ಕರ್ನಾಟಕ

karnataka

ETV Bharat / sitara

ನಿಮಗೆ ವಯಸ್ಸೇ ಆಗೋಲ್ವಾ.. ರಮ್ಯಾ ಮಾತಿಗೆ ಕಿಚ್ಚ ಕೊಟ್ಟ ಉತ್ತರವಿದು! - ಕಿಚ್ಚ ಸುದೀಪ್​ ಲೇಟೆಸ್ಟ್ ನ್ಯೂಸ್

ಕನ್ನಡ ಚಿತ್ರರಂಗದ ಸ್ಯಾಂಡಲ್​ವುಡ್​ ಕ್ವೀನ್​​ ರಮ್ಯಾ ಅವರು ನಟ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಟ್ರೈಲರ್​ ನೋಡಿ ಮನಸೋತು ಪ್ರಶಂಸೆ ವ್ಯಕ್ತಪಡಿಸಿದ್ದರು. ಇದಕ್ಕೆ ಸುದೀಪ್​ ಚಿತ್ರದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Sudeep, Ramya
ಸುದೀಪ್​, ರಮ್ಯಾ

By

Published : Oct 11, 2021, 8:28 PM IST

ಸ್ಯಾಂಡಲ್​ವುಡ್​ ಸ್ಟಾರ್​ ನಟ ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಟ್ರೈಲರ್ ಹಾಗೂ ಹಾಡುಗಳಿಂದ ಸಖತ್​ ಸದ್ದು ಮಾಡುತ್ತಿದೆ. ಚಿತ್ರದ ಸುದ್ದಿಗೋಷ್ಠಿಯಲ್ಲಿ ಸಿದೀಪ್​​ ನಟಿ ರಮ್ಯಾ ಬಗ್ಗೆ ಮಾತನಾಡುವ ಮೂಲಕ ಗಮನ ಸೆಳೆದರು.

ಅ.14ರಂದು ಕೋಟಿಗೊಬ್ಬ-3 ಸಿನಿಮಾ ರಾಜ್ಯಾದ್ಯಂತ ತೆರೆ ಕಾಣಲು ಸಿದ್ಧವಾಗಿದ್ದು, ಕೆಲವೇ ದಿನಗಳ ಹಿಂದೆ ಈ ಸಿನಿಮಾ ಟ್ರೈಲರ್​ ಬಿಡುಗಡೆ ಆಗಿತ್ತು. ಅದರಲ್ಲಿ ಸುದೀಪ್​ ಸಾಕಷ್ಟು ಯಂಗ್​ ಆಗಿ ಕಾಣಿಸಿಕೊಂಡಿದ್ದರು. ಅದನ್ನು ಕಂಡು ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ಅಚ್ಚರಿ ವ್ಯಕ್ತಪಡಿಸಿದ್ದರು. ಆ ಮಾತಿಗೆ ಈಗ ಸುದೀಪ್​ ಪ್ರತಿಕ್ರಿಯೆ ನೀಡಿದ್ದಾರೆ.

ನಿಮಗೆ ವಯಸ್ಸು ಆಗುವುದೇ ಇಲ್ಲವಾ?

ಟ್ರೈಲರ್​ ಚೆನ್ನಾಗಿದೆ. ಸುದೀಪ್​ ಅವರೇ, ನಿಮಗೆ ವಯಸ್ಸು ಆಗುವುದೇ ಇಲ್ಲವಾ?, ದಿನದಿಂದ ದಿನಕ್ಕೆ ಸುದೀಪ್​ ವಯಸ್ಸು ಕಮ್ಮಿ ಆಗುತ್ತಿದೆ ಎಂದು ತಮ್ಮ ಇಸ್ಟಾಗ್ರಾಮ್​ ಸ್ಟೋರಿಯಲ್ಲಿ ರಮ್ಯಾ ಬರೆದುಕೊಂಡಿದ್ದರು. ಅದನ್ನು ಸುದೀಪ್​ ಗಮನಿಸಿದ್ದು, ಸುದ್ದಿಗೋಷ್ಠಿಯಲ್ಲಿ ಸೂಕ್ತ ಉತ್ತರ ನೀಡಿದ್ದಾರೆ.

ಅವರು ನನ್ನ ಬಗ್ಗೆ ಪೋಸ್ಟ್ ಮಾಡಿ ಎಷ್ಟೋ ವರ್ಷಗಳೇ ಆಗಿತ್ತು

ರಮ್ಯಾ ಬರೆದುಕೊಂಡಿದ್ದನ್ನು ನಾನೂ ನೋಡಿದೆ. ಕೊನೆಯದಾಗಿ ನಟನೆ ಮಾಡಿದ ಮೇಲೆ ಅವರು ನನ್ನ ಬಗ್ಗೆ ಪೋಸ್ಟ್ ಮಾಡಿ ಎಷ್ಟೋ ವರ್ಷಗಳೇ ಆಗಿತ್ತು. ಕೊನೆಗೂ ಚಾಲೆಂಜಿಂಗ್​ ಆಗಿ ತೆಗೆದುಕೊಂಡು ಈಗ ಪೋಸ್ಟ್ ಮಾಡಿದ್ದಾರೆ. ಸಿನಿಮಾ ಬಿಟ್ಟು ಅವರು ರಾಜಕೀಯದಲ್ಲಿ ಇದ್ದರು. ಆದರೂ ನಮ್ಮ ಬಗ್ಗೆ ಪೋಸ್ಟ್​ ಮಾಡಿರುವುದು ಖುಷಿಯ ವಿಚಾರ ಎಂದು ಕಿಚ್ಚ ಸುದೀಪ್ ಹೇಳಿದರು.

ಈ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು

ಇನ್ನು ಕಿಚ್ಚ ಸುದೀಪ್ ಜೊತೆ ರಮ್ಯಾ, ರಂಗ ಎಸ್​ಎಸ್​​ಎಲ್​​ಸಿ, ಜಸ್ಟ್ ಮಾತ್ ಮಾತಲ್ಲಿ ಹಾಗೂ ಕೊನೆಯದಾಗಿ ಮುಸ್ಸಂಜೆ ಮಾತು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು.

ಇದನ್ನೂ ಓದಿ: ಸುದೀಪ್ ಅವರೇ ನಿಮಗೆ ವಯಸ್ಸೇ ಆಗೋಲ್ವಾ.. ನಟಿ ರಮ್ಯಾ ಎತ್ತಿದರು ಪ್ರಶ್ನೆ..

ABOUT THE AUTHOR

...view details