ಕರ್ನಾಟಕ

karnataka

ETV Bharat / sitara

ಇಂದು ಪಡ್ಡೆಹುಲಿ ರಿಲೀಸ್​​​​: ಚಿತ್ರತಂಡಕ್ಕೆ ವಿಶ್​​ ಮಾಡಿದ ಕಿಚ್ಚ - undefined

ಇಂದು ರಾಜ್ಯಾದ್ಯಂತ 'ಪಡ್ಡೆಹುಲಿ' ಬಿಡುಗಡೆಯಾಗುತ್ತಿದ್ದು, ಕಿಚ್ಚ ಸುದೀಪ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಸಿನಿಮಾವನ್ನು ಗುರುದೇಶಪಾಂಡೆ ನಿರ್ದೇಶಿಸಿದ್ದಾರೆ.

ಸುದೀಪ್​

By

Published : Apr 19, 2019, 12:15 PM IST

ನಿರ್ಮಾಪಕ ಕೆ.ಮಂಜು ಪುತ್ರ ಚೊಚ್ಚಲ ಸಿನಿಮಾ 'ಪಡ್ಡೆಹುಲಿ' ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಗುರು ದೇಶಪಾಂಡೆ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇನ್ನು ಇದು ಶ್ರೇಯಸ್ ಮೊದಲ ಸಿನಿಮಾವಾಗಿರುವುದರಿಂದ ಎಲ್ಲರೂ ಅವರಿಗೆ ವಿಶ್ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್ ಕೂಡಾ ಶ್ರೇಯಸ್​​​ಗೆ ಶುಭ ಕೋರಿದ್ದಾರೆ. 'ನಿಮ್ಮ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ನರ್ವಸ್ ಆಗಿರಬಹುದು, ಇದೊಂದು ಗ್ರೇಟ್ ಫೀಲಿಂಗ್, ಎಂಜಾಯ್ ಮಾಡಿ. ಕೆ. ಮಂಜು ಅವರೇ ನೀವೂ ಕೂಡಾ ಟೆನ್ಷನ್​​​ನಲ್ಲಿರಬಹುದು.

ಶ್ರೇಯಸ್, ನಿಶ್ವಿಕಾ ನಾಯ್ಡು

ನನ್ನ ಮೊದಲ ಸಿನಿಮಾ ಬಿಡುಗಡೆಯಾಗುವಾಗ ನನಗೂ ಇದೇ ರೀತಿ ಅನುಭವ ಆಗಿತ್ತು. ಸೋಲು-ಗೆಲುವನ್ನು ಬಹಳ ಹತ್ತಿರದಿಂದ ನೋಡಿರುವವರು ನೀವು. ನಿಮಗೆ ಯಾವುದೂ ಹೊಸದಲ್ಲ. ಇಡೀ ಚಿತ್ರತಂಡಕ್ಕೆ ಗುಡ್​ ಲಕ್' ಎಂದು ಕಿಚ್ಚ ವಿಶ್ ಮಾಡಿದ್ದಾರೆ. ಸಿನಿಮಾ ಮುಹೂರ್ತದ ವೇಳೆಯೂ ಸುದೀಪ್ ಕ್ಲ್ಯಾಪ್ ಮಾಡಿ ಚಿತ್ತಕ್ಕೆ ಶುಭ ಕೋರಿದ್ದರು.

ಚಿತ್ರತಂಡಕ್ಕೆ ಗುಡ್​ಲಕ್ ಹೇಳಿದ ಕಿಚ್ಚ

ಯೂತ್ ಲವ್ ಸ್ಟೋರಿ ಹಾಗೂ ಮ್ಯೂಸಿಕಲ್​ ಕಥೆ ಇರುವ ಸಿನಿಮಾವನ್ನು ತೇಜಸ್ವಿನಿ ಎಂಟರ್​​ಟೈನ್ಮೆಂಟ್ ಬ್ಯಾನರ್ ಅಡಿ ಎಂ.ರಮೇಶ್ ರೆಡ್ಡಿ ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ನಿಶ್ವಿಕಾ ನಾಯ್ಡು ಶ್ರೇಯಸ್​​​ಗೆ ಜೊತೆಯಾಗಿ ನಟಿಸಿದ್ದಾರೆ. ಪುನೀತ್ ರಾಜ್​​ಕುಮಾರ್ ಹಾಗೂ ರಕ್ಷಿತ್ ಶೆಟ್ಟಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.

'ಪಡ್ಡೆಹುಲಿ' ಗೆ ಕ್ಲ್ಯಾಪ್ ಮಾಡಿದ್ದ ಕಿಚ್ಚ

For All Latest Updates

TAGGED:

ABOUT THE AUTHOR

...view details