ಸ್ಟಾರ್ ವಾರ್ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಸ್ಟಾರ್ ನಟರು ಮಾಡುತ್ತಿರುವ ಟ್ವೀಟ್ಗಳು ಕೂಡ ಅಭಿಮಾನಿಗಳಲ್ಲಿ ಒಂದು ರೀತಿಯ ಆತಂಕ ಹಾಗೂ ಆಶ್ಚರ್ಯಗಳನ್ನು ಮೂಡಿಸುತ್ತಿವೆ.
ಸ್ಟಾರ್ ವಾರ್ಗೆ ಟ್ವಿಸ್ಟ್ ಕೊಟ್ಟ ಕಿಚ್ಚ ಸುದೀಪ್ ಟ್ವೀಟ್: ಏನಿದೆ ಗೊತ್ತಾ ಆ ಟ್ವೀಟ್ನಲ್ಲಿ...? - ನಟ ಸುದೀಪ್
ಇದೀಗ ಮತ್ತೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಮೇಲೊಬ್ಬ ಇದ್ದಾನೆ ಅನ್ನೋದು ಒಂದಡೆ, ನ್ಯಾಯ ಅನ್ನೋದು ಇನ್ನೊಂದೆಡೆ, ತಪ್ಪು ಮಾಡಿದವರು ಈ ಎರಡು ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾಧ್ಯಮ, ಚಿತ್ರರಂಗದಲ್ಲಿರುವ ನನ್ನ ಗೆಳೆಯರು ಹಾಗೂ ನನ್ನ ಎಲ್ಲಾ ಸ್ನೇಹಿತರು ತಮ್ಮ ದನಿಯೆತ್ತಿದಕ್ಕೆ ಧನ್ಯವಾದಗಳು ಎಂದಿರುವುದು ಕುತೂಹಲ ಕೆರಳಿಸಿದೆ.
ಹೌದು ಈ ಹಿಂದೆ ದರ್ಶನ್ ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರ ಬೇಡಿ ಎಂದು ವಾರ್ನಿಂಗ್ ಮಾಡಿದ್ದರು. ಆದ್ರೆ ಯಾರಿಗೆ ಎಂದು ಪ್ರಸ್ತಾಪ ಮಾಡಿರಲಿಲ್ಲ.
ನಿನ್ನೆ ಸುದೀಪ್ ಕೂಡ ಒಂದು ಟ್ವೀಟ್ ಮಾಡಿದ್ದು, ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂದು ಹೇಳಿದ್ದರು. ಇದೀಗ ಮತ್ತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಮೇಲೊಬ್ಬ ಇದ್ದಾನೆ ಅನ್ನೋದು ಒಂದಡೆ, ನ್ಯಾಯ ಅನ್ನೋದು ಇನ್ನೊಂದೆಡೆ, ತಪ್ಪು ಮಾಡಿದವರು ಈ ಎರಡು ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ... 😊🙏 ಮಾಧ್ಯಮ, ಚಿತ್ರರಂಗದಲ್ಲಿರುವ ನನ್ನ ಗೆಳೆಯರು ಹಾಗೂ ನನ್ನ ಎಲ್ಲ ಸ್ನೇಹಿತರು ತಮ್ಮ ದನಿಯೆತ್ತಿದಕ್ಕೆ ಧನ್ಯವಾದಗಳು ಎಂದಿರುವುದು ಕುತೂಹಲ ಕೆರಳಿಸಿದೆ.