ಕರ್ನಾಟಕ

karnataka

ETV Bharat / sitara

ಇನ್ಮುಂದೆ ಮಲ್ಟಿ ಸ್ಟಾರ್ ಸಿನಿಮಾ ಮಾಡಲ್ಲ: ಕಿಚ್ಚ ಸುದೀಪ್ - undefined

ಕಿಚ್ಚ ಸುದೀಪ್ ಮಲ್ಟಿ ಟ್ಯಾಲೆಂಟ್‌ ಇರುವ ಅಭಿನಯ ಚಕ್ರವರ್ತಿ. ನಿರ್ಮಾಪಕರು ಹಾಕಿದ ದುಡ್ಡಿಗೆ ರಿಟರ್ನ್ಸ್ ತಂದು ಕೊಡುವ ಪ್ರತಿಭಾವಂತ ನಟ. ಸದ್ಯ ಪೈಲ್ವಾನ್ ಹ್ಯಾಂಗೋವರ್​​ನಲ್ಲಿರುವ ಕನ್ನಡದ ಬಚ್ಚನ್ ಈ ಚಿತ್ರದ ಬಗ್ಗೆ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.

ಸುದೀಪ್​

By

Published : Jul 15, 2019, 10:13 PM IST

ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಇಂಟ್ರಸ್ಟ್ರಿಂಗ್ ವಿಷಯಗಳ ಜತೆಗೆ ಅಭಿನಯ ಚಕ್ರವರ್ತಿ ಮತ್ತೊಂದು ಅಚ್ಚರಿ ವಿಷಯ ಬಿಚ್ಚಿಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರ್ ಸಿನಿಮಾಗಳ ಟ್ರೆಂಡ್ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸುದೀಪ್, ತಾವು ಇಂತಹ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದಿದ್ದಾರೆ. ಸ್ಯಾಂಡಲ್​​ವುಡ್ ಬಾದ್​ ಷಾ ಯಾಕೆ ಈ ನಿರ್ಧಾರಕ್ಕೆ ಬಂದ್ರು ಅನ್ನೋದಿಕ್ಕೆ ಕಾರಣ 'ದಿ ವಿಲನ್' ಸಿನಿಮಾ ರಿಲೀಸ್ ಬಳಿಕ ಉಂಟಾದ ಕಹಿ‌ ಅನುಭವಗಳು.

ಪೈಲ್ವಾನ್ ಮಾಧ್ಯಮಗೋಷ್ಟಿಯಲ್ಲಿ ಸುದೀಪ್ ಮಾತು

'ದಿ ವಿಲನ್' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಹಾಗೂ ಸುದೀಪ್ ಫಸ್ಟ್ ಟೈಮ್ ಸ್ಕ್ರೀನ್ ಹಂಚಿಕೊಂಡಿದ್ರು. ಆದ್ರೆ, ಈ ಸಿನಿಮಾದಲ್ಲಿ ತಮ್ಮ ನೆಚ್ಚಿನ ನಟನ ಪಾತ್ರಕ್ಕೆ ಅಷ್ಟೊಂದು ಸ್ಕೋಪ್ ಇಲ್ಲಾ ಅಂತಾ ಶಿವರಾಜ್ ಕುಮಾರ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದರು. ಇದ್ರ ಜೊತೆಗೆ ಈ ಉಭಯ ತಾರೆಯರ ಅಭಿಮಾನಿಗಳು ನಮ್ಮ ಬಾಸ್ ಗ್ರೇಟ್, ನಮ್ಮ ಅಣ್ಣ ಗ್ರೇಟ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದರು. ಇದು ಸುದೀಪ್​ಗೆ ನೋವುಂಟು ಮಾಡಿದೆ ಅನ್ನಿಸುತ್ತೆ. ಇದೇ ಕಾರಣಕ್ಕೆ ಇನ್ಮುಂದೆ ಬಹುತಾರಾಗಣ ಸಿನಿಮಾ ಮಾಡಲ್ಲ ಅಂತಾ ಅವರು ಹೇಳಿದ್ದಾರೆ. ಹಾಗೇ ಬೇರಯವ್ರ ಸಿನಿಮಾಗಳಲ್ಲಿ‌ ತಮ್ಮ ಪಾತ್ರಕ್ಕೆ‌ ಸ್ಕೋಪ್ ಇದ್ರೆ ಗೆಸ್ಟ್ ರೋಲ್​​ನಲ್ಲಿ ಆಕ್ಟ್ ಮಾಡ್ತಾರಂತೆ.

For All Latest Updates

TAGGED:

ABOUT THE AUTHOR

...view details