ಮೊನ್ನೆಯಷ್ಟೆ ಡ್ರೀಮ್ ಸ್ಟಾರ್ ಮಯೂರ್ ಪಟೇಲ್ ಅಭಿನಯದ "ರಾಜೀವ" ಚಿತ್ರದ ಆಡಿಯೋ ರಿಲೀಸ್ ಆಗಿದ್ದು, ಚಿತ್ರದ ಹಾಡುಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದೆ. ಇನ್ನೂ "ರಾಜೀವ" ಚಿತ್ರದ ಹಾಡುಗಳನ್ನು ಅಣ್ಣಾವ್ರ ಮಗ ರಾಘಣ್ಣ ಲೋಕಾರ್ಪಣೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದ್ರು. ಅಲ್ಲದೇ ಚಿತ್ರದ ಹಾಡುಗಳ ಕೇಳಿ ಮೆಚ್ಚುಗೆ ಮಾತುಗಳನಾಡಿದ್ರು. ಇದು "ರಾಜೀವ" ಚಿತ್ರ ತಂಡಕ್ಕೆ ಆತ್ಮಸ್ಥೈರ್ಯವನ್ನ ಹೆಚ್ಚಿಸಿದೆಯಂತೆ.
ರಾಜೀವ ಹಾಡಿಗೆ ತಲೆದೂಗಿದ ಅಭಿನಯ ಚಕ್ರವರ್ತಿ: ಡ್ರೀಮ್ ಸ್ಟಾರ್ ಕಂಬ್ಯಾಕ್ಗೆ ಶುಭಕೋರಿದ ಪೈಲ್ವಾನ್ - Kichcha Sudeep
ರಾಜೀವ ಚಿತ್ರದ ಮೂಲಕ ನೀವು ಕಂಬ್ಯಾಕ್ ಮಾಡ್ತಿದ್ದೀರಿ ನಿಮಗೆ ಒಳ್ಳೆಯದಾಗಲಿ. ಈ ಚಿತ್ರ ನಿಮಗೆ ಯಶಸ್ಸು ಕೊಟ್ಟು ನೀವು ಚಿತ್ರರಂಗದಲ್ಲಿ ಎಲ್ಲಿಗೆ ತಲುಪಬೇಕೆಂದು ಕೊಂಡಿದ್ದೀರೋ ಅಲ್ಲಿಗೆ ತಲುಪಿ. ಇಡೀ ಚಿತ್ರತಂಡಕ್ಕೆ ಆ ದೇವರು ಒಳ್ಳೆದು ಮಾಡಲಿ ಎಂದು ಕಿಚ್ಚ ಸುದೀಪ್ " ರಾಜೀವ" ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ಈಗ "ರಾಜೀವ" ನಿಗೆ ಕಿಚ್ಚ ಸುದೀಪ್ ಹಾರೈಸಿದ್ದಾರೆ. ಸುದೀಪ್ "ರಾಜೀವ" ಚಿತ್ರದ ಹಾಡುಗಳ ಕೇಳಿ ಮೆಚ್ಚಿದ್ದು, ಲಾಂಗ್ ಗ್ಯಾಪ್ ನಂತ್ರ ಕಂಬ್ಯಾಕ್ ಮಾಡುತ್ತಿರುವ ಡ್ರೀಮ್ ಸ್ಟಾರ್ಗೆ ವಿಶ್ ಮಾಡಿದ್ದಾರೆ.
ರಾಜೀವ ಚಿತ್ರದ ಮೂಲಕ ನೀವು ಕಂಬ್ಯಾಕ್ ಮಾಡ್ತಿದ್ದೀರಿ ನಿಮಗೆ ಒಳ್ಳೆಯದಾಗಲಿ, ಈ ಚಿತ್ರ ನಿಮಗೆ ಯಶಸ್ಸು ಕೊಟ್ಟು ನೀವು ಚಿತ್ರರಂಗದಲ್ಲಿ ಎಲ್ಲಿಗೆ ತಲುಪಬೇಕೆಂದು ಕೊಂಡಿದ್ದೀರೋ ಅಲ್ಲಿಗೆ ತಲುಪಿ, ಈಡೀ ಚಿತ್ರತಂಡಕ್ಕೆ ಆ ದೇವರು ಒಳ್ಳೆದು ಮಾಡಲಿ ಎಂದು ಕಿಚ್ಚ ಸುದೀಪ್ " ರಾಜೀವ" ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನೂ ಮಾಣಿಕ್ಯ ಹಾರೈಕೆಯ ಮಾತುಗಳಿಗೆ ರಾಜೀವ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.