ಕರ್ನಾಟಕ

karnataka

ETV Bharat / sitara

‘ಹುಚ್ಚ’ನಲ್ಲಿನ ಕಿಚ್ಚನ ಖದರ್: 'ಈಗ'ದಲ್ಲಿ ಸುದೀಪ್​ ಆ್ಯಕ್ಟಿಂಗ್​ ಪವರ್​​ ಗೊತ್ತಾಗಿದ್ದು ಇದೇ ದಿನ! ​ - ‘ಹುಚ್ಚ’ ಚಿತ್ರ.

20 Years of Huchcha: ಸುದೀಪ್​ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ ಚಿತ್ರ ಬಿಡುಗಡೆಯಾಗಿ ಸರಿಯಾಗಿ 20 ವರ್ಷ ಕಳೆದಿದೆ. ‘ಈಗ’ ಸಿನಿಮಾ ರಿಲೀಸ್​ ಆಗಿ 9 ವಸಂತ ಸಾಗಿದೆ.

ಕಿಚ್ಚ ಸುದೀಪ್
ಕಿಚ್ಚ ಸುದೀಪ್

By

Published : Jul 6, 2021, 4:40 PM IST

ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನದೇ ಸ್ಟಾರ್ ಪಟ್ಟ ಹೊಂದಿರುವ ಅಪರೂಪದ ನಟ ಕಿಚ್ಚ ಸುದೀಪ್​​. ಕೆಲ ತಿಂಗಳ ಹಿಂದಷ್ಟೇ ಕಿಚ್ಚ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಕಳೆದಿದ್ದು, ಸಿಲ್ವರ್​ ಜುಬ್ಲಿ ಆಚರಿಸಿಕೊಂಡಿದ್ದರು. ಈ 25 ವರ್ಷಗಳ ದೊಡ್ಡ ಸಿನಿ ಪ್ರಯಾಣದಲ್ಲಿ ಅವರು ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ.

ಸೋಲು,ಗೆಲುವಿನಲ್ಲೇ ಕೋಟ್ಯಾಂತರ ಅಭಿಮಾನಿಗಳ ಬಳಗವನ್ನು ಕಿಚ್ಚ ಸಂಪಾದನೆ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ಸಿನಿಪ್ರಿಯರ ಹೃದಯದಲ್ಲಿ ಕಿಚ್ಚನಿಗೆ ಅಚ್ಚಳಿಯದ ಸ್ಥಾನವಿದೆ. 25 ವರ್ಷಗಳ ಸುದೀರ್ಘ ಸಿನಿಪಯಣದಲ್ಲಿ ಸುದೀಪ್​ ಪಾಲಿನ ಕೆಲವು ಸ್ಪೆಷಲ್​ ಸಿನಿಮಾಗಳನ್ನು ಪಟ್ಟಿ ಮಾಡಿದರೆ ಅದರಲ್ಲಿ ‘ಹುಚ್ಚ’ ಮತ್ತು ತೆಲುಗಿನ ‘ಈಗ’ ಚಿತ್ರಗಳಿಗೂ ಸ್ಥಾನವಿದೆ. ಈ ಎರಡೂ ಸಿನಿಮಾಗಳನ್ನು ಇಂದು (ಜು.6) ಸುದೀಪ್​ ನೆನಪಿಸಿಕೊಂಡಿದ್ದಾರೆ.

ಸುದೀಪ್​ಗೆ ದೊಡ್ಡ ಯಶಸ್ಸು ನೀಡಿದ ‘ಹುಚ್ಚ’ ಚಿತ್ರ ಬಿಡುಗಡೆಯಾಗಿ ಸರಿಯಾಗಿ 20 ವರ್ಷ ಕಳೆದಿದೆ. 2001ರ ಜು.6ರಂದು ರಾಜ್ಯಾದ್ಯಂತ ಈ ಚಿತ್ರ ರಿಲೀಸ್​ ಆಗಿತ್ತು. ಡಿಫರೆಂಟ್​ ಆದ ಶೀರ್ಷಿಕೆ, ಪೋಸ್ಟರ್​ಗಳಲ್ಲಿ ಕಾಣಿಸಿಕೊಂಡ ಸುದೀಪ್​ ಅವರ ಡಿಫರೆಂಟ್​ ಗೆಟಪ್​ ನೋಡಿ ಸಹಜವಾಗಿಯೇ ಚಿತ್ರದ ಬಗ್ಗೆ ಜನರಲ್ಲಿ ನಿರೀಕ್ಷೆ ಮೂಡಿತ್ತು. ಆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದ್ದು ರಾಜೇಶ್​ ರಾಮ್​ನಾಥ್​ ಅವರ ಸಂಗೀತದ ಮೋಡಿ. ಜು.6ರಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರ ನಿರೀಕ್ಷೆ ಹುಸಿ ಮಾಡದೇ ಕಿಚ್ಚನಿಗೆ ಬಿಗ್ ಬ್ರೇಕ್ ನೀಡಿತ್ತು.

ಇದಾಗಿ 11 ವರ್ಷ ಕಳೆಯುವುದರಲ್ಲಿ, ಅಂದರೆ 2012ರಲ್ಲಿ ಸುದೀಪ್​ ಅವರು ನಿರ್ದೇಶಕ ರಾಜಮೌಳಿ ಜೊತೆ ಸಿನಿಮಾ ಮಾಡುವ ಮಟ್ಟಕ್ಕೆ ಬೆಳೆದರು. ಕನ್ನಡದಲ್ಲಿ ಸ್ಟಾರ್​ ನಟನಾಗಿದ್ದ ಅವರ ಜೊತೆ ರಾಜಮೌಳಿ ಕೈ ಜೋಡಿಸಿ ‘ಈಗ’ ಸಿನಿಮಾ ಮಾಡಿದರು. ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ‘ಈಗ’ ರಿಲೀಸ್​ ಆಗಿದ್ದು ಕೂಡ ಜು.6ರಂದು. ಹೀಗಾಗಿ ಕಿಚ್ಚ ಸುದೀಪ್​ ಪಾಲಿಗೆ ಈ ದಿನಾಂಕ ತುಂಬಾ ಸ್ಪೆಷಲ್​.

ಈ ಎರಡೂ ಸಿನಿಮಾಗಳನ್ನು ಕಿಚ್ಚ ಸುದೀಪ್​ ಈಗ ಸಾಮಾಜಿಕ ಜಾಲತಾಣದಲ್ಲಿ ಮೆಲುಕು ಹಾಕಿದ್ದಾರೆ. ‘ಒಂದೇ ದಿನಾಂಕದಲ್ಲಿ ಎರಡು ಅವಿಸ್ಮರಣೀಯ ಸಿನಿಮಾಗಳು. ರೆಹಮಾನ್​ ಸರ್, ಓಂ ಪ್ರಕಾಶ್​ ರಾವ್​, ಸಾಯಿ ಅವರು ಮತ್ತು ರಾಜಮೌಳಿ ಸರ್​ಗೆ ಧನ್ಯವಾದಗಳು’ ಎಂದು ‘ಹುಚ್ಚ’ ಮತ್ತು ‘ಈಗ’ ಸಿನಿಮಾಗಳ ನಿರ್ಮಾಪಕ-ನಿರ್ದೇಶಕರಿಗೆ ಸುದೀಪ್​ ಟ್ವೀಟ್​ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ABOUT THE AUTHOR

...view details