ಕರ್ನಾಟಕ

karnataka

ETV Bharat / sitara

ಇದು ಮಾಮೂಲಿ ಸ್ಟೈಲ್​ ಅಲ್ಲ.. ಸಲ್ಲು-ಸುದೀಪ್‌ ದಬ್ಬಾಂಗ್​ ಸ್ಟೈಲ್​​​.. - kicha and salman khan different look

ಸ್ಟಾರ್ಸ್​​ ಸ್ಪೋರ್ಟ್ ಪ್ರೀ ಶೋನಲ್ಲಿ ಮಾತನಾಡಿರುವ ಸಲ್ಮಾನ್​ ಖಾನ್​, ಕ್ರಿಕೆಟ್​​ನಲ್ಲಿ ನನ್ನ ಫೆವರೇಟ್​​ ಅಂದ್ರೆ ಎಂಎಸ್​​ ಧೋನಿ ಎಂದು ಹೇಳಿಕೊಂಡಿದ್ದಾರೆ. ಸದ್ಯ ಕಿಚ್ಚ ಹಾಕಿರುವ ಫೋಟೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭರಪೂರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

kicha and salman khan different look
ಇದು ಮಾಮೂಲಿ ಸ್ಟೈಲ್​ ಅಲ್ಲ ಸ್ವಾಮಿ, ದಬ್ಬಾಂಗ್​ ಸ್ಟೈಲ್​​​

By

Published : Dec 15, 2019, 3:51 PM IST

ಸಲ್ಮಾನ್​ ಖಾನ್​ ಮತ್ತು ಕಿಚ್ಚ ಸುದೀಪ್​ ಮುಖಾಮುಖಿಯಾಗಿ ತೊಡೆ ತಟ್ಟಿರುವ ಸಿನಿಮಾ ದಬ್ಬಾಂಗ್​​​-3. ಈ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಪೊಲೀಸ್​​ ಪಾತ್ರ ನಿರ್ವಹಿಸಿದ್ರೆ, ಕಿಚ್ಚ ಸುದೀಪ್​ ವಿಲನ್​ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೀಗ ಸುದೀಪ್​ ಮತ್ತು ಸಲ್ಮಾನ್​ ಖಾನ್​ ದಬ್ಬಾಂಗ್​​-3 ಸಿನಿಮಾ ಪ್ರಮೋಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಭಾರತ ಮತ್ತು ವೆಸ್ಟ್​ ಇಂಡೀಸ್​​ ಕ್ರಿಕೆಟ್​​ ಬಗ್ಗೆ ನಡೆದ ಸ್ಟಾರ್ಸ್​​ ಸ್ಪೋರ್ಟ್ಸ್‌ ಚಾನೆಲ್​​​ನ ಪ್ರೀ-ಶೋನಲ್ಲಿ ಭಾಗಿಯಾಗಿದ್ರು.

ಈ ವೇಳೆ ದಬ್ಬಾಂಗ್​​ ಸಿನಿಮಾದಲ್ಲಿ ಚುಲ್​ ಬುಲ್​ ಪಾಂಡೆ ಹಾಕುವ ಕೂಲಿಂಗ್​ ಗ್ಲಾಸ್​​ ಮಾದರಿಯಲ್ಲೇ ಸುದೀಪ್​ ಮತ್ತು ಸಲ್ಮಾನ್​ ಖಾನ್​ ಒಂದೇ ರೀತಿಯ ಕೂಲಿಂಗ್‌ ಗ್ಲಾಸ್ ಹಾಕಿದ್ದಾರೆ. ಅಷ್ಟೇ ಅಲ್ಲ, ಕನ್ನಡಕವನ್ನು ಟಿ-ಶರ್ಟ್​​ನ ಹಿಂಬದಿಗೆ ಹಾಕಿ ಕ್ಯಾಮೆರಾಗೆ ಪೋಸ್​​ ಕೊಟ್ಟಿದ್ದಾರೆ. ಈ ಫೋಟೋವನ್ನು ಸುದೀಪ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​​ ಮಾಡಿದ್ದು, ಸ್ಟಾರ್ಸ್​ ಸ್ಟೋರ್ಟಸ್‌​​​ನಲ್ಲಿ ಫನ್​ ಟೈಮ್​ ಎಂದು ಬರೆದುಕೊಂಡಿದ್ದಾರೆ.

ಸ್ಟಾರ್ಸ್​​ ಸ್ಪೋರ್ಟ್ ಪ್ರೀ ಶೋನಲ್ಲಿ ಮಾತನಾಡಿರುವ ಸಲ್ಮಾನ್​ ಖಾನ್​, ಕ್ರಿಕೆಟ್​​ನಲ್ಲಿ ನನ್ನ ಫೆವರೇಟ್​​ ಅಂದ್ರೆ ಎಂಎಸ್​​ ಧೋನಿ ಎಂದು ಹೇಳಿಕೊಂಡಿದ್ದಾರೆ. ಸದ್ಯ ಕಿಚ್ಚ ಹಾಕಿರುವ ಫೋಟೋಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭರಪೂರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

For All Latest Updates

TAGGED:

ABOUT THE AUTHOR

...view details