ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ನಡುವೆ ಒಳ್ಳೆಯ ಬಾಂಡಿಂಗ್ ಇದೆ. ಈ ತಾರೆಯರ ನಡುವೆ ಸಹೋದರರ ಬಾಂಧವ್ಯ ಬೆಸೆದಿದೆ. ಅದು ಎಷ್ಟರ ಮಟ್ಟಿಗೆಯಂದರೆ, ಪ್ರೇಮ್ ಬಗ್ಗೆ ಯಾರು ಏನೇ ಹೇಳಿದ್ರು ಪರವಾಗಿಲ್ಲ ನಾನೂ ಅವನ ಜತೆ ಇರುತ್ತೇನೆ ಎಂದು ಸ್ವತಃ ಮಾಣಿಕ್ಯನೇ ಹೇಳಿಕೊಂಡಿದ್ದಾರೆ.
ಈ ಪ್ರಪಂಚದಲ್ಲಿ ಯಾರು ಏನೇ ಹೇಳಿದ್ರೂ ನಾನು ಅವನ ಪರ ನಿಲ್ಲುತ್ತೇನೆ! - ಸಹೋದರರ ಬಾಂಧವ್ಯ
ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರ 'ದಿ ವಿಲನ್' ಸಿನಿಮಾ ಜೋಗಿ ಪ್ರೇಮ್ ನಿರ್ದೇಶಿಸಿದ್ದರು. ಇವರ ವರ್ಕ್ ಹಾಗೂ ವ್ಯಕ್ತಿತ್ವವನ್ನು ಅತೀವವಾಗಿ ಮೆಚ್ಚಿಕೊಂಡಿರುವ ಸುದೀಪ್, ಪ್ರೇಮ್ ಬಗ್ಗೆ ಗುಣಗಾನ ಮಾಡಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಎದುರಾದ ಪ್ರಶ್ನೆಗೆ ಕಿಚ್ಚನ ಮನದಾಳದ ಮಾತುಗಳು ಉತ್ತರದ ರೂಪದಲ್ಲಿ ಹೊರಬಂದಿವೆ. ಹೆಬ್ಬುಲಿ ನಿರ್ದೇಶಕ ಕೃಷ್ಣ ಹಾಗೂ ಪ್ರೇಮ್ ಅವರು ನನ್ನ ಸಹೋದರರು ಎಂದಿರುವ ಸ್ಯಾಂಡಲ್ವುಡ್ ರನ್ನ, 'ಅದರಲ್ಲೂ ವಿಶೇಷವಾಗಿ ಪ್ರೇಮ್ ನನ್ನ ಕಿರಿಯ ಸಹೋದರ. ಈ ಪ್ರಪಂಚದಲ್ಲಿ ಅವನ ಬಗ್ಗೆ ಯಾರು ಏನೇ ಹೇಳಲಿ, ಅವನು ನನ್ನ ಸಹೋದರನೇ. ಅವನ ಬಗ್ಗೆ ಯಾರು ಎಷ್ಟೇ ಕಾಮೆಂಟ್ ಮಾಡಿದ್ರೂ ಅವನ ಪರ ನಾನು ನಿಂತಿರುತ್ತೇನೆ. ಇದು ಸತ್ಯ!' ಎಂದು ನುಡಿದಿದ್ದಾರೆ.
ರನ್ನನ ಈ ಮಾಣಿಕ್ಯದ ಮಾತುಗಳಿಗೆ ಪ್ರೇಮ್ ಭಾವುಕತೆಯಲ್ಲಿ ಕರಗಿ ಹೋಗಿದ್ದಾರೆ. ಕಿಚ್ಚನ ಈ ಪ್ರೀತಿಯನ್ನು ಅಕ್ಷರಗಳಲ್ಲಿ ಕಟ್ಟಿಕೊಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನ ಹೃದಯಕ್ಕೆ ನೀವು ಯಾವಾಗಲೂ ಹತ್ತಿರವಾಗೇ ಇರುತ್ತೀರಿ, love you ಎಂದು ಟ್ವೀಟ್ ಮಾಡಿದ್ದಾರೆ.