ಕರ್ನಾಟಕ

karnataka

ETV Bharat / sitara

ಟ್ವಿಟ್ಟರ್ ಬ್ಲೂ ರೂಮ್​ಗೆ ಎಂಟ್ರಿ ಕೊಟ್ಟ ಕನ್ನಡದ ಮೊದಲ ಸ್ಟಾರ್ ಕಿಚ್ಚ ಸುದೀಪ್...! - ಪೈಲ್ವಾನ್ ಸಿನಿಮಾ

ವಿಶ್ವದಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಟ್ವಿಟ್ಟರ್​​ ಇದೇ ಮೊದಲ ಬಾರಿಗೆ ಕನ್ನಡದ ಸ್ಟಾರ್ ನಟರೊಬ್ಬರಿಗೆ ತನ್ನ ಬ್ಲೂ ರೂಮ್​ಗೆ ಆಹ್ವಾನ ನೀಡಿದೆ. ಟ್ವಿಟ್ಟರ್​​ನಲ್ಲಿ ತುಂಬಾ ಆ್ಯಕ್ಟೀವ್ ಆಗಿರುವ ಕಿಚ್ಚ ಸುದೀಪ್​ ಅಭಿನಯದ ಪೈಲ್ವಾನ್ ಸಿನಿಮಾದ ಕ್ರೇಜ್ ಕಂಡು ಬೆರಗಾಗಿರೋ ಟ್ವಿಟ್ಟರ್​ ಇಂಡಿಯಾ ಟೀಮ್, ಪೈಲ್ವಾನ್ ಚಿತ್ರದ ಪ್ರಮೋಷನ್​​ಗಾಗಿ ಕಿಚ್ಚ ಸುದೀಪ್​​ ಲೈವ್​ನಲ್ಲಿ‌‌‌ ಸೆಲೆಬ್ರಿಟಿ ಹಾಗೂ ಸಾಕಷ್ಟು ಅಭಿಮಾನಿಗಳ ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರಿಸಿದ್ದಾರೆ.

Kichcha Sudeep, ಕಿಚ್ಚ ಸುದೀಪ್

By

Published : Sep 9, 2019, 11:01 AM IST

ಪೈಲ್ವಾನ್ ಸಿನಿಮಾ ಹಲವು ಮೊದಲುಗಳಿಗೆ ಕಾರಣವಾಗುತ್ತಿದೆ. ಅದು ಸಿನಿಮಾವಾಗಿ ಆಗಿರಬಹುದು, ಮೇಕಿಂಗ್ ಆಗಿರಬಹುದು ಸುದೀಪ್ ಅವರ ವೃತ್ತಿ ಬದುಕಿನ ವಿಚಾರವೇ ಆಗಿರಬಹುದು. ಇದೀಗ ಮತ್ತೊಂದು ವಿಚಾರಕ್ಕೆ ಪೈಲ್ವಾನ್ ಸಿನಿಮಾ ಮತ್ತು ಸುದೀಪ್ ಹೊಸ ದಾಖಲೆಗೆ ನಾಂದಿ ಹಾಡ್ತಿದ್ದಾರೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದಿರುವ ಟ್ವಿಟ್ಟರ್​ ​ಇದೇ ಮೊದಲ ಬಾರಿಗೆ ಕನ್ನಡದ ಸ್ಟಾರ್ ನಟರೊಬ್ಬರಿಗೆ ತನ್ನ ಬ್ಲೂ ರೂಮ್​ಗೆ ಆಹ್ವಾನ ನೀಡಿದೆ. ಟ್ವಿಟ್ಟರ್​​ನಲ್ಲಿ ತುಂಬಾ ಆ್ಯಕ್ಟೀವ್ ಆಗಿರುವ ಕಿಚ್ಚ ಅಭಿನಯದ ಪೈಲ್ವಾನ್ ಸಿನಿಮಾದ ಕ್ರೇಜ್ ಕಂಡು ಬೆರಗಾಗಿದೆ ಟ್ವಿಟ್ಟರ್​ ಇಂಡಿಯಾ ಟೀಮ್. ಪೈಲ್ವಾನ್ ಚಿತ್ರದ ಪ್ರಮೋಷನ್​​ಗಾಗಿ ಕಿಚ್ಚ ಸುದೀಪ್​​ ಟ್ವಿಟ್ಟರ್​ ಲೈವ್​ನಲ್ಲಿ‌‌‌ ಸೆಲೆಬ್ರಿಟಿಗಳು ಹಾಗೂ ಸಾಕಷ್ಟು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಈ ಟ್ವಿಟರ್ ಬ್ಲೂ ರೂಮ್​ ಶೋನಲ್ಲಿ‌ ರಕ್ಷಿತ್ ಶೆಟ್ಟಿ, ನಿರ್ದೇಶಕ ಸುನಿ, ರಿಷಬ್ ಶೆಟ್ಟಿ ಹೀಗೆ ಹಲವು ನಟ, ನಟಿಯರು ಸುದೀಪ್​ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಇವರ ಜೊತೆಗೆ ಸುದೀಪ್​ ಆತ್ಮೀಯರಾದ ಪ್ರಿಯಾ ಸುದೀಪ್ 'ಯಾವಾಗ ಮನೆಗೆ ಬರ್ತೀರಾ' ಎಂದು ಪ್ರಶ್ನಿಸಿದ್ದಾರೆ. ಪ್ರಿಯಾ ಪ್ರಶ್ನೆಗೆ ಕಿಚ್ಚ ಸುದೀಪ್ ಬಹಳ ಪ್ರೀತಿಯಿಂದಲೇ ಉತ್ತರ ನೀಡಿದ್ದಾರೆ.

ಪೈಲ್ವಾನ್ ಸಿನಿಮಾ ಏಕಕಾಲದಲ್ಲಿ ಐದು ಭಾಷೆಯಲ್ಲಿ ಈ ವಾರ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಹಾಗಾಗಿ ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಪ್ರಿಯರಿಗೂ ಈ ಚಿತ್ರದ ಮೇಲೆ ವಿಶೇಷ ಕೂತೂಹಲ ಹುಟ್ಟಿಕೊಂಡಿದೆ. ಟ್ರೈಲರ್ ಮತ್ತು ಹಾಡುಗಳಿಂದ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ ಕಿಚ್ಚ ಸುದೀಪ್​, ಬಾಲಿವುಡ್​​ ನಟ ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಸುಶಾಂತ್ ಸಿನ್ಹಾ, ಕಬೀರ್ ದುಹಾನ್ ಸಿಂಗ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಕೃಷ್ಣ ನಿರ್ದೇಶನದಲ್ಲಿ ಆರ್​ಆರ್​ಆರ್​ ಮೋಷನ್ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಸ್ವಪ್ನ ಕೃಷ್ಣ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಕರುಣಾಕರ್​ ಅವರ ಛಾಯಾಗ್ರಹಣವಿದೆ. ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್​ವುಡ್​ ಹೀಗೆ ಪಂಚ ಭಾಷೆಯ ತಂತ್ರಜ್ಞರು ಮತ್ತು ಕಲಾವಿದರ ಸಂಗಮವಾಗಿರುವ ಪೈಲ್ವಾನ್ ಸಿನಿಮಾ ಇದೇ 12 ರಂದು ಪ್ರೇಕ್ಷಕರೆದುರಿಗೆ ಬರ್ತಿದೆ.

ABOUT THE AUTHOR

...view details