ಕರ್ನಾಟಕ

karnataka

ETV Bharat / sitara

ಬಿಗ್​ಬಾಸ್​ ಶೋಗೆ ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ಎಷ್ಟು ಗೊತ್ತಾ? - kicha sudeep payment revealed

ಗಾಂಧಿನಗರದ ಪಂಡಿತರ ಪ್ರಕಾರ, ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರೋ ಕಿಚ್ಚ ಸುದೀಪ್ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಬರೋಬ್ಬರಿ 8 ರಿಂದ 10 ಕೋಟಿ ಎನ್ನಲಾಗಿದೆ. ಹಾಗಾದ್ರೆ ಬಿಗ್​ಬಾಸ್​ ಸೀಸನ್ 8ರಲ್ಲಿ ಅವರ ಸಂಭಾವನೆ ಸಾಮಾನ್ಯರ ಹುಬ್ಬೇರುವಂತೆ ಮಾಡುತ್ತೆ.

kicha-sudeep-big-boss-salary-revealed
ಸುದೀಪ್

By

Published : Feb 25, 2021, 11:18 PM IST

ಕನ್ನಡ ಅಲ್ಲದೇ ಸೌತ್ ಸಿನಿಮಾ‌ ಇಂಡಸ್ಟ್ರಿಯಲ್ಲಿಯೂ ತನ್ನದೇ ಛಾಪು ಮೂಡಿಸಿರೋ ನಟ ಕಿಚ್ಚ ಸುದೀಪ್, ಒಳ್ಳೆ ಹೈಟ್, ಒಳ್ಳೆ‌ ಪರ್ಸನಾಲಿಟಿ, ಖಡಕ್ ವಾಯ್ಸ್​ನಿಂದಲೇ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ನಡುವೆ ಬಿಗ್​ಬಾಸ್ ಶೋನಲ್ಲಿ ಮಿಂಚುತ್ತಿರುವ ಇವರ ಸಂಭಾವನೆ ಇದೀಗ ರಿವೀಲ್​ ಆಗಿದೆ.

ಬಿಗ್​ಬಾಸ್​ ಶೋಗೆ ಕಿಚ್ಚ ಸುದೀಪ್ ಪಡೆಯುವ ಸಂಭಾವನೆ ರಿವೀಲ್ ಮಾಡಿದ್ದಾರೆ

ಗಾಂಧಿನಗರದ ಪಂಡಿತರ ಪ್ರಕಾರ, ಸದ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಕಿಚ್ಚ ಸುದೀಪ್ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಬರೋಬ್ಬರಿ 8 ರಿಂದ 10 ಕೋಟಿ ಎನ್ನಲಾಗಿದೆ. ಕಳೆದ ಐದು ಬಿಗ್ ಬಾಸ್ ಶೋಗಳಿಗೆ ಪೈಲ್ವಾನ್ ಪಡೆದ ಸಂಭಾವನೆ ಬರೋಬ್ಬರಿ 25 ಕೋಟಿ ರೂಪಾಯಿ ಎನ್ನಲಾಗಿತ್ತು.

ಸದ್ಯ ಬಿಗ್​ಬಾಸ್​ ಸೀಸನ್ 8ರಲ್ಲಿ ಪಡೆಯುತ್ತಿರುವ ಸಂಭಾವನೆ ಬಗ್ಗೆ ಉತ್ತರ ಕೊಟ್ಟಿರುವ ಅವರು, ಕಾಂಟೆಸ್ಟ್​ಗಳಿಗಿಂತ ಮೂರು ಪಟ್ಟು ಜಾಸ್ತಿ ಇದೆ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ.

ABOUT THE AUTHOR

...view details