ಕರ್ನಾಟಕ

karnataka

ETV Bharat / sitara

ದಬಾಂಗ್-3 ಸಿನಿಮಾ ಪ್ರಮೋಷನ್​​ಗಾಗಿ ಕಾರು ಬಿಟ್ಟು ಬೈಕ್ ಏರಿದ ಕಿಚ್ಚ.. - ಜಾವಾ ಬೈಕ್​ ಮೇಲೆ ಸುದೀಪ್​

ಫಸ್ಟ್ ಟೈಮ್ ಸುಲ್ತಾನ್ ಸಲ್ಮಾನ್ ಖಾನ್ ಎದುರು ತೊಡೆ ತಟ್ಟಿ ನಿಂತಿರುವ ಸುದೀಪ್, ಇದೇ ತಿಂಗಳು 20ಕ್ಕೆ ಅಭಿಮಾನಿಗಳ ಮುಂದೆ ತೆರೆಯ ಮೇಲೆ ಬರಲಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಮುಂಬೈನಲ್ಲಿ, ದಬಾಂಗ್-3 ಸಿನಿಮಾದ ಪ್ರಮೋಷನ್​​ನಲ್ಲಿ ಭಾಗವಹಿಸಿದ್ದಾರೆ.‌ ಈ ವೇಳೆ ಜಾವಾ ಬೈಕ್ ಏರಿ ಸಂತಸ ಪಟ್ಟಿದ್ದಾರೆ.

Kichha Sudeep  with  Java Bike
ಸುದೀಪ್​

By

Published : Dec 4, 2019, 4:07 PM IST

ಚಂದನವನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸದ್ಯ ಕೋಟಿಗೊಬ್ಬ-3 ಸಿನಿಮಾದ ಡಬ್ಬಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮುಂಬೈನಲ್ಲಿರುವ ಕಿಚ್ಚ ಸುದೀಪ್​​ ಬಾಲಿವುಡ್​​ನ ಬಹು ನಿರೀಕ್ಷಿತ ಸಿನಿಮಾ ದಬಾಂಗ್-3 ಪ್ರಮೋಷನ್​ನಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಸುದೀಪ್​

ಫಸ್ಟ್ ಟೈಮ್ ಸುಲ್ತಾನ್ ಸಲ್ಮಾನ್ ಖಾನ್ ಎದುರು ತೊಡೆ ತಟ್ಟಿ ನಿಂತಿರುವ ಸುದೀಪ್, ಇದೇ ತಿಂಗಳು 20ಕ್ಕೆ ಅಭಿಮಾನಿಗಳ ಮುಂದೆ ತೆರೆಯ ಮೇಲೆ ಬರಲಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ಮುಂಬೈನಲ್ಲಿ, ದಬಾಂಗ್-3 ಸಿನಿಮಾದ ಪ್ರಮೋಷನ್​​ನನ್ನಲ್ಲಿ ಭಾಗವಹಿಸಿದ್ದಾರೆ.‌

ಸುದೀಪ್​

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್, ಎಸಿ ಕಾರು ಬಿಟ್ಟು ಓಲ್ಡ್ ಈಸ್ ಗೋಲ್ಡ್ ಜಾವಾ ಬೈಕ್ ಏರಿ ಸಂತಸ ಪಟ್ಟಿದ್ದಾರೆ. ಜಾವಾ ಬೈಕ್ ಮೇಲೆ ಕುಳಿತು ಕಿಚ್ಚ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಸುದೀಪ್ ಜಾವಾ ಬೈಕ್ ಮೇಲೆ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಸಮಯದಲ್ಲಿ ನಟಿ ಸೋನಾಕ್ಷಿ ಸಿನ್ಹಾ, ಅರ್ಬಾಜ್ ಖಾನ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು.

ಸುದೀಪ್​

ABOUT THE AUTHOR

...view details