ಕರ್ನಾಟಕ

karnataka

ETV Bharat / sitara

"ಆಟ ಮತ್ತಷ್ಟು ಕುತೂಹಲಕಾರಿಯಾಗಿದೆ"... ಕಿಚ್ಚು ಹತ್ತಿಸುತ್ತಿದೆ ಕಿಚ್ಚನ ಈ ಟ್ವೀಟ್..! - ಪೈಲ್ವಾನ್​ ಚಿತ್ರದ ಸುದ್ದಿ

ಸದ್ಯ ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿದ ವ್ಯಕ್ತಿಯ ಬಂಧನವಾಗಿದ್ದು, ಆತ ತಾನು ದರ್ಶನ್ ಫ್ಯಾನ್ ಒಪ್ಪಿಕೊಂಡಿದ್ದಾನೆ. ಇದೇ ವಿಚಾರವಾಗಿ ಸದ್ಯ ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ಗಾಂಧಿನಗರದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಸುದೀಪ್

By

Published : Sep 21, 2019, 6:01 AM IST

Updated : Sep 21, 2019, 6:12 AM IST

ಪೈಲ್ವಾನ್​ ಚಿತ್ರ ಬಾಕ್ಸಾಫೀಸ್​ನಲ್ಲಿ ಸದ್ದು ಮಾಡಿದ್ದಕ್ಕಿಂತ ಹೆಚ್ಚು ಸುದೀಪ್ ಹಾಗೂ ದರ್ಶನ್ ನಡುವಿನ ಟ್ವಿಟರ್ ವಾರ್​ನಲ್ಲೇ ಹೆಚ್ಚು ಪ್ರಚಾರ ಪಡೆದಿದೆ. ಚಿತ್ರದ ಕಲೆಕ್ಷನ್ ಜೋರಾಗಿದೆ ಎನ್ನುವುದರ ಜೊತೆಗೇ ಪೈರಸಿ ಸಹ ಎಗ್ಗಿಲ್ಲದೆ ನಡೆದಿದೆ.

ಕನ್ನಡ ಚಿತ್ರರಂಗಕ್ಕೆ ಮಾರಕವಾದ ಪೈರಸಿ ಎನ್ನುವ ಭೂತ ವಾರದ ಹಿಂದೆ ಬಿಡುಗಡೆಯಾದ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರಕ್ಕೆ ಬಲವಾಗಿ ತಟ್ಟಿತ್ತು. ಈ ಪೈರಸಿಯ ಹಿಂದೆ ದರ್ಶನ್ ಫ್ಯಾನ್ಸ್ ಕೈವಾಡ ಎನ್ನುವ ಮಾತುಗಳೂ ಕೇಳಿ ಬಂದಿತ್ತು. ಇದರಿಂದ ಕೋಪಗೊಂಡಿದ್ದ ಡಿಬಾಸ್ ದರ್ಶನ್ ಟ್ವೀಟ್ ಮಾಡಿ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದರು. ಇದಕ್ಕೆ ಸುದೀಪ್ ಮರುತ್ತರವನ್ನೂ ನೀಡಿದ್ದರು.

'ಕೆಣಕಲು, ಪ್ರಚೋದಿಸಲು ಬರಬೇಡಿ..' ದರ್ಶನ್​​​ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?

ಸದ್ಯ ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿದ ವ್ಯಕ್ತಿಯ ಬಂಧನವಾಗಿದ್ದು, ಆತ ತಾನು ದರ್ಶನ್ ಫ್ಯಾನ್ ಒಪ್ಪಿಕೊಂಡಿದ್ದಾನೆ. ಇದೇ ವಿಚಾರವಾಗಿ ಸದ್ಯ ಕಿಚ್ಚ ಸುದೀಪ್ ಮಾಡಿರುವ ಟ್ವೀಟ್ ಗಾಂಧಿನಗರದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಎಚ್ಚರಿಕೆ, ಬೆದರಿಕೆಯಿಂದ ಏನೂ ಆಗಲ್ಲ, ಕಾಲವೇ ಉತ್ತರಿಸುತ್ತದೆ.. ಏನಿದು ನಟ ಸುದೀಪ್ ಟ್ವೀಟ್​...?

ಆಟ ಈಗ ಮಜ ಬಂದಿದೆ..!

ಪೈಲ್ವಾನ್ ಚಿತ್ರದ ಪೈರಸಿ ಮಾಡಿದ ವ್ಯಕ್ತಿಯ ಬಂಧನವಾದ ಕೆಲ ಗಂಟೆಗಳ ಬಳಿಕ ಟ್ವೀಟ್ ಮಾಡಿದ ಸುದೀಪ್, ಸದ್ಯ ಘಟನೆ ಇನ್ನಷ್ಟು ಕುತೂಹಲಕಾರಿಯಾಗಿದೆ. ಇಂದು ಕೊನೆಗಾಣುವವರೆಗೂ ನಾನು ವಿರಮಿಸುವುದಿಲ್ಲ. ನಮ್ಮ ಶ್ರಮವನ್ನು ಹಾಳುಗೆಡವಲು ಯತ್ನಿಸಿದ ಪ್ರತಿಯೊಬ್ಬರೂ ತಕ್ಕ ಶಾಸ್ತಿ ಅನುಭವಿಸಲಿದ್ದಾರೆ ಎಂದು ಒಂದು ಟ್ವೀಟ್​ನಲ್ಲಿ ಕಿಚ್ಚ ಹೇಳಿದ್ದಾರೆ.

ಇದಾದ ಒಂದು ಗಂಟೆಯ ಬಳಿಕ ಮತ್ತೊಂದು ಟ್ವೀಟ್ ಮಾಡಿದ ಕಿಚ್ಚ ಈ ಮತ್ತಷ್ಟು ಗರಂ ಆಗಿದ್ದರು ಎನ್ನುವುದು ಬಳಸಿರುವ ಪದಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

ನಾನು ಹಾಗೂ ನನ್ನ ಸ್ನೇಹಿತ ಬಳಗ ಕೈಗೆ ಹಾಕಿರುವುದು ಕಡಗವೇ ಹೊರತು ಬಳೆಯಲ್ಲ ಎಂದಿದ್ದಾರೆ. ಪೈಲ್ವಾನ್ ಚಿತ್ರವನ್ನು ಹಿಮ್ಮೆಟ್ಟಿಸಲು ಯತ್ನಿಸಿದ ಕಾಣದ ಕೈಗಳ ನೆಮ್ಮದಿಯ ನಿದ್ರೆ ಇನ್ನು ಕೆಲವು ದಿನಗಳು ಮಾತ್ರ ಎಂದು ಖಡಕ್​ ಆಗಿ ಟ್ವೀಟ್ ಮಾಡಿದ್ದಾರೆ.

Last Updated : Sep 21, 2019, 6:12 AM IST

ABOUT THE AUTHOR

...view details