ಕರ್ನಾಟಕ

karnataka

ETV Bharat / sitara

ಹಿರಿಯ ಪೋಷಕ ನಟ,‌ ನಟಿಯರ ಆರೋಗ್ಯ ವಿಚಾರಿಸಿದ ಕಿಚ್ಚ ಸುದೀಪ್! - Kicha Sudeep Charitable Trust latest news 2021

ಪೋಷಕ ನಟ ಅರವಿಂದ್, ಮೂಗುರು ಸುರೇಶ್, ಆರ್.ಟಿ ರಮಾ, ಆಶಾಲತಾ, ಪುಷ್ಟ ಸ್ವಾಮಿ, ಶೈಲಾ ಸುದರ್ಶನ್,‌ ಮಾಲತಿ ಮೈಸೂರು ಸೇರಿದಂತೆ ನೂರಕ್ಕೂ ಹೆಚ್ಚು ಕನ್ನಡ ಪೋಷಕ ಕಲಾವಿದರಿಗೆ ಪತ್ರದ ಮೂಲಕ ಕಿಚ್ಚ ಯೋಗ ಕ್ಷೇಮ ವಿಚಾರಿಸಿದ್ದಾರೆ‌.

kicha-sudeep-charitable-trust-distributed-healthy-food-kit
ಪೋಷಕ ಕಲಾವಿದರಿಗೆ ಫುಡ್​ ಕಿಟ್​ ವಿತರಣೆ

By

Published : May 19, 2021, 10:42 PM IST

ಕೊರೊನಾದಿಂದಾಗಿ ಕೂಲಿ ಕಾರ್ಮಿಕರು, ಜನ ಸಾಮಾನ್ಯರು ಒಂದು ಹೊತ್ತಿನ ಊಟಕ್ಕೆ ಕಷ್ಟ ಪಡುತ್ತಿದ್ದಾರೆ‌. ಇಂತಹ ಸಮಯದಲ್ಲಿ ಕೆಲ‌ ಸಿನಿಮಾ ತಾರೆಯರು, ಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಈ ಸಾಲಿನಲ್ಲಿ ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಕೂಡಾ ನಿಂತಿದೆ.

ಪೋಷಕ ಕಲಾವಿದರಿಗೆ ಫುಡ್​ ಕಿಟ್​ ವಿತರಣೆ

ಈಗಾಗಲೇ ಕೊರೊನಾ ವಾರಿಯರ್ಸ್​​ಗಳಿಗೆ, ಸೋಂಕಿತರಿಗೆ ಸುದೀಪ್ ಸ್ನೇಹ ಬಳಗ ಊಟ ಹಂಚೋ ಕೆಲಸ ಮಾಡ್ತಿದ್ದಾರೆ. ಇದೀಗ ಸ್ಯಾಂಡಲ್​ವುಡ್ ಹಿರಿಯ ಪೋಷಕ ನಟ ಮತ್ತು ನಟಿಯರ ಆರೋಗ್ಯ ವಿಚಾರಿಸಿ ಆರೋಗ್ಯಯುತ ಫುಡ್ ಕಿಟ್ ವಿತರಣೆ ಮಾಡಿದೆ.

ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಫುಡ್​ ಕಿಟ್​

ಈ ಫುಡ್ ಕಿಟ್​ನಲ್ಲಿ ಕಿಚ್ಚ ಸುದೀಪ್ ಅವರ ಒಂದು ಪತ್ರವಿದ್ದು, 'ನನ್ನ ಕುಟುಂಬದ ಹಿರಿಯರು ನೀವು, ನೀವೆಲ್ಲ ಹೇಗಿದ್ದಿರಿ ? ಪ್ರೀತಿಯಿಂದ ನಿಮ್ಮ ಕಿಚ್ಚ ಸುದೀಪ್​’ ಅನ್ನೋ ಸಾಲಿನ ಪತ್ರ ಬರೆದಿದ್ದಾರೆ.‌ ಪೋಷಕ ನಟ ಅರವಿಂದ್, ಮೂಗುರು ಸುರೇಶ್, ಆರ್ .ಟಿ ರಮಾ, ಆಶಾಲತಾ, ಪುಷ್ಟ ಸ್ವಾಮಿ, ಶೈಲಾ ಸುದರ್ಶನ್,‌ ಮಾಲತಿ ಮೈಸೂರು ಸೇರಿದಂತೆ ನೂರಕ್ಕೂ ಹೆಚ್ಚು ಕನ್ನಡ ಪೋಷಕ ಕಲಾವಿದರಿಗೆ ಪತ್ರದ ಮೂಲಕ ಕಿಚ್ಚ ಯೋಗ ಕ್ಷೇಮ ವಿಚಾರಿಸಿದ್ದಾರೆ‌. ಇದೀಗ ಕಿಚ್ಚ ಸುದೀಪ್​ ಅವರ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಫುಡ್​ ಕಿಟ್​

ಓದಿ:ಸಲಿಂಗಿ ಸಿನಿಮಾದಿಂದ ದೂರ ಉಳಿಯುವಂತೆ ನಿರ್ಮಾಪಕರಿಂದ ಎಚ್ಚರಿಕೆ ಅನ್ಶುಮಾನ್

ABOUT THE AUTHOR

...view details