪ್ರಜ್ವಲ್ ದೇವರಾಜ್

ಚಿತ್ರರಂಗದಲ್ಲಿ ಎಲ್ಲರೊಂದಿಗೆ ಆತ್ಮೀಯರಾಗಿರುವ ಪ್ರಜ್ವಲ್ ಮೇಲೆ ಅವರ ಸ್ನೇಹಿತರ ಮಕ್ಕಳೇ ಅಟ್ಯಾಕ್ ಮಾಡಿದ್ದಾರೆ. ಇದೇನಪ್ಪಾ ಏನಾಯ್ತು ಅಂತ ಗಾಬರಿಯಾಗಬೇಡಿ. ಪ್ರಜ್ವಲ್​​​​​ಗೆ ಚಿರಂಜೀವಿ ಸರ್ಜಾ, ಪನ್ನಗಾಭರಣ ಸೇರಿ ಚಿತ್ರರಂಗದಲ್ಲಿ ಅನೇಕ ಆತ್ಮೀಯ ಸ್ನೇಹಿತರಿದ್ದಾರೆ. ಗೆಳೆಯ ಚಿರು ಅಗಲಿಕೆಯನ್ನು ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ.

ಚಿರಂಜೀವಿ ಸರ್ಜಾ ಸ್ನೇಹಿತರ ಬಳಗ

ಇನ್ನು ಸೋಮವಾರ ಚಿರು ಮೊದಲ ತಿಂಗಳ ಪುಣ್ಯತಿಥಿ ಕಾರ್ಯ ನೆರವೇರಿತ್ತು. ಈ ಕಾರ್ಯಕ್ಕೆ ಚಿರು ಎಲ್ಲಾ ಗೆಳೆಯರು ಹಾಜರಾಗಿದ್ದರು. ಮಕ್ಕಳೊಂದಿಗೆ ಆಟವಾಡುತ್ತಾ ತಮ್ಮ ನೋವನ್ನು ಮರೆಯುವ ಪ್ರಯತ್ನ ಮಾಡಿದ್ದಾರೆ ಪ್ರಜ್ವಲ್​. ಪನ್ನಗಾಭರಣ ಹಾಗೂ ಮತ್ತೊಬ್ಬ ಗೆಳೆಯನ ಪುತ್ರನೊಂದಿಗೆ ಪ್ರಜ್ವಲ್ ಆಟವಾಡಿದ್ದಾರೆ. ಈ ವೇಳೆ ಆ ಮಕ್ಕಳು ಪ್ರಜ್ವಲ್ ಮೇಲೆ ಬಿದ್ದು ಅವರ ಬಟ್ಟೆಯನ್ನು ಎಳೆದಾಡಿದ್ದಾರೆ. ಈ ಕ್ಷಣವನ್ನು ಪ್ರಜ್ವಲ್ ಬಹಳ ಎಂಜಾಯ್ ಮಾಡಿದ್ದಾರೆ. ಸ್ನೇಹಿತರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್ ಮಾಡಿದ್ದಾರೆ.

ಪ್ರಜ್ವಲ್ ಹಾಗೂ ಸ್ನೇಹಿತರು

ABOUT THE AUTHOR

...view details